ಜಿನ ಭಜನೆ ಸ್ಪರ್ಧೆ ಮಂಗಳೂರು ವಿಭಾಗಮಟ್ಟದಿಂದ 93 ತಂಡಗಳು ಭಾಗಿ

 ಭಾರತೀಯ ಜೈನ್ ಮಿಲನ್ ವಲಯ 8ರ ಮಂಗಳೂರು ವಿಭಾಗದ ಜಿನ ಭಜನೆ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಪ್ರಮುಖರಾದ ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಪ್ರಸನ್ನ ಕುಮಾರ್, ಪದ್ಮಪ್ರಸಾದ್ ಹೆಗ್ಡೆ ಇತರರಿದ್ದರು.
ಭಾರತೀಯ ಜೈನ್ ಮಿಲನ್ ವಲಯ 8ರ ಮಂಗಳೂರು ವಿಭಾಗದ ಜಿನ ಭಜನೆ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಪ್ರಮುಖರಾದ ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಪ್ರಸನ್ನ ಕುಮಾರ್, ಪದ್ಮಪ್ರಸಾದ್ ಹೆಗ್ಡೆ ಇತರರಿದ್ದರು.
Published on
ಕಾರ್ಕಳ: ಭಾರತೀಯ ಜೈನ್ ಮಿಲನ್ ವಲಯ 8ರ ಮಂಗಳೂರು ವಿಭಾಗದ ಜಿನ ಭಜನೆ ಸ್ಪರ್ಧೆ ಬಜಗೋಳಿಯ ಸುಮ್ಮಗುತ್ತು ಬಂಡಸಾಲೆ ಧರ್ಮಶಾಲೆ ತೀರ್ಥದಲ್ಲಿ ಇತ್ತೀಚೆಗೆ ನಡೆಯಿತು. ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಸುರೇಂದ್ರ ಕುಮಾರ್ ಉದ್ಘಾಟಿಸಿದರು.
ಅನಿತಾ ಸುರೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿದ್ದ ಮೂಡುಬಿದಿರೆ ಜೈನ್ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚ ನೀಡಿದರು. ಪ್ರಸನ್ನ ಕುಮಾರ್, ಪದ್ಮಪ್ರಸಾದ್ ಹೆಗ್ಡೆ, ಸುಮಂತ್ ಕುಮಾರ್ ಜೈನ್, ಸೋನಿಯಾ ವರ್ಮ, ಜಯ ವರ್ಮ ಹೆಗ್ಡೆ, ವಜ್ರನಾಭ ಚೌಟ, ಧರ್ಮರಾಜ ಜೈನ್ ಮಾತನಾಡಿದರು.
ಸಮಾರೋಪ ಸಮಾರಂಭದಲ್ಲಿ ಕಾರ್ಕಳ ಜೈನ ಮಠದ ಲಲಿತಕೀರ್ತಿ ಭಟ್ಟಾರಕ ಮಹಾಸ್ವಾಮಿ, ಮೂಡುಬಿದಿರೆ ಚಾರುಕೀರ್ತಿ ಮಹಾಸ್ವಾಮಿ ಆಶೀರ್ವಚನ ನೀಡಿದರು. ಡಿ.ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಸೋನಿಯವರ್ಮ, ಕೆ.ಯುವರಾಜ ಭಂಡಾರಿ, ಪುಷ್ಪರಾಜ್ ಜೈನ್, ಯುವರಾಜ್ ಜೈನ್, ಪ್ರವೀಣ್ ಕುಮಾರ್, ರತ್ನಾಕರ್ ಜೈನ್, ಮಯೂರಕೀರ್ತಿ, ರಕ್ಷಿತ್ ಜೈನ್ ವಿಜೇತ ತಂಡಗಳಿಗೆ ಪ್ರಶಸ್ತಿ ವಿತರಿಸಿದರು. ಸುದರ್ಶನ್ ಜೈನ್ ಅಧ್ಯಕ್ಷತೆ ವಹಿಸಿದ್ದರು.
ವಿಭಾಗದ ನಿರ್ದೇಶಕ ಜಯರಾಜ ಕಂಬಳಿ, ಸೋಮಶೇಖರ್, ಪ್ರಮೋದ್ ಕುಮಾರ್, ಶ್ರೀವರ್ಮ ಆಜ್ರಿ, ಸುಕುಮಾರ್ ಬಲ್ಲಾಳ್, ರಾಜಶ್ರೀ ಹೆಗ್ಡೆ, ಯುವರಾಜ್ ಬಲಿಪ, ಕಾರ್ಯದರ್ಶಿ ಸುಭಾಶ್ಚಂದ್ರ ಜೈನ್, ಜತೆ ಕಾರ್ಯದರ್ಶಿಗಳಾದ ಶ್ವೇತಾ ಜೈನ್, ಶಶಿಕಲಾ ಹೆಗ್ಡೆ, ಮಿಲನ್ ಅಧ್ಯಕ್ಷ ವರ್ಧಮಾನ ಜೈನ್ ಕಾರ್ಯದರ್ಶಿ ಓಂ ಪ್ರಕಾಶ್ ಜೈನ್, ಯುವ ಜೈನ್ ಮಿಲನ್ ಅಧ್ಯಕ್ಷ ಪ್ರಧಾನ ಜೈನ್, ಉಪಾಧ್ಯಕ್ಷ ವಿರಾಜ್ ಜೈನ್, ಕಾರ್ಯದರ್ಶಿ ಸಾತ್ವಿಕ್ ಜೈನ್ ಉಪಸ್ಥಿತರಿದ್ದರು. ಕಿರಿಯರ ವಿಭಾಗದಲ್ಲಿ 35 ಹಾಗೂ ಹಿರಿಯರ ವಿಭಾಗದಲ್ಲಿ 58 ಭಜನಾ ತಂಡಗಳು ಭಾಗವಹಿಸಿದ್ದವು.

ಧರ್ಮಸ್ಥಳ ಬಾಹುಬಲಿ ಸೇವಾ ಸಮಿತಿ ಪ್ರಥಮ

ಜಿನ ಭಜನಾ ಸ್ಪರ್ಧೆಯಲ್ಲಿ ಧರ್ಮಸ್ಥಳದ ಬಾಹುಬಲಿ ಸೇವಾ ಸಮಿತಿ ಪ್ರಥಮ, ಉಜಿರೆ ಶುಕ್ಲ ತಂಡ ದ್ವಿತೀಯ ಹಾಗೂ ಮೂಡುಬಿದಿರೆ ಸಂಪೂಜ್ಯ ತಂಡ ತೃತೀಯ ಪ್ರಶಸ್ತಿ ಗಳಿಸಿದರು. ಕಾಣಿಯೂರು ಬೆಳ್ತಂಗಡಿಯ ವಿಜಯ ಧ್ವನಿ ತಂಡವು ಹಿರಿಯ ನಾಗರಿಕರ ಸುವರ್ಣ ತಂಡ ಪ್ರಶಸ್ತಿ ಪಡೆದುಕೊಂಡಿತು. ಬಜಗೋಳಿಯ ಅನಂತಶ್ರೀ ತಂಡ, ಉಜಿರೆಯ ಶ್ರುತ ತಂಡ, ಮಂಗಳೂರಿನ ಗೊಮ್ಮಟೇಶ್ವರ ತಂಡ, ಮೂಡುಬಿದಿರೆಯ ಬ್ರಾಹ್ಮಿ ಮತ್ತು ರತ್ನತ್ರಯ ತಂಡಗಳು ರಾಜ್ಯಮಟ್ಟದ ಅರ್ಹತಾ ಪ್ರಶಸ್ತಿ ಪಡೆದುಕೊಂಡವು. ಕಿರಿಯರ ವಿಭಾಗದಲ್ಲಿ ವಿಟ್ಲ ಬಂಟ್ವಾಳದ ಸಮ್ಯಕ್ತ್ವ ತಂಡ ಪ್ರಥಮ, ಉಜಿರೆಯ ಶುಕ್ಲ ತಂಡ ದ್ವಿತೀಯ, ಮೂಡುಬಿದಿರೆ ಚಾರುಶ್ರೀ ತಂಡ ತೃತೀಯ ಪ್ರಶಸ್ತಿ ಗಳಿಸಿದವು. ಉಜಿರೆಯ ಹರ್ಷದ, ವೇಣೂರಿನ ಜಿನ ಪ್ರವಕ್ತ ಮತ್ತು ಶ್ರೀ ಪ್ರವಕ್ತ ತಂಡಗಳು ಅರ್ಹತಾ ಪ್ರಶಸ್ತಿ ಪಡೆದುಕೊಂಡವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net