ಕಾರ್ಕಳ ತಾಲೂಕಿನ ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ರಾಜಗುರು ಪೀಠದ ಪರಂಪರೆಗೆ ಒಳಪಟ್ಟ ಮಾಳ ‘ಕೋಟೆ ಬಸದಿ’ಯಲ್ಲಿ ಆದಿನಾಥ ತೀಥರ್ಂಕರ ಸ್ವಾಮಿ, ನೇಮಿನಾಥ ಸ್ವಾಮಿ ಹಾಗೂ ಎಡಬಲದಲ್ಲಿ ಪಾರ್ಶ್ವನಾಥ ಸ್ವಾಮಿ, ಚಂದ್ರನಾಥ ಸ್ವಾಮಿ ಮತ್ತು ಪದ್ಮಾವತಿ ದೇವಿ ಸನ್ನಿಧಾನವಿದೆ. ಈ ಸನ್ನಿಧಾನದಲ್ಲಿ ಜೀರ್ಣೋದ್ಧಾರ ನಿಮಿತ್ತವಾಗಿ ಬಸದಿಯ ಮುಖ್ಯ ದೇವರ ಹಾಗೂ ಪರಿವಾರ ದೇವರುಗಳ ಮೂರ್ತಿಗಳನ್ನು ಬಾಲಾಲಯದಲ್ಲಿ ಇರಿಸಲಾಗಿದೆ.