ಉಡುಪಿಯ ಪ್ರೀತಿ ನಾಯಕ್ ಮತ್ತು ಜನಾರ್ದನ್ ನಾಯಕ್ ದಂಪತಿ ಮನೆಯಲ್ಲಿ "ಮನೆಗೊಂದು ಗ್ರಂಥಾಲಯ' ಅಭಿಯಾನಕ್ಕೆ ರವಿರಾಜ್ ಎಚ್.ಪಿ ಚಾಲನೆ ನೀಡಿದರು. ಜನಾರ್ದನ್ ಕೊಡವೂರು, ರಂಜನಿ ವಸಂತ್, ದೀಪಾ ಚಂದ್ರಕಾಂತ್, ಸಿದ್ದ ಬಸಯ್ಯಸ್ವಾಮಿ ಚಿಕ್ಕಮಠ, ಡಾ. ರಶ್ಮಿ ಅಮ್ಮೆಂಬಳ, ರಾಘವೇಂದ್ರ ಪ್ರಭು ಕರ್ವಾಲು, ಪೂರ್ಣಿಮಾ ಜನಾರ್ದನ್ ಇದ್ದರು.
Published on:
Copied
Follow Us
* ಉಡುಪಿ ಕಸಾಪ ಅಧ್ಯಕ್ಷ ರವಿರಾಜ್ ಎಚ್.ಪಿ. ಮಾಹಿತಿ
* ಕನ್ನಡ ಪುಸ್ತಕ ಪ್ರಾಧಿಕಾರದಿಂದ ಅನುಷ್ಠಾನ
ಉಡುಪಿ: ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ವತಿಯಿಂದ ರಾಜ್ಯವ್ಯಾಪಿ ಆರಂಭಿಸಿರುವ 'ಮನೆಗೊಂದು ಗ್ರಂಥಾಲಯ' ಅಭಿಯಾನಕ್ಕೆ ಉಡುಪಿ ಜಿಲ್ಲೆಯಲ್ಲೂ ಚಾಲನೆ ನೀಡಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ನ ಉಡುಪಿ ತಾಲೂಕು ಘಟಕದ ಸಹಯೋಗದೊಂದಿಗೆ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಅನುಷ್ಠಾನ ಸಮಿತಿಯ ಜಿಲ್ಲಾ ಸಹ ಸಂಚಾಲಕ ಮತ್ತು ಉಡುಪಿ ತಾಲೂಕು ಕಸಾಪ ಅಧ್ಯಕ್ಷ ರವಿರಾಜ್ ಎಚ್.ಪಿ. ತಿಳಿಸಿದರು.
ಉಡುಪಿಯ ಉದ್ಯಮಿಗಳಾದ ಪ್ರೀತಿ ನಾಯಕ್ ಮತ್ತು ಜನಾರ್ದನ್ ನಾಯಕ್ ದಂಪತಿ ಮನೆಯಲ್ಲಿ ಒಂದೇ ಒಂದೇ ದಿನ 10 ಗ್ರಂಥಾಲಯಗಳ ಅನುಷ್ಠಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಾದರಿಯಾದ ಅಭಿಯಾನ
ಕಳೆದ ಒಂದೂವರೆ ವರ್ಷದ ಹಿಂದೆಯೇ ಉಡುಪಿ ತಾಲೂಕಿಗೆ ಸೀಮಿತವಾಗಿ ಕಸಾಪ ಉಡುಪಿ ತಾಲೂಕು ಘಟಕದ ವತಿಯಿಂದ 'ಮನೆಯೇ ಗ್ರಂಥಾಲಯ' ಅಭಿಯಾನ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಈಗಾಗಲೇ 110 ಮನೆಗಳಲ್ಲಿ ಗ್ರಂಥಾಲಯ ತೆರೆಯಲಾಗಿದೆ. ನಮ್ಮ ಈ ಮಾದರಿ ಅಭಿಯಾನದ ಕುರಿತು ತಿಳಿದ ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಮಾನಸ ಅವರು ನಮ್ಮ ಜಿಲ್ಲೆಯಲ್ಲಿ 'ಮನೆಗೊಂದು ಗ್ರಂಥಾಲಯ' ಅಭಿಯಾನ ನಡೆಸಲು ನಮಗೇ ಅವಕಾಶ ನೀಡಿದ್ದಾರೆ. ಇದನ್ನೂ ಸಹ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲಿದ್ದೇವೆ ಎಂದರು.
ಅನುಷ್ಠಾನ ಸಮಿತಿ ಸದಸ್ಯರಾದ ಜನಾರ್ದನ್ ಕೊಡವೂರು, ರಂಜನಿ ವಸಂತ್, ದೀಪಾ ಚಂದ್ರಕಾಂತ್, ಸಿದ್ದ ಬಸಯ್ಯಸ್ವಾಮಿ ಚಿಕ್ಕಮಠ, ಡಾ. ರಶ್ಮಿ ಅಮ್ಮೆಂಬಳ, ರಾಘವೇಂದ್ರ ಪ್ರಭು ಕರ್ವಾಲು, ಕಸಾಪ ಜಿಲ್ಲಾ ಪ್ರತಿನಿಧಿ ಪೂರ್ಣಿಮಾ ಜನಾರ್ದನ್ ಇತರರು ಉಪಸ್ಥಿತರಿದ್ದರು.