ಅಮ್ಮನ ಲಾಲಿ ಹಾಡೇ ಮಗುವಿಗೆ ಪ್ರಥಮ ಸಂಗೀತ

ಉಡುಪಿಯ ಮಣಿಪಾಲದಲ್ಲಿ ಆಯೋಜಿಸಿದ್ದ 'ಕಲಾ ಕುಂಭ' ಕಾರ್ಯಕ್ರಮದಲ್ಲಿ ಸಂಗೀತದ ವಿವಿಧ ಶಿಕ್ಷಕರಿಗೆ ಗುರು ವಂದನೆ ಸಲ್ಲಿಸಲಾಯಿತು. ಡಾ. ವಿರೂಪಾಕ್ಷ ದೇವರಮನೆ, ಯಶವಂತ್​ ಎಂ.ಜಿ., ದೀಕ್ಷಾ ವಿ., ಮಹೇಶ್​ ಠಾಕೂರ್​, ರತನ್​ ರೈ, ಅಶ್ವಿನಿ ಠಾಕೂರ್​, ರಮಾನಂದ್​ ಸಾಮಂತ್​ ಇದ್ದರು.
ಉಡುಪಿಯ ಮಣಿಪಾಲದಲ್ಲಿ ಆಯೋಜಿಸಿದ್ದ 'ಕಲಾ ಕುಂಭ' ಕಾರ್ಯಕ್ರಮದಲ್ಲಿ ಸಂಗೀತದ ವಿವಿಧ ಶಿಕ್ಷಕರಿಗೆ ಗುರು ವಂದನೆ ಸಲ್ಲಿಸಲಾಯಿತು. ಡಾ. ವಿರೂಪಾಕ್ಷ ದೇವರಮನೆ, ಯಶವಂತ್​ ಎಂ.ಜಿ., ದೀಕ್ಷಾ ವಿ., ಮಹೇಶ್​ ಠಾಕೂರ್​, ರತನ್​ ರೈ, ಅಶ್ವಿನಿ ಠಾಕೂರ್​, ರಮಾನಂದ್​ ಸಾಮಂತ್​ ಇದ್ದರು.
Published on

ಮನೋವೈದ್ಯ

 ಡಾ. ವಿರೂಪಾಕ್ಷ ದೇವರಮನೆ ಅಭಿಪ್ರಾಯ

ಗಳ

 'ಕಲಾ ಕುಂಭ' ಉದ್ಘಾಟನೆ

ಉಡುಪಿ: ಸಂಗೀತ ಮತ್ತು ನೃತ್ಯದಂತಹ ಕಲೆಗಳು ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಗೆ ಪೂರಕ. ಅಮ್ಮನ ಲಾಲಿ ಹಾಡಿನ ಮೂಲಕವೇ ಮಗು ಮೊದಲಿಗೆ ಸಂಗೀತವನ್ನು ಗ್ರಹಿಸಲು ಆರಂಭಿಸುತ್ತದೆ. ಅರಿವಿಲ್ಲದಂತೆಯೇ ನಮ್ಮನ್ನು ಹಿಡಿದಿಟ್ಟುಕೊಳ್ಳುವ ಅಪಾರ ಶಕ್ತಿ ಸಂಗೀತಕ್ಕಿದೆ. ಎಲ್ಲರೂ ಕಲಾವಿದರಾಗಲು ಸಾಧ್ಯವಿಲ್ಲದಿದ್ದರೂ ನಿತ್ಯ ಮನೆಯಲ್ಲಿ ಭಜನೆ ಮಾಡುವುದರಿಂದ ವ್ಯಕ್ತಿತ್ವ ಸದೃಢಗೊಂಡು ಮಾನವೀಯ ಮೌಲ್ಯ ವೃದ್ಧಿಸುತ್ತದೆ ಎಂದು ಮನೋವೈದ್ಯ ಡಾ. ವಿರೂಪಾಕ್ಷ ದೇವರಮನೆ ಅಭಿಪ್ರಾಯಪಟ್ಟರು.
ಮಣಿಪಾಲದ ಸರಳೇಬೆಟ್ಟಿನಲ್ಲಿರುವ ರತ್ನ ಸಂಜೀವ ಕಲಾ ಮಂಡಳದಲ್ಲಿ ಶಿವಪ್ರೇರಣಾ ಚಾರಿಟೇಬಲ್​ ಟ್ರಸ್ಟ್​ ವತಿಯಿಂದ ಆಯೋಜಿಸಿದ್ದ ವಿದ್ಯಾರ್ಥಿಗಳ ಕಲಾ ಪ್ರತಿಭೆ ಅನಾವರಣದ 'ಕಲಾ ಕುಂಭ-2026' ಹಾಗೂ 'ಗುರು ವಂದನಾ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳಿಗೆ ಪ್ರೋತ್ಸಾಹಿಸಿ 

ವಿದ್ವಾನ್​ ಯಶವಂತ್​ ಎಂ.ಜಿ. ಹಾಗೂ ವಿದುಷಿ ದೀಕ್ಷಾ ವಿ. ಮಾತನಾಡಿ, ಸಮಾಜದಲ್ಲಿ ವಿವಿಧ ಕಲೆಗಳಿಂದ ಸಕಾರಾತ್ಮಕ ಪರಿವರ್ತನೆ ಸಾಧ್ಯವಿದೆ. ಗುರುವಿನ ಅನುಗ್ರಹದಿಂದ ಸಕಲವೂ ಸಾಧ್ಯವಾಗಲಿದೆ. ಪ್ರತಿ ಮಗುವಿನಲ್ಲೂ ಯಾವುದಾದರೊಂದು ಪ್ರತಿಭೆ ಇದ್ದೇ ಇರುತ್ತದೆ. ಮಕ್ಕಳನ್ನು ಇತರ ಮಕ್ಕಳಿಗೆ ಹೋಲಿಸದೆ ಸೂಕ್ತ ಪ್ರೋತ್ಸಾಹ ನೀಡಿದರೆ ಅವರಿಗೂ ಸಾಧನೆ ಸುಲಭವಾಗುತ್ತದೆ ಎಂದರು. 
ಮಾಹೆಯ ಎಚ್​ಆರ್​ ಮೆನೇಜರ್​ ರತನ್​ ರೈ, ಟ್ರಸ್ಟ್​ನ ಕಾರ್ಯದರ್ಶಿ ಅಶ್ವಿನಿ ಮಹೇಶ್​ ಠಾಕೂರ್​, ರಮಾನಂದ್​ ಸಾಮಂತ್​ ಉಪಸ್ಥಿತರಿದ್ದರು. 
ವಿದುಷಿ ಉಷಾ ಹೆಬ್ಬಾರ್​ ಪ್ರಾರ್ಥಿಸಿದರು. ಶಿವಪ್ರೇರಣಾ ಚಾರಿಟೇಬಲ್​ ಟ್ರಸ್ಟ್​ನ ಅಧ್ಯಕ್ಷ ಮಹೇಶ್​ ಠಾಕೂರ್​ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹೇಶ್​ ನಾಯಕ್​ ಕಾರ್ಯಕ್ರಮ ನಿರೂಪಿಸಿದರು. ಸುಮತಿ ಎಂ, ಕಾಮತ್​ ವಂದಿಸಿದರು.

ವಿವಿಧ ಶಿಕ್ಷಕರಿಗೆ ಗುರು ವಂದನೆ

ಸಂಸ್ಥೆಯ ಸಂಗೀತ ಶಿಕ್ಷಕಿ ವಿದುಷಿ ಡಾ. ಉಷಾ ಹೆಬ್ಬಾರ್​, ಹಾಮೋರ್ನಿಯಂ ಗುರು ನಿತ್ಯಾನಂದ್​ ನಾಯಕ್​, ತಬಲಾ ಶಿಕ್ಷಕ ನಾಗರಾಜ್​ ಖಾರ್ವಿ, ಚಿತ್ರಕಲಾ ಶಿಕ್ಷಕಿ ಸುಮತಿ ಎಂ, ಕಾಮತ್​, ಯೋಗ ಶಿಕ್ಷಕಿ ವಾಣಿ, ಭಗವದ್ಗೀತೆಯ ಗುರು ಉಮೇಶ್​ ಬಿ. ಕಾಮತ್​ ಅವರಿಗೆ ಗುರು ವಂದನೆಯ ಗೌರವ ಸಲ್ಲಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net