ದುಶ್ಚಟಗಳಿಂದ ವಿದ್ಯಾರ್ಥಿಗಳು ದೂರವಿರಲಿ

ಉಡುಪಿಯ ಕಲ್ಯಾಣಪುರದಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭವನ್ನು ನ್ಯಾ. ನಿತಿನ್​ ಯಶವಂತ ರಾವ್​ ಉದ್ಘಾಟಿಸಿದರು. ಬಿ.ಕೆ. ನಾರಾಯಣ, ಡಾ.ವಿನ್ಸೆಂಟ್​ ಆಳ್ವಾ, ರಾಮಚಂದ್ರ ಉಪಾಧ್ಯಾಯ, ವಿಶು ಶೆಟ್ಟಿ ಅಂಬಲಪಾಡಿ, ದೀಪ್ತಿ ಸುವರ್ಣ, ಹರೀಶ್​ ಕೋಟ್ಯಾನ್​, ರೋಸ್ಲಿನ್​ ಕ್ರಾಸ್ತಾ ಇದ್ದರು.
ಉಡುಪಿಯ ಕಲ್ಯಾಣಪುರದಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭವನ್ನು ನ್ಯಾ. ನಿತಿನ್​ ಯಶವಂತ ರಾವ್​ ಉದ್ಘಾಟಿಸಿದರು. ಬಿ.ಕೆ. ನಾರಾಯಣ, ಡಾ.ವಿನ್ಸೆಂಟ್​ ಆಳ್ವಾ, ರಾಮಚಂದ್ರ ಉಪಾಧ್ಯಾಯ, ವಿಶು ಶೆಟ್ಟಿ ಅಂಬಲಪಾಡಿ, ದೀಪ್ತಿ ಸುವರ್ಣ, ಹರೀಶ್​ ಕೋಟ್ಯಾನ್​, ರೋಸ್ಲಿನ್​ ಕ್ರಾಸ್ತಾ ಇದ್ದರು.
Published on

* ನ್ಯಾಯಾಧೀಶ ನಿತಿನ್​ ಯಶವಂತ ರಾವ್​ ಆಶಯ

* ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ

ಉಡುಪಿ: ಇಂದು ವಿದ್ಯಾರ್ಥಿಗಳು ಸುಲಭವಾಗಿ ಮಾದಕ ದ್ರವ್ಯಗಳಂತಹ ಕೆಟ್ಟ ಚಟಗಳಿಗೆ ಬಲಿ ಆಗುತ್ತಿರುವುದು ಆತಂಕಕಾರಿ ಸಂಗತಿ. ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರ ಇದ್ದು ಜೀವನದಲ್ಲಿ ಸಾಧನೆ ಮಾಡುವ ಬಗ್ಗೆ ಯೋಚಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹಿರಿಯ ಸಿವಿಲ್​ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನಿತಿನ್​ ಯಶವಂತ ರಾವ್​ ಸಲಹೆ ನೀಡಿದರು.
ಉಡುಪಿಯ ಕಲ್ಯಾಣಪುರದಲ್ಲಿ ಪ್ಲಾನೆಟ್​ ಮಾರ್ಸ್​ ಫೌಂಡೇಷನ್​ (ರಿ.) ವತಿಯಿಂದ ಶುಕ್ರವಾರ (ಜೂ.19) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 2025-26ನೇ ಸಾಲಿನಲ್ಲಿ ಎಸ್​ಎಸ್​ಎಲ್​ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ಸಂಸ್ಥೆಯ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಲ್ಯಾಣಪುರ ಮಿಲಾಗ್ರಿಸ್​ ಕಾಲೇಜಿನ ಪ್ರಾಂಶುಪಾಲ ಡಾ.ವಿನ್ಸೆಂಟ್​ ಆಳ್ವಾ ಮಾತನಾಡಿ, ಯಾವುದೋ ಕಾರಣದಿಂದ ಅನಾಥರಾಗಿ, ನಿರ್ಗತಿಕರಾಗಿ ಹಾಗೂ ಅವಕಾಶ ವಂಚಿತ ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರ ಭವಿಷ್ಯ ರೂಪಿಸುವಲ್ಲಿ ರಾಧಾ ಬಾಬು ಫೌಂಡೇಷನ್​ ಪ್ರಾಯೋಜಿತ ಪ್ಲಾನೆಟ್​ ಮಾರ್ಸ್​ ಸಂಸ್ಥೆ ಶ್ರಮಿಸುತ್ತಿದೆ. ಇಲ್ಲಿನ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಪ್ರಗತಿ ಸಂಸ್ಥೆಯು ಹೊಂದಲು ಪೂರಕ ವಾತವರಣ ನೀಡಿದೆ. ವಿದ್ಯಾರ್ಥಿಗಳು ಮುಂದೆ ಸಂಸ್ಥೆಯ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಬೇಕು ಎಂದರು.
ಮಕ್ಕಳ ಕಲ್ಯಾಣ ಸಮಿತಿ ಉಡುಪಿಯ ಮಾಜಿ ಅಧ್ಯಕ್ಷ ಬಿ.ಕೆ. ನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಬಾಲನಿಕೇತನ ಸಂಸ್ಥೆ ಉಡುಪಿಯ ಕಾರ್ಯದರ್ಶಿ ರಾಮಚಂದ್ರ ಉಪಾಧ್ಯಾಯ, ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲಪಾಡಿ, ಪ್ಲಾನೆಟ್​ ಮಾರ್ಸ್​ ಸಂಸ್ಥೆಯ ಅಧ್ಯೆ ದೀಪ್ತಿ ಸುವರ್ಣ, ಉಪಾಧ್ಯಕ್ಷ ಹರೀಶ್​ ಕೋಟ್ಯಾನ್​, ಕೋಶಾಧಿಕಾರಿ ರೋಸ್ಲಿನ್​ ಕ್ರಾಸ್ತಾ, ಸಂಸ್ಥೆಯ ಟ್ರಸ್ಟಿಗಳು ಉಪಸ್ಥಿತರಿದ್ದರು.
ಗೀತಾ, ಸೌಜನ್ಯಾ ಮತ್ತು ಅನುಪ್ರಿಯಾ ಕಾರ್ಯಕ್ರಮ ನಿರ್ವಹಿಸಿದರು.
"

ಮಕ್ಕಳು ಅನಗತ್ಯವಾಗಿ ಟಿವಿ, ಮೊಬೈಲ್​ ಇನ್ನಿತರ ಸಾಮಾಜಿಕ ಜಾಲತಾಣಗಳಿಂದ ಪ್ರೇರಿತರಾಗಿ ತಮ್ಮ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಪಾಲಕರೂ ಸಹ ಮಕ್ಕಳ ಚಲನವಲನಗಳ ಮೇಲೆ ನಿಗಾ ವಹಿಸಬೇಕು. ಇಲ್ಲದಿದ್ದಲ್ಲಿ ಮುಂದೆ ಅವರ ಭವಿಷ್ಯ ಮುಸುಕಾಗಬಹುದು. ಮಕ್ಕಳೂ ಸಹ ಕಲಿಕೆಯ ಅವಧಿಯಲ್ಲಿ ಉತ್ತಮ ಹವ್ಯಾಸ ರೂಢಿಸಿಕೊಳ್ಳಬೇಕು.

— ನಿತಿನ್​ ಯಶವಂತ ರಾವ್​. ನ್ಯಾಯಾಧೀಶ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net