ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಕೇರಳ ಮುಖ್ಯಮಂತ್ರಿ ಸತೀಶನ್ ಭೇಟಿ ನೀಡಿ ದೇವರ ದರ್ಶನ ಪಡೆದರು
Published on:
Copied
Follow Us
ಬೈಂದೂರು: ಕೇರಳ ರಾಜ್ಯದ ಮುಖ್ಯಮಂತ್ರಿ ಸತೀಶನ್ ಶನಿವಾರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ದೇವಳದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಕೆ. ಬಾಬು ಶೆಟ್ಟಿ, ಸದಸ್ಯರಾದ ರಘುರಾಮ ದೇವಾಡಿಗ ಆಲೂರು , ಸುರೇಂದ್ರ ಶೆಟ್ಟಿ, ಸುಧಾ, ಧನಾಕ್ಷಿ ವಿಶ್ವನಾಥ್, ಮಹಾಲಿಂಗ ನಾಯಕ್ ಮತ್ತಿತರರು ಇದ್ದರು.
ದೇವಳದ ಅರ್ಚಕ ಡಾ.ಕೆ ಏನ್ ನರಸಿಂಹ ಅಡಿಗ ಹಾಗೂ ಕೆಎನ್ ಸುಬ್ರಮಣ್ಯ ಅಡಿಗ ನೇತೃತ್ವದಲ್ಲಿ ಮುಖ್ಯಮಂತ್ರಿಗಳು ವಿಶೇಷ ಪೂಜೆ ಸಲ್ಲಿಸಿದರು ದೇವಳದ ವತಿಯಿಂದ ಮುಖ್ಯಮಂತ್ರಿ ಸತೀಶನ್ ಅವರನ್ನು ಸನ್ಮಾನಿಸಲಾಯಿತು.