ಸ್ವಾವಲಂಬಿ ಬದುಕಿಗೆ ಹಲಸು ಮೇಳ ದಾರಿದೀಪ

ಹಲಸು ಮೇಳವನ್ನು ಶಂಕರ ಡಿ.ಉದ್ಘಾಟಿಸಿದರು. ಪ್ರಮುಖರಾದ ಅಶ್ವಿನಿ ಕೆ.ಎಂ., ರಾಮಪ್ಪ ಮಂಜೇಶ್ವರ, ರತೀಶ್ ಮೊದಲಾದವರಿದ್ದರು.
ಹಲಸು ಮೇಳವನ್ನು ಶಂಕರ ಡಿ.ಉದ್ಘಾಟಿಸಿದರು. ಪ್ರಮುಖರಾದ ಅಶ್ವಿನಿ ಕೆ.ಎಂ., ರಾಮಪ್ಪ ಮಂಜೇಶ್ವರ, ರತೀಶ್ ಮೊದಲಾದವರಿದ್ದರು.
Published on
ಬದಿಯಡ್ಕ: ಪ್ರಕೃತಿ ನಮಗೆ ನೀಡಿದ ಅಮೂಲ್ಯ ಕೊಡುಗೆಯಾಗಿದೆ ಹಲಸು. ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವ ಮೂಲಕ ಮಹಿಳೆಯರು ಸ್ವಾವಲಂಬಿ ಉದ್ಯಮಿಗಳಾಗಲು ಈ ಮೇಳವು ದಾರಿದೀಪವಾಗಿದೆ ಎಂದು ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರ ಡಿ.ಹೇಳಿದರು.
ಬದಿಯಡ್ಕ ಗ್ರಾಮ ಪಂಚಾಯಿತಿ ಕುಟುಂಬಶ್ರೀ ವಾಡೆಲ್ ಸಿ.ಡಿ.ಎಸ್. ವತಿಯಿಂದ ಸಿ.ಡಿ.ಎಸ್. ಹಾಲ್‌ನಲ್ಲಿ ಜರಗಿದ ಹಲಸಿನ ಮೇಳವನ್ನು ಉದ್ಘಾಟಿಸಿ ವಾತನಾಡಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ. ಅಧ್ಯಕ್ಷತೆ ವಹಿಸಿದ್ದರು. ಎಸ್ಸೆಸ್ಸೆಲ್ಸಿ ಮತ್ತು ಪ್ಲಸ್ ಟು ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಕುಟುಂಬಶ್ರೀ ಸದಸ್ಯರ ಮಕ್ಕಳಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಉತ್ಸವದಲ್ಲಿ ಹಲಸಿನ ಹಣ್ಣಿನಿಂದ ತಯಾರಿಸಿದ ಬರೋಬ್ಬರಿ 230 ವಿಭಿನ್ನ ಬಗೆಯ ತಿನಿಸುಗಳನ್ನು ಪ್ರದರ್ಶಿಸಲಾಯಿತು.
ಜಿಲ್ಲಾ ಪಂಚಾಯಿತಿ ಸದಸ್ಯ ರಾಮಪ್ಪ ಮಂಜೇಶ್ವರ, ಕುಟುಂಬಶ್ರೀ ಜಿಲ್ಲಾ ಮಿಷನ್‌ನ ಡಿ.ಎಂ.ಸಿ. ರತೀಶ್, ಎ.ಡಿ.ಎಂ.ಸಿ. ಕಿಶೋರ್, ಎ.ಎಸ್.ಸಜಿ, ಕೃಷಿ ಅಧಿಕಾರಿಗಳಾದ ಬಿಂದು, ಮೋಹನನ್, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮನೋಜ್ ಕುವಾರ್ ಮೊದಲಾದವರಿದ್ದರು.
ಸಿ.ಡಿ.ಎಸ್. ಅಧ್ಯಕ್ಷೆ ಸುಲೋಚನಾ ಸ್ವಾಗತಿಸಿದರು. ಉಪಾಧ್ಯಕ್ಷೆ ಜಯಂತಿ ಕುಂಟಿಕಾನ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net