ಅಮೆರಿಕ-ಭಾರತ ಒಂದಾದರೆ ವಿಶ್ವಕ್ಕೆ ಒಳಿತು

ಅಮೆರಿಕದ ಹ್ಯೂಸ್ಟನ್​ನಲ್ಲಿ ಉಡುಪಿ ಪುತ್ತಿಗೆ ಮಠದಿಂದ ಶ್ರೀಕೃಷ್ಣ ವೃಂದಾವನ ನಿರ್ಮಾಣಕ್ಕಾಗಿ ಸುಗುಣೇಂದ್ರ ಶ್ರೀಗಳ ಉಪಸ್ಥಿತಿಯಲ್ಲಿ ಭೂಮಿ ಸಮರ್ಪಣೆ ಕಾರ್ಯಕ್ರಮ ನಡೆಯಿತು. ಡಿ.ಸಿ. ಮಂಜುನಾಥ, ಆ್ಯಂಡಿ ಮೇಯರ್ಸ್​, ನ್ಯಾ.ಡೇನಿಯಲ್​ ವಾಂಗ್​, ನ್ಯಾ.ಸುರೇಂದ್ರನ್​ ಪಿ. ಇತರರಿದ್ದರು.
ಅಮೆರಿಕದ ಹ್ಯೂಸ್ಟನ್​ನಲ್ಲಿ ಉಡುಪಿ ಪುತ್ತಿಗೆ ಮಠದಿಂದ ಶ್ರೀಕೃಷ್ಣ ವೃಂದಾವನ ನಿರ್ಮಾಣಕ್ಕಾಗಿ ಸುಗುಣೇಂದ್ರ ಶ್ರೀಗಳ ಉಪಸ್ಥಿತಿಯಲ್ಲಿ ಭೂಮಿ ಸಮರ್ಪಣೆ ಕಾರ್ಯಕ್ರಮ ನಡೆಯಿತು. ಡಿ.ಸಿ. ಮಂಜುನಾಥ, ಆ್ಯಂಡಿ ಮೇಯರ್ಸ್​, ನ್ಯಾ.ಡೇನಿಯಲ್​ ವಾಂಗ್​, ನ್ಯಾ.ಸುರೇಂದ್ರನ್​ ಪಿ. ಇತರರಿದ್ದರು.
Published on: 

* ಉಡುಪಿ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರ ಅಭಿಮತ

* ಅಮೆರಿಕದಲ್ಲಿ ಕೃಷ್ಣ ವೃಂದಾವನ ನಿರ್ಮಾಣಕ್ಕೆ ಭೂಮಿ ಸಮರ್ಪಣೆ

ಉಡುಪಿ: ವಾಮನಾವತಾರಿಯಾಗಿ ಬಂದ ಭಗವಂತನು ಬಲಿಚಕ್ರವರ್ತಿಯಿಂದ ಮೂರು ಹೆಜ್ಜೆ ಭೂಮಿ ಕೇಳಿದನು. ಇಂದು ಆತನ ಭಕ್ತರು ಶ್ರೀಕೃಷ್ಣ ಮತ್ತು ಶ್ರೀವೆಂಕಟೇಶ್ವರ ದೇವಾಲಯಕ್ಕಾಗಿ ಎಂಟು ಎಕರೆ ಭೂಮಿ ಸಮರ್ಪಿಸಿದ್ದಾರೆ. ಭೂದಾನ ಮತ್ತು ದೇವಾಲಯ ನಿರ್ಮಾಣ ಕಾರ್ಯ ಜೀವನದಲ್ಲಿಯೇ ಶ್ರೇಷ್ಠ ಪುಣ್ಯಾವಕಾಶ. ಇಂದಿನ ಎಐ ಅಂದರೆ ಅಮೆರಿಕ ಆ್ಯಂಡ್​ ಇಂಡಿಯ ಎಂದರ್ಥ. ಈ ಎರಡೂ ದೇಶ ಧಾರ್ಮಿಕವಾಗಿ ಒಂದಾದರೆ ಇಡೀ ವಿಶ್ವಕ್ಕೆ ಒಳಿತಾಗುತ್ತದೆ ಎಂದು ಡಾ. ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.

ಅಮೆರಿಕದ ಹ್ಯೂಸ್ಟನ್​ನಲ್ಲಿ ಉಡುಪಿ ಪುತ್ತಿಗೆ ಮಠದಿಂದ ಶ್ರೀಕೃಷ್ಣ ವೃಂದಾವನದ ವಿಸ್ತರಿತ ನೂತನ ದೇವಾಲಯ ನಿರ್ಮಾಣಕ್ಕಾಗಿ 8 ಎಕರೆ ಭೂಮಿ ಸಮರ್ಪಣೆ ಹಾಗೂ ಗುರುವಂದನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಡಾ. ಸುಗುಣೇಂದ್ರ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.
ಡಾ. ಸುಗುಣೇಂದ್ರ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.

ಏಕತೆಯ ಪ್ರತೀಕ

ನಾವು ದೇವಾಲಯ ನಿರ್ಮಿಸುತ್ತಿರುವ ಈ ಸ್ಥಳದ ಸುತ್ತಮುತ್ತ ಚರ್ಚ್​, ಮಸೀದಿ, ಬೌದ್ಧ ಮಂದಿರ ಹಾಗೂ ವಿವಿಧ ಹಿಂದೂ ದೇವಾಲಯಗಳಿವೆ. ಇದು 'ವಸುದೈವ ಕುಟುಂಬಕಂ' ಎಂಬ ಸನಾತನ ಧರ್ಮದ ಸಂದೇಶಕ್ಕೆ ಸಾಕ್ಷಿಯಾಗಿದೆ. ಇಲ್ಲಿ ನಿರ್ಮಾಣವಾಗುವ ನಮ್ಮ ದೇವಾಲಯವು ಸರ್ವಧರ್ಮ ಸಾಮರಸ್ಯ ಮತ್ತು ಆಧ್ಯಾತ್ಮಿಕ ಏಕತೆಯ ಪ್ರತೀಕವಾಗಲಿದೆ. ಜನರು ಹ್ಯೂಸ್ಟನ್​ಗೆ ನಾಸಾ ವೀಕ್ಷಿಸಲು ಬರುವಂತೆ ನಮ್ಮ ಕೃಷ್ಣ ವೃಂದಾವನದ ದರ್ಶನಕ್ಕೂ ಬರುವಂತಾಗಬೇಕು ಎಂದರು.

ದಾನಿಗಳಿಗೆ ಸನ್ಮಾನ

ವೃಂದಾವನ ನಿರ್ಮಾಣಕ್ಕೆ ಎಂಟು ಎಕರೆ ಭೂಮಿ ಸಮರ್ಪಿಸಿದ ಸಂಕೇತವಾಗಿ ಜಮುನಾ ಮತ್ತು ಬಿ.ಎನ್​. ಮುರಳಿ ದಂಪತಿ ಶ್ರೀಗಳಿಗೆ ಭೂದಾನದ ಫಲಕ ಅರ್ಪಿಸಿದರು. ಸುಮಾರು 1.9 ಮಿಲಿಯನ್​ ಡಾಲರ್​ ಮೌಲ್ಯದ ಭೂಮಿ ಖರೀದಿಗೆ ಸಹಕರಿಸಿದ ಹ್ಯೂಸ್ಟನ್​ನ ಜೈನ ಸೊಸೈಟಿ, ಒಂದು ಮಿಲಿಯನ್​ ಡಾಲರ್​ ದೇಣಿಗೆ ನೀಡಿದ ಗೀತಾ ಮತ್ತು ರಾಮರಾವ್​ ದಂಪತಿಯನ್ನು ಶ್ರೀಗಳು ಸನ್ಮಾನಿಸಿ ಆಶೀರ್ವದಿಸಿದರು.

ಹ್ಯೂಸ್ಟನ್ ಮೇಯರ್​ ಸುಗುಣೇಂದ್ರ ಶ್ರೀಪಾದರಿಗೆ ಅಧಿಕೃತ ಗೌರವಪತ್ರ ನೀಡಿ ಗುರುವಂದನೆ ಸಲ್ಲಿಸಿದರು.
ಹ್ಯೂಸ್ಟನ್ ಮೇಯರ್​ ಸುಗುಣೇಂದ್ರ ಶ್ರೀಪಾದರಿಗೆ ಅಧಿಕೃತ ಗೌರವಪತ್ರ ನೀಡಿ ಗುರುವಂದನೆ ಸಲ್ಲಿಸಿದರು.

ನಗರದ ಮೇಯರ್​ ಶ್ರೀಪಾದರಿಗೆ ಅಧಿಕೃತ ಗೌರವಪತ್ರ ನೀಡಿ ಗುರುವಂದನೆ ಸಲ್ಲಿಸಿದರು. ಭಾರತದ ಹ್ಯೂಸ್ಟನ್​ ಕಾನ್ಸುಲೇಟ್​ ಜನರಲ್​ ಡಿ.ಸಿ. ಮಂಜುನಾಥ, ಫೋರ್ಟ್​ ಬೆಂಡ್​ ಕೌಂಟಿ ಕಮಿಷನರ್​ ಆ್ಯಂಡಿ ಮೇಯರ್ಸ್​, ನ್ಯಾಯಾಧೀಶ ಡೇನಿಯಲ್​ ವಾಂಗ್​ ಹಾಗೂ ಟೆಕ್ಸಾಸ್​ನ 240ನೇ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಸುರೇಂದ್ರನ್​ ಪಿ., ವಿಎಚ್​ಪಿ ಪ್ರತಿನಿಧಿ ಎನ್​.ಎ. ಜೋಶಿಪುರ ನೇತೃತ್ವದ ನಿಯೋಗ, ಮಠದ ದಿವಾನ ನಾಗರಾಜ ಆಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.

ರಾಜೇಶ್ವರಿ ಪಳಗದ ನೇತೃತ್ವದಲ್ಲಿ ಮಹಿಳೆಯರು ಪುತ್ತಿಗೆ ಮಠದ ಗುರುಪರಂಪರೆಯ ಸ್ತುತಿ ಹಾಡಿದರು. ಸ್ಥಳದಾನಿ ಬಿ.ಎನ್​. ಮುರಳಿ ಸ್ವಾಗತಿಸಿದರು. ಸಂತೋಷ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೀರ್ತಿ ನೀಲಮಣಿ ವಂದಿಸಿದರು. ಉಜ್ವಲಾ ಭಟ್​ ಕಾರ್ಯಕ್ರಮ ನಿರ್ವಹಿಸಿದರು.

ಶ್ರೀಪಾದರು ಹಾಗೂ ಗಣ್ಯರನ್ನು ಕುದುರೆ ಸಾರೋಟಿನಲ್ಲಿ ಎಂಟು ಎಕರೆ ಪ್ರದೇಶದ ಸುತ್ತ ಕರೆದೊಯ್ದು ಸ್ಥಳ ಪರಿವೀಕ್ಷಣೆ ಮಾಡಿಸಲಾಯಿತು.
ಶ್ರೀಪಾದರು ಹಾಗೂ ಗಣ್ಯರನ್ನು ಕುದುರೆ ಸಾರೋಟಿನಲ್ಲಿ ಎಂಟು ಎಕರೆ ಪ್ರದೇಶದ ಸುತ್ತ ಕರೆದೊಯ್ದು ಸ್ಥಳ ಪರಿವೀಕ್ಷಣೆ ಮಾಡಿಸಲಾಯಿತು.

ಕುದುರೆ ಸಾರೋಟಿನಲ್ಲಿ ಪರಿವೀಕ್ಷಣೆ

ಉಡುಪಿ ಮಾದರಿಯಲ್ಲಿಯೇ ಹುಲಿವೇಷ ಕುಣಿತ ಮತ್ತು ಕೋಲಾಟದೊಂದಿಗೆ ಶ್ರೀಗಳನ್ನು ಹಾಗೂ ಗಣ್ಯರನ್ನು ಸ್ವಾಗತಿಸಲಾಯಿತು. ಶ್ರೀಪಾದರು ಹಾಗೂ ಗಣ್ಯರನ್ನು ಕುದುರೆ ಸಾರೋಟಿನಲ್ಲಿ ಎಂಟು ಎಕರೆ ಪ್ರದೇಶದ ಸುತ್ತ ಕರೆದೊಯ್ದು ಸ್ಥಳ ಪರಿವೀಕ್ಷಣೆ ಮಾಡಿಸಲಾಯಿತು. ಇಸ್ಕಾನ್​, ವ್ಯಾಸ ಸಮೂಹ, ಚಿನ್ಮಯ ಮಿಷನ್​, ಸ್ವಾಮಿನಾರಾಯಣ ಮಂದಿರ ಹಾಗೂ ಅಷ್ಟಲಕ್ಷ್ಮೀ ದೇವಸ್ಥಾನ ಸೇರಿದಂತೆ ಹಲವು ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.

ಶ್ರೀಗಳಿಗೆ ಬಿ.ಎನ್​. ಮುರಳಿ ಭೂದಾನದ ಫಲಕ ಅರ್ಪಿಸಿದರು.
ಶ್ರೀಗಳಿಗೆ ಬಿ.ಎನ್​. ಮುರಳಿ ಭೂದಾನದ ಫಲಕ ಅರ್ಪಿಸಿದರು.
ಸುಮಾರು 15 ಮಿಲಿಯನ್​ ಡಾಲರ್​ ವೆಚ್ಚದ ಯೋಜನೆ ಇದಾಗಿದೆ. ಸಾವಿರ ಆಸನಗಳ ಸಭಾಂಗಣ, 370 ಕಾರುಗಳಿಗೆ ಪಾರ್ಕಿಂಗ್​, 100 ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ವ್ಯವಸ್ಥೆ ಕಲ್ಪಿಸಲಾಗುವುದು. ಶ್ರೀ ಪುತ್ತಿಗೆ ವಿದ್ಯಾಪೀಠವನ್ನೂ ಅಮೆರಿಕದ ಹ್ಯೂಸ್ಟನ್​ನಲ್ಲಿ ಸ್ಥಾಪಿಸಿ ವೇದ, ಆಗಮ ಮತ್ತು ಅರ್ಚಕ ವೃತ್ತಿಯ ಶಿಕ್ಷಣ ನೀಡುವ ಉದ್ದೇಶವಿದ್ದು ಈ ವೃಂದಾವನವು ಧಾರ್ಮಿಕ ಹಾಗೂ ಶೈಕ್ಷಣಿಕ ಕೇಂದ್ರವಾಗಿ ಬೆಳೆಯಲಿದೆ.
ಡಾ. ಸುಗುಣೇಂದ್ರ ತೀರ್ಥ ಶ್ರೀಪಾದರು. ಪುತ್ತಿಗೆ ಮಠ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net