ನಿತ್ಯವೂ ಬಳಕೆಯಾಗಲಿ ಕನ್ನಡ ಭಾಷೆ

ಕಾರ್ಕಳ ತಾಲೂಕು 21ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಗೌರವಿಸಲಾಯಿತು.
ಕಾರ್ಕಳ ತಾಲೂಕು 21ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಗೌರವಿಸಲಾಯಿತು.
Published on
ವಿಜಯವಾಣಿ ಸುದ್ದಿಜಾಲ ಕಾರ್ಕಳ
ನಮ್ಮ ದೇಶದಲ್ಲಿ ಐದೂವರೆ ಕೋಟಿ ಜನ ಕನ್ನಡ ಭಾಷೆಯನ್ನಾಡುತ್ತಾರೆ. ಆಂಗ್ಲ ಭಾಷೆ ವ್ಯಾಮೋಹದಿಂದ ಕನ್ನಡದ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ. ವ್ಯಾವಹಾರಿಕ ಭಾಷೆ ಯಾವುದಾದರೂ ಕನ್ನಡ ಭಾಷೆಯ ನಿತ್ಯ ಬಳಕೆಯಾಗಬೇಕು ಎಂದು ನಿಟ್ಟೆ ಸಂಸ್ಥೆಯ ಕ್ಯಾಂಪಸ್ ನಿರ್ವಹಣೆ ಮತ್ತು ಅಭಿವೃದ್ಧಿ ನಿರ್ದೇಶಕ ಯೋಗೀಶ್ ಹೆಗ್ಡೆ ಹೇಳಿದರು.
ಕಾರ್ಕಳ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ವಕೀಲ ಎಂ.ಕೆ.ವಿಜಯ ಕುಮಾರ್ ವೇದಿಕೆಯಲ್ಲಿ ಭಾನುವಾರ ನಡೆದ ಕಾರ್ಕಳ ತಾಲೂಕು 21ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಅವಿಭಜಿತ ದ.ಕ., ಉಡುಪಿಯಲ್ಲಿ ಪ್ರಾದೇಶಿಕ ಭಾಷೆ ತುಳುವಾದರೂ ಕನ್ನಡ ಮತ್ತು ತುಳು ಭಾಷೆಗೆ ಸರಿ ಸಮಾನತೆಯಿದೆ. ಮೊಬೈಲ್ ಗೀಳಿನಿಂದ ಕನ್ನಡ ಭಾಷೆ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ಪುಸ್ತಕ, ಪತ್ರಿಕೆ ಓದುವ ಹವ್ಯಾಸವನ್ನು ಇಂದಿನ ಯುವಜನತೆ ಬೆಳೆಸಿಕೊಳ್ಳಬೇಕು ಎಂದರು.
ಸಮಾರೋಪ ಭಾಷಣ ಮಾಡಿದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕ ಅಶ್ವಥ್ ಎಸ್.ಎಲ್., ಪುಸ್ತಕ ಓದುವ ಅಭಿರುಚಿ ಬೆಳೆಸಿಕೊಂಡಾಗ ಮೌಲ್ಯಯುತ ಜೀವನ ನಡೆಸಲು ಸಾಧ್ಯ. ಯುವಜನರಲ್ಲಿ ಇಂತಹ ಸಮ್ಮೇಳನಗಳ ಮೂಲಕ ಓದಿನ ಆಸಕ್ತಿ ಮೂಡಿಸಬಹುದಾಗಿದೆ ಎಂದರು.
ಪ್ರಶಸ್ತಿ ಪ್ರದಾನ: ಅಜೆಕಾರು ಪದ್ಮಗೋಪಾಲ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ ಪ್ರಾಯೋಜಕತ್ವದಲ್ಲಿ ರಿಷಿಕಾ ದೇವಾಡಿಗ ಅವರಿಗೆ ವಿದ್ಯಾರ್ಥಿ ಯುವ ಸಾಹಿತ್ಯ ರತ್ನ ಪ್ರಶಸ್ತಿ, ದಿ.ಗೋಪಾಲ ಭಂಡಾರಿ ಸ್ಮರಣಾರ್ಥ ಕಾಂತಾವರ ಕನ್ನಡ ಸಂಘಕ್ಕೆ ಸೃಜನ ಸಾಹಿತ್ಯ ಸೌರಭ ಪ್ರಶಸ್ತಿ, ಡಾ.ರವೀಂದ್ರ ಶೆಟ್ಟಿ ಬಜಗೋಳಿಪ್ರಾಯೋಜಕತ್ವದಲ್ಲಿ ದುಗಾರ್ರ್ ತೆಳ್ಳಾರಿನ ಮಂಜುನಾಥ್ ಪೈ ಸರ್ಕಾರಿ ಶಾಲೆ ಕನ್ನಡ ಸೇವೆಗಾಗಿ ಕರುನಾಡ ಸಿರಿ ಪ್ರಶಸ್ತಿ, ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ಪ್ರಾಯೋಜಕತ್ವದಲ್ಲಿ ಧರಣೇಂದ್ರ ಕುಮಾರ್ ಸಿ. ಅವರಿಗೆ ಪುಸ್ತಕ ಪರಿಚಾರಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಾಧಕರಿಗೆ ಸನ್ಮಾನ

ಅನುಪಮಾ ಚಿಪ್ಳೂಣ್ಕರ್(ಸಾಹಿತ್ಯ), ದಿವಾಕರ್ ಶೆಟ್ಟಿ ಗುಂಡ್ಯಡ್ಕ(ಶಿಕ್ಷಣ), ಪ್ರಕಾಶ್ ರಾವ್(ಸಮಾಜಸೇವೆ), ರವಿ ನಲ್ಕೆ ಬೋಳ (ದೈವಾರಾಧನೆ), ರಿಜ್ವಾನ್ ಖಾನ್(ಸಮಾಜಸೇವೆ), ಸುನೀಲ್ ಕುಮಾರ್(ನ್ಯಾಯಾಂಗ), ಹೆನ್ರಿ ಸಾಂತ್‌ಮಯೋರ್(ಸಮಾಜಸೇವೆ), ಶ್ರೀಧರ್ ಸನಿಲ್ ಪೊಸ್ರಾಲು(ಕೃಷಿ), ಕೆ.ಮಾಧವ(ಸಮಾಜಸೇವೆ) ಅವರನ್ನು ವಿವಿಧ ಕ್ಷೇತ್ರದ ಸಾಧನೆಗಾಗಿ ಗೌರವಿಸಲಾಯಿತು.
ಕಸಾಪ ತಾಲೂಕು ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಕೊಂಡಳ್ಳಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನಾಧ್ಯಕ್ಷ ಸಿದ್ದಾಪುರ ವಾಸುದೇವ ಭಟ್ಟ, ಹಿರಿಯ ಸಾಹಿತಿ ಎಚ್.ಡುಂಡಿರಾಜ್ ಮಾತನಾಡಿದರು. ಕೃಷ್ಣಯ್ಯ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಮುನಿಯಾಲು ಉದಯ್ ಕುಮಾರ್ ಶೆಟ್ಟಿ, ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಅಮ್ಮನ ನೆರವು ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಅವಿನಾಶ್ ಜಿ.ಶೆಟ್ಟಿ, ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ಸಹ ಸಂಸ್ಥಾಪಕ ವಿದ್ವಾನ್ ಗಣಪತಿ ಭಟ್, ಗಣನಾಥ್ ಶೆಟ್ಟಿ ಬಿ., ಅಮೃತ್ ರೈ, ಆದರ್ಶ ಎಂ.ಕೆ., ವಿಮಲ್ ರಾಜ್, ಗಣಪತಿ ಕೆ.ಎಸ್., ಜಿಲ್ಲಾ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಕೋಶಾಧಿಕಾರಿ ಮನೋಹರ, ಪಿ.ವಿ.ಆನಂದ ಸಾಲಿಗ್ರಾಮ ಮತ್ತಿತರರು ಉಪಸ್ಥಿತರಿದ್ದರು.
ಉಪನ್ಯಾಸಕ ಲೋಹಿತ್ ಎಸ್.ಕೆ. ಸ್ವಾಗತಿಸಿದರು. ನಾಗೇಶ್ ನಲ್ಲೂರು ಸನ್ಮಾನಿತರನ್ನು ಪರಿಚಯಿಸಿದರು. ಕಾರ್ಯದರ್ಶಿ ದೇವದಾಸ್ ಕೆರೆಮನೆ ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ್ ನಾಯ್ಕ ವಂದಿಸಿದರು.

ಕನ್ನಡಕ್ಕಾಗಿ ನಿವೃತ್ತರು, ವೃದ್ಧರು ಗುಡುಗಿದರೆ ಸಾಲದು, ಯುವಕರು ಗುಡುಗಿದರೆ ಮಾತ್ರ ಕನ್ನಡ ಉಳಿಸಲು ಸಾಧ್ಯ. ಯಾವುದೇ ಭಾಷೆಯಲ್ಲಿ ಶಿಕ್ಷಣ ಪಡೆದರೂ ಮಾತೃಭಾಷೆ ಕನ್ನಡವನ್ನು ಪ್ರೀತಿಸಿದಾಗ ಭಾಷೆ ಉಳಿಯಲು ಸಾಧ್ಯ. ದಕ್ಷಿಣ ಕನ್ನಡದವರು ಶುದ್ಧ ಕನ್ನಡ ಮಾತನಾಡುತ್ತಾರೆ. ವಿದ್ಯಾರ್ಥಿ ಜೀವನದಲ್ಲೇ ಪುಸ್ತಕ, ಪತ್ರಿಕೆ ಓದುವ ಹವ್ಯಾಸ ಮೂಡಿದಾಗ ಸಾಹಿತ್ಯ ಬೆಳೆಯುವುದರೊಂದಿಗೆ ಒಂದಷ್ಟು ಯುವ ಸಾಹಿತಿಗಳು ಕನ್ನಡ ಸಾಹಿತ್ಯ ಲೋಕಕ್ಕೆ ಪರಿಚಯವಾಗಲು ಸಾಧ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net