ಅನುಭವದಿಂದ ಸಾಹಿತ್ಯ ಕಟ್ಟಿದ ಕಾರಂತ, ಸೋಮೇಶ್ವರ

 ದಿ.ಅಮೃತ ಸೋಮೇಶ್ವರ ಸಂಸ್ಕರಣಾ ಕಾರ್ಯಕ್ರಮವನ್ನು ಹಾವೇರಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಕೆ.ಚಿನ್ನಪ್ಪಗೌಡ ಉದ್ಘಾಟಿಸಿದರು. ಮಾಜಿ ಕೆ.ಶಾಸಕ ಜಯರಾಮ ಶೆಟ್ಟಿ, ಸೋಮೇಶ್ವರ ಪುರಸಭೆಯ ಅಧ್ಯಕ್ಷೆ ಕಮಲ, ಉಪಾಧ್ಯಕ್ಷ ರವಿಶಂಕರ್ ಸೋಮೇಶ್ವರ ಇನ್ನಿತರರು ಉಪಸ್ಥಿತರಿದ್ದರು.
ದಿ.ಅಮೃತ ಸೋಮೇಶ್ವರ ಸಂಸ್ಕರಣಾ ಕಾರ್ಯಕ್ರಮವನ್ನು ಹಾವೇರಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಕೆ.ಚಿನ್ನಪ್ಪಗೌಡ ಉದ್ಘಾಟಿಸಿದರು. ಮಾಜಿ ಕೆ.ಶಾಸಕ ಜಯರಾಮ ಶೆಟ್ಟಿ, ಸೋಮೇಶ್ವರ ಪುರಸಭೆಯ ಅಧ್ಯಕ್ಷೆ ಕಮಲ, ಉಪಾಧ್ಯಕ್ಷ ರವಿಶಂಕರ್ ಸೋಮೇಶ್ವರ ಇನ್ನಿತರರು ಉಪಸ್ಥಿತರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಗುರುಗಳಾಗಿದ್ದ ಅಮೃತರು 50 ವರ್ಷಗಳ ಹಿಂದೆಯೇ ತುಳು ಯಕ್ಷಗಾನ ರಚಿಸಿ ತುಳು ಜಾನಪದ ಅಧ್ಯಯನದ ಭವಿಷ್ಯ ಆಳವಾಗಿ ಅರಿತುಕೊಂಡಿದ್ದರು. ಶಿವರಾಮ ಕಾರಂತ ಮತ್ತು ಅಮೃತರ ಸಾಹಿತ್ಯ ಅನುಭವದ ಮೇಲೆ ಕಟ್ಟಿದ್ದರಿಂದ ಆ ಸಾಹಿತ್ಯ ಓದಿದವರಿಗೂ ಅನುಭವ ಸಿಗುತ್ತದೆ ಎಂದು ಹಾವೇರಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಕೆ.ಚಿನ್ನಪ್ಪಗೌಡ ಅಭಿಪ್ರಾಯಪಟ್ಟರು.
ಸೋಮೇಶ್ವರ ಪರಿಜ್ಞಾನ ಪದವಿಪೂರ್ವ ಕಾಲೇಜಿನ ಸಹಯೋಗದಲ್ಲಿ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯಿಂದ ದಿ.ಅಮೃತ ಸೋಮೇಶ್ವರ ಸಂಸ್ಕರಣಾ ಕಾರ್ಯಕ್ರಮ ಪ್ರಯುಕ್ತ ಶನಿವಾರ ಪರಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ಭಾಷಣ ಸ್ಪರ್ಧೆ, ಬಹುಭಾಷಾ ಕವಿಗೋಷ್ಠಿ-ಹಾಗೂ ಕಾವ್ಯಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾಜಿ ಶಾಸಕ ಕೆ.ಜಯರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸೋಮೇಶ್ವರ ಪುರಸಭೆ ಅಧ್ಯಕ್ಷೆ ಕಮಲ, ಉಪಾಧ್ಯಕ್ಷ ರವಿಶಂಕರ್ ಸೋಮೇಶ್ವರ, ಸದಸ್ಯೆ ಸೋನಾ ಸುಭಾಷಿಣಿ, ಸಾರಸ್ವತ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿ ಡಾ.ರವೀಂದ್ರ ಕಾಯ್ಕಿಣಿ, ಪರಿಜ್ಞಾನ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವಿಕ್ರಮ್, ಆನಂದಾಶ್ರಯ ಪ್ರೌಢಶಾಲೆಯ ನಿವೃತ್ತ ಪ್ರಾಧ್ಯಾಪಕ ಕೆ.ಆರ್.ಚಂದ್ರ, ಹಳೇ ವಿದ್ಯಾರ್ಥಿ ಜೀವನ್ ಸೋಮೇಶ್ವರ, ಉತ್ಸವ ಸಮಿತಿ ಗೌರವ ಉಪಾಧ್ಯಕ್ಷ ಸದಾನಂದ ಬಂಗೇರ, ಉಪಾಧ್ಯಕ್ಷರಾದ ಯು.ಪಿ.ಆಲಿಯಬ್ಬ, ದೇವಕಿ ಆರ್.ಉಳ್ಳಾಲ್ ಉಪಸ್ಥಿತರಿದ್ದರು.
ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಅಧ್ಯಕ್ಷ ದಿನಕರ ಉಳ್ಳಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಮುಖ್ಯಶಿಕ್ಷಕಿ ಸರೋಜ ಟೀಚರ್ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮೀ ಗಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಅಬ್ಬಕ್ಕರ ಸೇನೆಯಲ್ಲಿ ಮುಸ್ಲಿಮರ ಸಹಿತ ಎಲ್ಲ ಜಾತಿ, ಧರ್ಮದವರಿದ್ದರು. ಉಳ್ಳಾಲ ಕೋಮು ಸೂಕ್ಷ್ಮ ಪ್ರದೇಶ ಆಗಿದ್ದರಿಂದ ಇಲ್ಲಿ ಸೌಹಾರ್ದಯುತ ವಾತಾವರಣ ಬೇಕೆನ್ನುವ ನೆಲೆಯಲ್ಲಿ ಎಲ್ಲ ಧರ್ಮದವರು ಸೇರಿಕೊಂಡು ಅಬ್ಬಕ್ಕ ಉತ್ಸವ ಆರಂಭಿಸಲು ಸಲಹೆ ಕೊಟ್ಟವರೇ ಅಮೃತರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net