34 ನೆಕ್ಕಿಲಾಡಿ ಗ್ರಾಮದ ಕರುವೇಲು ಬಳಿ ಶಾಂತಿನಗರ, ಬಿಳಿಯೂರು, ಹತ್ತುಕಳಸೆ ಪ್ರದೇಶಕ್ಕೆ ಸಂಪರ್ಕಿಸುವ ರಸ್ತೆಗೆ ಹೆದ್ದಾರಿಯಿಂದ ಸಂಪರ್ಕ ಸಾಧಿಸುವ ಸರ್ವೀಸ್ ರಸ್ತೆ ಕಾಮಗಾರಿ ನಡೆಸದೆ ಗುತ್ತಿಗೆದಾರರು ನಿರ್ಲಕ್ಷೃವಹಿಸಿದ್ದರು. ಇದರಿಂದ ಕೆರಳಿದ ಸ್ಥಳೀಯ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ವೇಳೆ ನಿಗದಿತ ಅವಧಿಯೊಳಗೆ ಸರ್ವೀಸ್ ರಸ್ತೆ ನಿರ್ಮಿಸಿಕೊಡುವ ಭರವಸೆ ನೀಡಿದರಾದರೂ ಬಿಳಿಯೂರು ಸಂಪರ್ಕಿಸುವ ಹತ್ತುಕಳಸೆ ರಸ್ತೆಗೆ ಸಂಪರ್ಕ ರಸ್ತೆ ನಿರ್ಮಿಸಲು ಸ್ಥಳೀಯ ನಿವಾಸಿಯೊಬ್ಬರು ತಕರಾರರು ತೆಗೆದಿದ್ದರು.