ದಿನದಲ್ಲಿ 8 ಗಂಟೆಗಳ ಕೆಲಸ, ಶ್ರಮಕ್ಕೆ ತಕ್ಕ ವೇತನ, ಪ್ರತಿ ವರ್ಷದ ಹಣದುಬ್ಬರಕ್ಕೆ ಪ್ರತಿಯಾಗಿ ವೈಜ್ಞಾನಿಕವಾಗಿ ವೇತನ ಏರಿಕೆ, ಮಹಿಳೆಯರಿಗೆ ಹೆರಿಗೆ ಸಂದರ್ಭದಲ್ಲಿ 3 ತಿಂಗಳು ವೇತನ ಸಹಿತ ರಜೆ, ಕಾರ್ಮಿಕರ ಸಮುದಾಯಕ್ಕೆ ಮನೆ, ಆಹಾರ ಹೀಗೆ 8 ಬಗೆಯ ಕಾರ್ಮಿಕ ಕಾಯಿದೆಯನ್ನು ಸ್ವಾತಂತ್ರ್ಯ ಪೂರ್ವದಲ್ಲಿಯೇ ಹಕ್ಕಾಗಿ ನೀಡಲಾಗಿತ್ತು. ಸ್ವಾತಂತ್ರ್ಯದ ನಂತರ ಇದೇ ಅಂಶಗಳನ್ನು ಡಾ. ಅಂಬೇಡ್ಕರರು ಸಾಂವಿಧಾನಿಕ ಕಾನೂನುಗಳ ಅಡಿಯಲ್ಲಿ ಈ ಹಕ್ಕು ನೀಡಿದರು. ಇಂದು ವೈಜ್ಞಾನಿಕವಾಗಿ ಪ್ರತಿ ಕಾರ್ಮಿಕನಿಗೂ ಕನಿಷ್ಠ 31 ಸಾವಿರ ರೂ. ವೇತನ ನೀಡಬೇಕಿದೆ. ಈ ಎಲ್ಲ ಹಕ್ಕುಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಗಳು ಕಾರ್ಮಿಕರಿಗೆ ಲಭಿಸುವಂತೆ ನೋಡಿಕೊಳ್ಳಬೇಕು ಎಂದು ಫಣಿರಾಜ್ ಹೇಳಿದರು.