ಸಾಂಸ್ಕೃತಿಕ ಕಲೆಗಳಿಂದ ಮಾನಸಿಕ ಆರೋಗ್ಯ ವೃದ್ಧಿ

ಉಡುಪಿಯ ಮಲ್ಪೆ ಬೀಚ್​ನಲ್ಲಿ ಆಯೋಜಿಸಿದ್ದ 'ಕಲಾ ನಡಿಗೆ ನಿಮ್ಮ ಬಳಿಗೆ' ಕಾರ್ಯಕ್ರಮವನ್ನು ಡಾ. ಗಣನಾಥ ಶೆಟ್ಟಿ ಎಕ್ಕಾರು ಉದ್ಘಾಟಿಸಿದರು. ಪೂರ್ಣಿಮಾ, ಗೋಪಾಲ್​ ಸಿ. ಬಂಗೇರ, ಯಾದವ್​ ಅಮಿನ್​, ಶಂಕರ್​ ದಾಸ್​ ಚಡ್ಕಳ ಇತರರಿದ್ದರು.
ಉಡುಪಿಯ ಮಲ್ಪೆ ಬೀಚ್​ನಲ್ಲಿ ಆಯೋಜಿಸಿದ್ದ 'ಕಲಾ ನಡಿಗೆ ನಿಮ್ಮ ಬಳಿಗೆ' ಕಾರ್ಯಕ್ರಮವನ್ನು ಡಾ. ಗಣನಾಥ ಶೆಟ್ಟಿ ಎಕ್ಕಾರು ಉದ್ಘಾಟಿಸಿದರು. ಪೂರ್ಣಿಮಾ, ಗೋಪಾಲ್​ ಸಿ. ಬಂಗೇರ, ಯಾದವ್​ ಅಮಿನ್​, ಶಂಕರ್​ ದಾಸ್​ ಚಡ್ಕಳ ಇತರರಿದ್ದರು.
Published on

* ಡಾ.ಗಣನಾಥ ಶೆಟ್ಟಿ ಎಕ್ಕಾರು ಅಭಿಪ್ರಾಯ

* 'ಕಲಾ ನಡಿಗೆ ನಿಮ್ಮ ಬಳಿಗೆ' ಉದ್ಘಾಟನೆ

ಉಡುಪಿ: ಮನುಷ್ಯರಿಗೆ ಮಾನಸಿಕ, ದೈಹಿಕ ಹಾಗೂ ಸಾಂಸ್ಕೃತಿಕ ಅಂಶಗಳು ಅತಿ ಅವಶ್ಯ. ಈ ಮೂರೂ ವಿಚಾರವನ್ನು ಹೊಂದಿದಾಗ ಮಾತ್ರ ಸಮಾಜದಲ್ಲಿ ಉತ್ತಮವಾಗಿ ಬೆಳವಣಿಗೆ ಹೊಂದಲು ಸಾಧ್ಯ. ಆ ನಿಟ್ಟಿನಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಮಾನಸಿಕ ಆರೋಗ್ಯ ವೃದ್ಧಿಸುವ ಶಕ್ತಿ ಹೊಂದಿದೆ ಎಂದು ಡಾ.ಶಿವರಾಮ ಕಾರಂತ ಟ್ರಸ್ಟ್​ನ ಅಧ್ಯಕ್ಷ ಡಾ. ಗಣನಾಥ ಶೆಟ್ಟಿ ಎಕ್ಕಾರು ಅಭಿಪ್ರಾಯಪಟ್ಟರು.
ಉಡುಪಿಯ ಮಲ್ಪೆ ಬೀಚ್​ನಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ, ಸಿಂಫನಿ ಸಂಗೀತ ಬಳಗ ಹಾಗೂ ಭ್ರಾಮರಿ ಜನಪದ ಕಲಾ ತಂಡ ಉಡುಪಿ ಸಹಕಾರದಲ್ಲಿ ಆಯೋಜಿಸಿದ್ದ 'ಕಲಾ ನಡಿಗೆ ನಿಮ್ಮ ಬಳಿಗೆ' ಎಂಬ ಸುಗಮ ಸಂಗೀತ ಹಾಗೂ ಜನಪದ ನೃತ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿದರು.
ಕಲಾ ಸಂಪತ್ತು ರಕ್ಷಿಸುವುದು ಜವಾಬ್ದಾರಿ
ಕರಾವಳಿ ಪ್ರದೇಶದಲ್ಲಿ ಜನಪದ ಸಂಪತ್ತು ಅಗಾಧವಾಗಿದೆ. ಆದರೆ, ಇತ್ತೀಚೆಗಿನ ಕಾಲಘಟ್ಟದಲ್ಲಿ ಜಾನಪದ ಪ್ರಕಾರಗಳು ಅನೇಕ ಕಾರಣದಿಂದಾಗಿ ದೂರವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಅವುಗಳನ್ನು ಉಳಿಸಲು ಸರ್ಕಾರದ ವತಿಯಿಂದ 'ಕಲಾ ನಡಿಗೆ ನಿಮ್ಮ ಬಳಿಗೆ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕರ್ನಾಟಕದ ಕಲಾ ಸಂಪತ್ತನ್ನು ರಕ್ಷಿಸುವುದು ಎಲ್ಲರ ಜವಾಬ್ದಾರಿ ಎಂದರು.
ಸಿಂಫನಿ ಸಂಗೀತ ಬಳಗದಿಂದ ಸುಗಮ ಸಂಗೀತ ಹಾಗೂ ಜನಪದ ಗೀತ ಗಾಯನ, ಭ್ರಾಮರಿ ಜನಪದ ಕಲಾ ತಂಡದಿಂದ ಕಂಗೀಲು ನೃತ್ಯ ಪ್ರದರ್ಶನಗೊಂಡಿತು.
ಮಲ್ಪೆ ಬಿಲ್ಲವ ಸಂಘದ ಅಧ್ಯಕ್ಷ ಗೋಪಾಲ್​ ಸಿ. ಬಂಗೇರ, ನಗರಸಭಾ ನಾಮ ನಿರ್ದೇಶಕ ಸದಸ್ಯ ಯಾದವ್​ ಅಮಿನ್​ ಇತರರು ಉಪಸ್ಥಿತರಿದ್ದರು.
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಜನಪದ ಕಲಾವಿದ ಶಂಕರ್​ ದಾಸ್​ ಚಡ್ಕಳ ಕಾರ್ಯಕ್ರಮ ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net