ಘಟನೆಯಿಂದ ರಿಕ್ಷಾ ಚಾಲಕರು ತೀವ್ರ ಅಸಮಾಧಾನಗೊಂಡಿದ್ದು, ಶನಿವಾರ ರಿಕ್ಷಾ ಚಾಲಕರ ಸಂಘದ ಉಪಾಧ್ಯಕ್ಷರ ನೇತೃತ್ವದಲ್ಲಿ ಚಾಲಕರು ಪಂಚಾಯಿತಿಗೆ ಮುತ್ತಿಗೆ ಹಾಕಲು ಮುಂದಾಗಿ, ನಿಕಟಪೂರ್ವ ಉಪಾಧ್ಯಕ್ಷ ಮಹಮ್ಮದ್ ಶರೀಫ್ ಅವರು ಪಿಡಿಒ ಅವರೊಂದಿಗೆ ಮಾತುಕತೆ ನಡೆಸಿದರು. ಮರದ ಕೊಂಬೆಗಳನ್ನು ತಕ್ಷಣ ತೆರವುಗೊಳಿಸದೆ ಹೋದಲ್ಲಿ ಹೋರಾಟ ಅನಿವಾರ್ಯ ಎಂದಿದ್ದಾರೆ. ಸಂಘದ ಉಪಾಧ್ಯಕ್ಷ ಲಿಂಗಪ್ಪ ಕೋಟ್ಯಾನ್, ಇದಿನಬ್ಬ, ಕಾರ್ಯದರ್ಶಿ ಮುಹಮ್ಮದ್ ನಾಸೀರ್ ಮತ್ತು ಇತರ ಚಾಲಕರು ಇದ್ದರು.