ಜಲಜೀವನ ಮಿಷನ್ ಪ್ರಗತಿ ಪರಿಶೀಲನೆ

  ಜಲಜೀವನ್ ಮಿಷನ್ ಜಿಲ್ಲಾ ಜಲ ನೈರ್ಮಲ್ಯ ಮಿಷನ್ ಸಭೆ ನಡೆಯಿತು. ಎಡಿಎಂ ಪಿ.ಉದಯಕುಮಾರ್, ಜಿಪಂ ಉಪಾಧ್ಯಕ್ಷ ಕೆ.ಕೆ.ಸೋಯಾ, ಜಿಲ್ಲಾ ಯೋಜನಾ ಅಧಿಕಾರಿ ರಾಜೇಶ್ ಉಪಸ್ಥಿತರಿದ್ದರು.
ಜಲಜೀವನ್ ಮಿಷನ್ ಜಿಲ್ಲಾ ಜಲ ನೈರ್ಮಲ್ಯ ಮಿಷನ್ ಸಭೆ ನಡೆಯಿತು. ಎಡಿಎಂ ಪಿ.ಉದಯಕುಮಾರ್, ಜಿಪಂ ಉಪಾಧ್ಯಕ್ಷ ಕೆ.ಕೆ.ಸೋಯಾ, ಜಿಲ್ಲಾ ಯೋಜನಾ ಅಧಿಕಾರಿ ರಾಜೇಶ್ ಉಪಸ್ಥಿತರಿದ್ದರು.
Published on
ಕಾಸರಗೋಡು: ಜಿಲ್ಲೆಯಲ್ಲಿ ಜಲಜೀವನ ಮಿಷನ್ ನೇತೃತ್ವದಲ್ಲಿ ಅನುಷ್ಠಾನಗೊಳ್ಳುತ್ತಿರುವ ಯೋಜನೆಗಳ ಪರಿಶೀಲನೆಗಾಗಿ ಜಲಜೀವನ ಮಿಷನ್ ಜಿಲ್ಲಾ ನೀರು ನೈರ್ಮಲ್ಯ ಮಿಷನ್ ಕಲೆಕ್ಟರೇಟ್ ಮಿನಿ ಸಭಾಂಗಣದಲ್ಲಿ ಸಭೆ ನಡೆಸಿತು.
ಎಡಿಎಂ ಪಿ.ಉದಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಯೋಜನೆಗಳು ಮತ್ತು ಚಟುವಟಿಕೆಗಳ ಪ್ರಗತಿ, ಮೂರನೇ ಹಂತದ ತಪಾಸಣಾ ಸಂಸ್ಥೆಗಳ ಅವಧಿ ವಿಸ್ತರಣೆ, ವಿವಿಧ ರಸ್ತೆ ಅಗೆಯುವ ಪರವಾನಗಿಗಳ ಪ್ರಗತಿ ಪರಿಶೀಲನೆ ಮತ್ತು ಕಾಮಗಾರಿಗಳ ಅವಧಿ ವಿಸ್ತರಣೆಗೆ ಸಂಬಂಧಿಸಿದ ಅನುಮೋದನೆಯಂಥ ವಿಷಯಗಳ ಕುರಿತು ಚರ್ಚಿಸಲಾಯಿತು.
ಪ್ರಸ್ತುತ ಕಾಸರಗೋಡು ಜಿಲ್ಲೆಯಲ್ಲಿ ಜಲಜೀವನ ಮಿಷನ್ ನೇತೃತ್ವದಲ್ಲಿ 87835 ನೀರಿನ ಸಂಪರ್ಕ ಒದಗಿಸಲಾಗಿದೆ. ಮೂರನೇ ಹಂತದ ತಪಾಸಣಾ ಸಂಸ್ಥೆಗಳ ಅವಧಿ ವಿಸ್ತರಿಸಬಹುದು ಎಂದು ಒತ್ತಾಯಿಸಲಾಯಿತು. ಜಲಜೀವನ ಮಿಷನ್ ಯೋಜನೆ ಭಾಗವಾಗಿ ವಿವಿಧ ಕಾಮಗಾರಿಗಳ ಅವಧಿ ವಿಸ್ತರಿಸಲಾಗಿದೆ.
ಜಿಪಂ ಉಪಾಧ್ಯಕ್ಷ ಕೆ.ಕೆ.ಸೋಯಾ, ವಿವಿಧ ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿಗಳು, ಜಿಲ್ಲಾ ಯೋಜನಾ ಅಧಿಕಾರಿ ರಾಜೇಶ್, ಸ್ಥಳೀಯಾಡಳಿತ ಇಲಾಖೆ ಜಂಟಿ ನಿರ್ದೇಶಕ ಕೆ.ವಿ.ಹರಿದಾಸ್, ಜಲ ಪ್ರಾಧಿಕಾರದ ಕಾರ್ಯನಿರ್ವಾಹಕ ಇಂಜಿನಿಯರ್ ರಿಜು, ಸೂಪರಿಂಟೆಂಡೆಂಟ್ ಇಂಜಿನಿಯರ್ ಸುದೀಪ್ ಕುಮಾರ್, ಕೇರಳ ಜಲ ಪ್ರಾಧಿಕಾರ, ನೀರಾವರಿ ಇಲಾಖೆ ಇಂಜಿನಿಯರ್‌ಗಳು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net