ಉಡುಪಿ: ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆದಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಗದ್ಗುರು ಶ್ರೀ ಶಂಕರಾಚಾರ್ಯರನ್ನು ನಿಂದಿಸಿದ ಘಟನೆ ನಡೆದಿದ್ದು, ಆ ವೀಡಿಯೊ ವೈರಲ್ ಆಗಿತ್ತು. ಬಳಿಕ ಶ್ರೀ ಶಂಕರರ ಅನುಯಾಯಿಗಳು ನಿಂದನೆ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿ, ಕಾನೂನು ಹೋರಾಟದ ಎಚ್ಚರಿಕೆಯನ್ನೂ ನೀಡಿದ್ದರು. ಇದೀಗ ಶಂಕರರನ್ನು ಅವಮಾನಿಸಿದ್ದವರು ಕ್ಷಮೆ ಯಾಚಿಸಿದ್ದು, ಪ್ರಕರಣ ಅಂತ್ಯಗೊಳಿಸಲಾಗಿದೆ.