ಉಡುಪಿಯ ತೆಂಕನಿಡಿಯೂರು ಕಾಲೇಜ್ನಲ್ಲಿ ಆಯೋಜಿಸಿದ್ದ ಉದ್ಯೋಗ ನೋಂದಣಿ ಅಭಿಯಾನದಲ್ಲಿ ಪ್ರೊ. ನಿತ್ಯಾನಂದ ವಿ. ಗಾಂವ್ಕರ್ ಮಾತನಾಡಿದರು. ದಿನೇಶ್ ಎಂ., ಲಕ್ಷ್ಮೀ ಸುವರ್ಣ, ಬಿಂದು ಟಿ., ಅರವಿಂದ್, ಯಜ್ಞೇಶ್, ಸುದರ್ಶನ್ ಉಪಸ್ಥಿತರಿದ್ದರು.
Published on:
Copied
Follow Us
* ಪ್ರಾಂಶುಪಾಲ ಪ್ರೊ.ನಿತ್ಯಾನಂದ ಗಾಂವ್ಕರ್ ಅನಿಸಿಕೆ
* ತೆಂಕನಿಡಿಯೂರು ಕಾಲೇಜಿನಲ್ಲಿ ನೋಂದಣಿ ಅಭಿಯಾನ
ಉಡುಪಿ: ವಿದ್ಯಾರ್ಥಿಗಳಿಗೆ ಭವಿಷ್ಯದ ಉದ್ಯೋಗದ ಕುರಿತು ಪೂರ್ವಜ್ಞಾನ ಬೇಕಾಗುತ್ತದೆ. ಹೀಗಾಗಿ ವಿದ್ಯಾಭ್ಯಾಸದ ಜತೆಗೇ ತಾವುಗಳು ಎಂತಹ ಉದ್ಯೋಗ ಮಾಡಬೇಕು ಎನ್ನುವ ಕುರಿತಾಗಿಯೂ ಮುಂಚಿತವಾಗಿ ಸಿದ್ಧತೆ ಮಾಡಿಕೊಳ್ಳಬೇಕು. ಇದನ್ನು ಗಮನದಲ್ಲಿಕೊಂಡು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕಾಲೇಜಿನಲ್ಲಿಯೇ ಉದ್ಯೋಗ ನೋಂದಣಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಾಂಶುಪಾಲ ಪ್ರೊ. ನಿತ್ಯಾನಂದ ವಿ. ಗಾಂವ್ಕರ್ ತಿಳಿಸಿದರು.
ಉಡುಪಿಯ ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ಲೇಸ್ಮೆಂಟ್ ಸೆಲ್, ಐಕ್ಯುಎಸಿ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ವೃತ್ತಿ ಮಾರ್ಗದರ್ಶನ ಮತ್ತು ಸಂಚಾರಿ ನೋಂದಣಿ ಅಭಿಯಾನದಲ್ಲಿ ಮಾತನಾಡಿದರು.
ಮಹತ್ವದ ವೇದಿಕೆ
ಕಾಲೇಜಿನ ಪ್ಲೇಸ್ಮೆಂಟ್ ಸೆಲ್ನ ಸಂಚಾಲಕ ದಿನೇಶ್ ಎಂ. ಮಾತನಾಡಿ, ಈ ಅಭಿಯಾನದಿಂದ ವಿದ್ಯಾರ್ಥಿಗಳಿಗೆ ಉದ್ಯೋಗ ಬಗ್ಗೆ ಜಾಗೃತಿ ಮೂಡಲಿದೆ. ಅಲ್ಲದೆ, ಅಧಿಕೃತ ಉದ್ಯೋಗ ಸಲಹಾ ಸೇವೆಗಳೊಂದಿಗೆ ಸಂಪರ್ಕ ಸಾಧಿಸಲು ಮತ್ತು ಭವಿಷ್ಯದ ವೃತ್ತಿ ಜೀವನಕ್ಕೆ ತಯಾರಾಗಲು ಮಹತ್ವದ ವೇದಿಕೆಯಾಗಿದೆ ಎಂದರು.
ಕೌನ್ಸೆಲರ್ ಹಾಗೂ ತರಬೇತುದಾರರಾದ ಲಕ್ಷ್ಮೀ ಸುವರ್ಣ ಮಾತನಾಡಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸೇವೆ, ಉದ್ಯೋಗ ನೋಂದಣಿಯ ಅಗತ್ಯತೆ, ಉದ್ಯೋಗ ಮಾರ್ಗದರ್ಶನ, ಸರ್ಕಾರದಿಂದ ಲಭ್ಯವಾಗುವ ಉದ್ಯೋಗಗಳು, ಕೌಶಲಾಭಿವೃದ್ಧಿ ತರಬೇತಿ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
ವಿದ್ಯಾರ್ಥಿಗಳಿಗೆ ಆನ್ಲೈನ್ ನೋಂದಣಿ ವಿಧಾನ, ದಾಖಲೆ ಸಲ್ಲಿಕೆ ಪ್ರಕ್ರಿಯೆ, ನೋಂದಣಿಯ ನವೀಕರಣ ಹಾಗೂ ಉದ್ಯೋಗ ಸಂಬಂಧಿತ ಸಂದೇಹ ನಿವಾರಿಸಲಾಯಿತು. ವಿದ್ಯಾರ್ಥಿಗಳು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡರು.
ವಾಣಿಜ್ಯ ವಿಭಾಗದ ಮುಖ್ಯಸ್ಥೆ ಬಿಂದು ಟಿ., ಉಪನ್ಯಾಸಕ ಅರವಿಂದ್, ಉದ್ಯೋಗ ವಿನಿಮಯ ಕೇಂದ್ರದ ಸಿಬ್ಬಂದಿ ಯಜ್ಞೇಶ್ ಮತ್ತು ಸುದರ್ಶನ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಲಾವಣ್ಯಾ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಪ್ರಜಿತ್ ಶೆಟ್ಟಿ ಹಾಗೂ ದೀಪಾಲಿ ಕಾರ್ಯಕ್ರಮ ನಿರ್ವಹಿಸಿದರು.