ಕೆಲಸ ಮುಗಿಯದೆ ಜಲಜೀವನ್ ಹ್ಯಾಂಡ್ ಓವರ್

 ಕೊಲ್ಲಮೊಗ್ರು ಗ್ರಾಮ ಪಂಚಾಯಿತಿಯಲ್ಲಿ ಗ್ರಾಮಸಭೆ ನಡೆಯಿತು. ನೋಡೆಲ್ ಅಧಿಕಾರಿ ಪೂವಯ್ಯ, ಪಿಡಿಒ ಚೆನ್ನಪ್ಪ, ಮೆಸ್ಕಾಂ ಇಂಜಿನಿಯರ್ ಚಿದಾನಂದ ಕೆ. ಮೊದಲಾದವರು ಉಪಸ್ಥಿತರಿದ್ದರು.
ಕೊಲ್ಲಮೊಗ್ರು ಗ್ರಾಮ ಪಂಚಾಯಿತಿಯಲ್ಲಿ ಗ್ರಾಮಸಭೆ ನಡೆಯಿತು. ನೋಡೆಲ್ ಅಧಿಕಾರಿ ಪೂವಯ್ಯ, ಪಿಡಿಒ ಚೆನ್ನಪ್ಪ, ಮೆಸ್ಕಾಂ ಇಂಜಿನಿಯರ್ ಚಿದಾನಂದ ಕೆ. ಮೊದಲಾದವರು ಉಪಸ್ಥಿತರಿದ್ದರು.
Published on

ಸುಬ್ರಹ್ಮಣ್ಯ: ಜಲಜೀವನ್ ಯೋಜನೆ ಕಾಮಗಾರಿಗಳು ಮುಗಿಯದಿದ್ದರೂ ಪಂಚಾಯಿತಿಗೆ ಹಸ್ತಾಂತರಿಸಿರುವ ಬಗ್ಗೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ಕೊಲ್ಲಮೊಗ್ರು ಗ್ರಾಮಸಭೆಯಲ್ಲಿ ನಡೆಯಿತು.

ಕೊಲ್ಲಮೊಗ್ರು ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ನಡೆದ ಗ್ರಾಮಸಭೆಯಲ್ಲಿ ಜಲಜೀವನ್ ಯೋಜನೆ ಬಗ್ಗೆ ಚರ್ಚೆ ನಡೆಯಿತು. ಸಭೆಯ ನೋಡೆಲ್ ಅಧಿಕಾರಿಯಾಗಿ ಲೋಕೋಪಯೋಗಿ ಇಲಾಖೆಯ ಪೂವಯ್ಯ ಉಪಸ್ಥಿತರಿದ್ದರು.
ಬೆಂಡೋಡಿ ಭಾಗಕ್ಕೆ ಈಗಾಗಲೇ ಸೇತುವೆ ಇದ್ದು ಇನ್ನೊಂದು ಸೇತುವೆಯನ್ನು ಅದೇ ಹೊಳೆಯ ಕೊಲೆಕ್ಕಾನ ಎಂಬಲ್ಲಿ ನಿರ್ಮಿಸಲು ಹೊರಟಿರುವುದು ಯಾಕೆ? ಇದರಿಂದ ಸರ್ಕಾರದ ಅನುದಾನ ದುರುಪಯೋಗವಾಗುತ್ತದೆ ಎಂದು ಸತ್ಯನಾರಾಯಣ ಕೋಲ್ಚಾರು ಹೇಳಿದರು. ಗ್ರಾಪಂ ಮಾಜಿ ಉಪಾಧ್ಯಕ್ಷ ಮಾಧವ ಚಾಂತಾಳ ಮಧ್ಯಪ್ರವೇಶಿಸಿ ಅವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದರು.
ಯುವಕ ಮಂಡಲಗಳಿಗೆ ಅನುದಾನ ನೀಡಿ: ಯುವಜನ ಸಂಯುಕ್ತ ಮಂಡಳಿಯಿಂದ ನೋಂದಣಿಗೊಂಡ ಗ್ರಾಮದಲ್ಲಿರುವ ಯುವಕ ಹಾಗೂ ಯುವತಿ ಮಂಡಲಗಳಿಗೆ ಗ್ರಾಮ ಪಂಚಾಯಿತಿಯಲ್ಲಿ ಮೀಸಲಿಟ್ಟ ಅನುದಾನ ನೀಡಬೇಕೆಂದು ಮಂಡಳಿಯ ಉಸ್ತುವಾರಿ ನಿರ್ದೇಶಕ ದಿನೇಶ್ ಹಾಲೆಮಜಲು ಒತ್ತಾಯಿಸಿದರು.
ಸಂಧ್ಯಾ ಸುರಕ್ಷಾ ಬಂದಿಲ್ಲ: ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನ, ವಿಧವಾ ವೇತನ ಕೆಲ ತಿಂಗಳುಗಳಿಂದ ಬರುತ್ತಿಲ್ಲ ಎಂದು ಕಲ್ಮಕಾರು ಗ್ರಾಮದ ಯಶೋಧರ ಬಾಕಿಲ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಗ್ರಾಮ ಲೆಕ್ಕಾಧಿಕಾರಿಗಳು, ಇದು ಸರ್ಕಾರಮಟ್ಟದಲ್ಲಿ ಆಗುವ ವ್ಯವಸ್ಥೆ. ರೇಷನ್ ಕಾರ್ಡ್‌ನಲ್ಲಿ ಹೆಸರು ಇದ್ದರೆ, ಆದಾಯ ತೆರಿಗೆ ಕಟ್ಟುವವರಿಗೆ ಈ ಸವಲತ್ತುಗಳು ಸಿಗುವುದಿಲ್ಲ ಎಂದರು. ಅರಣ್ಯ ಹಕ್ಕು, ಕುಡಿಯುವ ನೀರು, ಸೇತುವೆ, ರಸ್ತೆ ದುರಸ್ತಿ ವಿದ್ಯುತ್ ಮತ್ತಿತರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು.
ಪಿಡಿಒ ಚೆನ್ನಪ್ಪ ನಾಯ್ಕ, ಮೆಸ್ಕಾಂ ಸಹಾಯಕ ಇಂಜಿನಿಯರ್ ಚಿದಾನಂದ ಕೆ., ಉಪವಲಯ ಅರಣ್ಯಾಧಿಕಾರಿ ಅಪೂರ್ವ ಅಚ್ರಪ್ಪಾಡಿ, ಶಿಕ್ಷಣ ಇಲಾಖೆಯ ಕುಶಾಲಪ್ಪ ತುಂಬತ್ತಾಜೆ, ಗ್ರಾಮ ಲೆಕ್ಕಾಧಿಕಾರಿ ಮಧು ಕೆ.ಬಿ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿಜಯಾ, ಪಶು ವೈದ್ಯಾಧಿಕಾರಿ ಡಾ.ವೆಂಕಟಾಚಲಪತಿ, ಆರೋಗ್ಯ ಸುರಕ್ಷಾಧಿಕಾರಿ ರಾಜೇಶ್, ಡಾ.ಸೌರವ್, ರಶ್ಮಿ, ನಮಿತಾ, ತೋಟಗಾರಿಕೆ ಇಲಾಖೆಯ ವಿಜಿತ್ ತಮ್ಮ ಇಲಾಖೆಗಳಿಂದ ಸಿಗುವ ಸೌಲಭ್ಯಗಳ ಮಾಹಿತಿ ನೀಡಿದರು. ವಸಂತ್ ವರದಿ ವಾಚಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net