ತ್ರಿಪದಿಯಿಂದಲೇ ಜೀವನ ಮೌಲ್ಯ ಸಾರಿದ ಕವಿ

ಉಡುಪಿಯ ಕಡಿಯಾಳಿ ಆಯೋಜಿಸಿದ್ದ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಜಗದೀಶ್​ ನಾಯಕ್​ ಮಾತನಾಡಿದರು. ಶ್ರೀನಿವಾಸ್​ ರಾವ್​ ಕೆ., ದೇವೇಂದ್ರ ನಾಯಕ್​ ಇದ್ದರು.
ಉಡುಪಿಯ ಕಡಿಯಾಳಿ ಆಯೋಜಿಸಿದ್ದ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಜಗದೀಶ್​ ನಾಯಕ್​ ಮಾತನಾಡಿದರು. ಶ್ರೀನಿವಾಸ್​ ರಾವ್​ ಕೆ., ದೇವೇಂದ್ರ ನಾಯಕ್​ ಇದ್ದರು.
Published on

* ಶ್ರೀನಿವಾಸ್​ ರಾವ್​ ಕೆ. ಅನಿಸಿಕೆ

* ಸರ್ವಜ್ಞ ಜಯಂತಿ ಆಚರಣೆ

ಉಡುಪಿ: ಸರ್ವಜ್ಞ ಕವಿಯು ಕನ್ನಡ ನಾಡಿನಲ್ಲಿ ಏಕಾಂಗಿಯಾಗಿ ಸಂಚರಿಸುತ್ತ, ತ್ರಿಪದಿಗಳ ಮೂಲಕವೇ ಜನರಿಗೆ ಜೀವನದ ಮೌಲ್ಯಗಳ ಸಂದೇಶ ನೀಡಿದ್ದಾನೆ. ಸರ್ವಜ್ಞನ ವಚನಗಳು ಇಂದಿಗೂ ದಾರಿದೀಪವಾಗಿದ್ದು, ಆತ ಸಾರ್ವಕಾಲಿಕ ಶ್ರೇಷ್ಠ ಕವಿಯಾಗಿದ್ದಾನೆ ಎಂದು ಸಮಾನ ಮನಸ್ಕ ಕನ್ನಡಿಗರ ವೇದಿಕೆಯ ಅಧ್ಯಕ್ಷ ಶ್ರೀನಿವಾಸ್​ ರಾವ್​ ಕೆ. ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿಯ ಕಡಿಯಾಳಿಯಲ್ಲಿರುವ ಯು.ಕಮಲಾಬಾಯಿ ಪ್ರೌಢಶಾಲೆಯಲ್ಲಿ ಸಮಾನ ಮನಸ್ಕ ಕನ್ನಡಿಗರ ವೇದಿಕೆಯಿಂದ ಶುಕ್ರವಾರ (ಫೆ.20) ಆಯೋಜಿಸಿದ್ದ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ನೈತಿಕ ಜೀವನದ ಪಾಠ

ಶಿಕ್ಷಕಿ ಮುರುಗೇಶ್ವರಿ ಮಾತನಾಡಿ, 'ಆಡು ಮುಟ್ಟದ ಸೊಪ್ಪಿಲ್ಲ ಸರ್ವಜ್ಞ ಬರೆಯದ ವಚನವಿಲ್ಲ' ಎಂಬ ಗಾದೆ ಮಾತೇ ಸರ್ವಜ್ಞ ಎಂತಹ ಜ್ಞಾನಿಯಾಗಿದ್ದ ಎನ್ನುವುದಕ್ಕೆ ಸಾಕ್ಷಿ. ಸರ್ವಜ್ಞನ ದೇಶ ಕಾಲದ ಕುರಿತು ಮಾಹಿತಿ ನೀಡಿ, ಸುಮಾರು ಏಳು ಕೋಟಿಗಿಂತ ಹೆಚ್ಚು ವಚನ ಬರೆದಿದ್ದಾಗಿ ತನ್ನ ವಚನದಲ್ಲಿಯೇ ಸರ್ವಜ್ಞ ಹೇಳಿದ್ದಾನೆ. ಅವುಗಳಲ್ಲಿ ಕೆಲವು ಮಾತ್ರ ದೊರೆತಿವೆ. ತ್ರಿಪದಿಗಳ ಮೂಲಕವೇ ಜನರಿಗೆ ನೈತಿಕ ಜೀವನದ ಪಾಠ ಮಾಡಿದ್ದಾನೆ ಎಂದರು.
ಮುಖ್ಯ ಶಿಕ್ಷಕ ಜಗದೀಶ್​ ನಾಯಕ್​ ಹಾಗೂ ಶಿಕ್ಷಕ ದೇವೇಂದ್ರ ನಾಯಕ್​ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅನುರಾಧಾ ಜಿ.ಎಸ್​., ಸುರೇಶ್​ ಡಿ., ಉಷಾ, ಲಕ್ಷ್ಮೀ, ವಿಜಯಲಕ್ಷ್ಮೀ, ಶ್ರೀದೇವಿ, ಸುಚಿತ್ರಾ, ಧನ್ಯಶ್ರೀ, ಶ್ರೀನಿವಾಸ್​ ಡಿ, ಸುನೀತಾ, ಸಹನಾ, ಉಮೇಶ್​ ಹಾಗೂ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net