ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಮಾತನಾಡಿ, ಬಿಎಲ್‌ಒಗಳಿಗೆ ವ್ಯಾಪಿಂಗ್ ಕಂಪ್ಲೀಷನ್, ಎಲಿಮಿನೇಷನ್ ಫಾರಂ ಭರ್ತಿ ಹಾಗೂ ಕ್ಲೈಮ್ ಆ್ಯಂಡ್ ಅಬ್ಜೆಕ್ಷನ್ ಅವಧಿ ಎಂಬ ಮೂರು ಪ್ರಮುಖ ಹಂತಗಳಿರುತ್ತವೆ. ಬಿಎಲ್‌ಒ ಮತ್ತು ಬಿಎಲ್‌ಎಗಳ ನಡುವೆ ಸೂಕ್ತ ಸಮನ್ವಯ ಸಾಧಿಸುವುದು ಮುಖ್ಯವಾಗಿದೆ. ಮತದಾರರ ಪಟ್ಟಿ ಕ್ಲೀನ್ ಆಗಿದ್ದರೆ ಅದು ಪ್ರಜಾಪ್ರಭುತ್ವಕ್ಕೆ ಒಳಿತು. ಯಾವುದೇ ಒಬ್ಬ ಅರ್ಹ ಮತದಾರ ಹೊರಗುಳಿಯಬಾರದು ಮತ್ತು ಅನರ್ಹ ವ್ಯಕ್ತಿ ಪಟ್ಟಿಯೊಳಗೆ ಸೇರಬಾರದು ಎಂದು ಸ್ಪಷ್ಟಪಡಿಸಿದರು.