

ಬಂಟ್ವಾಳ:
ಕರ್ಣಾಟಕ ಬ್ಯಾಂಕ್ ಸಿಎಸ್‌ಆರ್ ನಿಧಿಯಿಂದ ಸಾರ್ವಜನಿಕರಿಗೆ ಉಪಯೋಗವಾಗುವ ಕೆಲಸಗಳಿಗೆ ನೆರವು ನೀಡಲಾಗುತ್ತಿದೆ. ಜನರಿಂದ ಬಂದ ದುಡ್ಡನ್ನು ಜನರಿಗೋಸ್ಕರ ವಿನಿಯೋಗಿಸುತ್ತಿದ್ದೇವೆ. ಈ ವರ್ಷ ಗಮನಾರ್ಹ ಲಾಭ ಪಡೆದಿದ್ದು, ಬ್ಯಾಂಕ್ ಪ್ರಗತಿಯತ್ತ ಮುನ್ನಡೆದಿದೆ ಎಂದು ಕರ್ಣಾಟಕ ಬ್ಯಾಂಕ್ ಮಂಗಳೂರು ವಲಯದ ಮುಖ್ಯಸ್ಥ, ಮುಖ್ಯ ಪ್ರಬಂಧಕ ಲಕ್ಷ್ಮೀನಾರಾಯಣ ಹೇಳಿದರು.