ಕಾಸರಗೋಡು ಕನ್ನಡಿಗರಿಂದ ಕೇರಳ ಮುಖ್ಯಮಂತ್ರಿ ಭೇಟಿ

 ಕೇರಳಂ ಮುಖ್ಯಮಂತ್ರಿ ವಿ.ಡಿ.ಸತೀಶನ್ ಅವರನ್ನು ಕಾಸರಗೋಡಿನ ಕನ್ನಡಿಗರ ನಿಯೋಗ ತಿರುವನಂತಪುರದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿತು. ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಮೊದಲಾದವರಿದ್ದರು.
ಕೇರಳಂ ಮುಖ್ಯಮಂತ್ರಿ ವಿ.ಡಿ.ಸತೀಶನ್ ಅವರನ್ನು ಕಾಸರಗೋಡಿನ ಕನ್ನಡಿಗರ ನಿಯೋಗ ತಿರುವನಂತಪುರದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿತು. ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಮೊದಲಾದವರಿದ್ದರು.
Published on
ಕಾಸರಗೋಡು: ಕೇರಳಂ ಸರ್ಕಾರ ಮಂಡಿಸಿರುವ ಮಲಯಾಳ ಭಾಷಾ ಮಸೂದೆಯಲ್ಲಿ ಅಗತ್ಯ ತಿದ್ದುಪಡಿ ತರುವ ಮೂಲಕ ಗಡಿನಾಡು ಕನ್ನಡಿಗರ ಮೇಲೆ ಮಲಯಾಳ ಹೇರಿಕೆ ಮಾಡದಂತೆ ಕಾಸರಗೋಡಿನ ಕನ್ನಡಿಗರ ನಿಯೋಗ ಮುಖ್ಯಮಂತ್ರಿ ವಿ.ಡಿ.ಸತೀಶನ್ ಅವರನ್ನು ತಿರುವನಂತಪುರದಲ್ಲಿ ಗುರುವಾರ ಭೇಟಿ ಮಾಡಿ ಮನವಿ ಸಲ್ಲಿಸಿತು.
ಶಾಸಕರಾದ ಎ.ಕೆ.ಎಂ.ಅಶ್ರಫ್, ಕಲ್ಲಟ್ರ ಮಹೀನ್ ಹಾಜಿ, ಕೆ.ನೀಲಕಂಠನ್ ಹಾಗೂ ಸಂದೀಪ್ ವಾರಿಯರ್ ಜತೆಗಿದ್ದರು. ಕರ್ನಾಟಕ ಸಮಿತಿಯ ಅಧ್ಯಕ್ಷ ಮುರಳೀಧರ ಬಳ್ಳುಕರಾಯ, ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟತ್ತೋಡಿ, ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ, ವಕೀಲ ಸುಬ್ಬಯ್ಯ ರೈ, ನಿವೃತ್ತ ಜಿಲ್ಲಾ ಶಿಕ್ಷಣಾಧಿಕಾರಿ ಹಾಗೂ ವಕೀಲ ಎನ್.ಕೆ.ಮೋಹನದಾಸ್, ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ಶಂಕರನಾರಾಯಣ ಭಟ್, ಕರ್ನಾಟಕ ಗಡಿ ಪ್ರಾಧಿಕಾರದ ಸದಸ್ಯ ಅಬ್ದುಲ್ ರಹಿಮಾನ್ ಸುಬ್ಬಯ್ಯ ಕಟ್ಟೆ ಹಾಗೂ ಪಿ.ಎಸ್.ಸಿ. ನಿವೃತ್ತ ಡೆಪ್ಯುಟಿ ಡೈರೆಕ್ಟರ್ ಗಣೇಶ್ ಪ್ರಸಾದ್ ನೇತೃತ್ವದ ನಿಯೋಗ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಸಚಿವರಾದ ರಮೇಶ್ ಚೆನ್ನಿತ್ತಲ, ಪಿ.ಕೆ.ಕುಞೌಲಿಕುಟ್ಟಿ, ಪಿ.ಸಿ.ವಿಷ್ಣುನಾಥ್, ಸನ್ನಿ ಜೋಸೆಫ್, ಸಂಸುದ್ದೀನ್, ಬಿಂದು ಕೃಷ್ಣನ್, ಡೆಪ್ಯುಟಿ ಸ್ಪೀಕರ್ ಶಾನಿ ಮೋಲ್ ಉಸ್ಮಾನ್ ಹಾಗೂ ಶಾಸಕರಾದ ರಾಜೀವ್ ಚಂದ್ರಶೇಖರ್, ಚಾಂಡಿ ಉಮ್ಮನ್, ಕಾಞಂಗಾಡ್ ಶಾಸಕ ಗೋವಿಂದನ್ ಪಳ್ಳಿಕಾಪಿಲ್ ಒಳಗೊಂಡಂತೆ ಪ್ರಮುಖ ಜನಪ್ರತಿನಿಧಿಗಳನ್ನು ಭೇಟಿ ಮಾಡಿ ಪ್ರತ್ಯೇಕ ಮನವಿ ಸಲ್ಲಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net