ಹಿರಿಯರಿಗೆ ಪ್ರಕೃತಿ ಸಹಜ ಬುದುಕಾಗಿದ್ದ ಮಾಸ

ಕಲಾಬಾಗಿಲು ರರಝಾನಗರ ಬುರೂಜ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಟಿದ ಲೇಸ್ ಕಾರ್ಯಕ್ರಮ ನಡೆಯಿತು. ಪತ್ರಕರ್ತ ಗೋಪಾಲ ಅಂಚನ್, ಎಂದರು. ಗ್ರಾಪಂ ವಾಜಿ ಅಧ್ಯಕ್ಷ ಬಾಲಕೃಷ್ಣ ಆರ್. ಅಂಚನ್ ಮತ್ತಿತರರು ಇದ್ದರು.
ಕಲಾಬಾಗಿಲು ರರಝಾನಗರ ಬುರೂಜ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಟಿದ ಲೇಸ್ ಕಾರ್ಯಕ್ರಮ ನಡೆಯಿತು. ಪತ್ರಕರ್ತ ಗೋಪಾಲ ಅಂಚನ್, ಎಂದರು. ಗ್ರಾಪಂ ವಾಜಿ ಅಧ್ಯಕ್ಷ ಬಾಲಕೃಷ್ಣ ಆರ್. ಅಂಚನ್ ಮತ್ತಿತರರು ಇದ್ದರು.
Published on

ಬಂಟ್ವಾಳ: ಆಷಾಢದಲ್ಲಿ ಕಾಡುತ್ತಿದ್ದ ಹಸಿವು, ಅನಾರೋಗ್ಯ, ಭಯವನ್ನು ನಿವಾರಿಸಲು ನಮ್ಮ ಹಿರಿಯರು ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಅದನ್ನು ನೆನೆಯುವ ಹಾಗೂ ನಾವು ಮತ್ತೆ ಪ್ರಕೃತಿಯೊಂದಿಗೆ ಮುಖವಾಡಿ ಬದುಕಬೇಕೆಂದು ಹೇಳುವುದು ಆಟಿ ಆಚರಣೆಯ ಉದ್ದೇಶವೇ ಹೊರತು ಸಂಭ್ರಮವಲ್ಲ. ಹಿಂದಿನ ಕಾಲದಲ್ಲಿ ಆಟಿ ತಿಂಗಳು ನಮ್ಮ ಹಿರಿಯರಿಗೆ ಆಚರಣೆಯಾಗಿರಲಿಲ್ಲ, ಅದು ಪ್ರಕೃತಿ ಸಹಜ ಬದುಕಾಗಿತ್ತು ಎಂದು ಪತ್ರಕರ್ತ ಗೋಪಾಲ ಅಂಚನ್ ಹೇಳಿದರು.

ಕಲಾಬಾಗಿಲು ರರಝಾನಗರ ಬುರೂಜ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ್ದ ಆಟಿದ ಲೇಸ್ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಗ್ರಾಪಂ ವಾಜಿ ಅಧ್ಯಕ್ಷ ಬಾಲಕೃಷ್ಣ ಆರ್. ಅಂಚನ್ ಹಿಂಗಾರ ಅರಳಿಸುವ ಮೂಲಕ ಉದ್ಘಾಟಿಸಿದರು. ಶಾಲಾ ಸಂಚಾಲಕ ಶೇಖ್ ರಹ್ಮತ್ತುಲ್ಲಾಹ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ವಾಜಿ ಸದಸ್ಯ ಪ್ರಶಾಂತ್ ಜೈನ್, ಶಿಕ್ಷಕ-ರಕ್ಷಕ ಸಂದ ಉಪಾಧ್ಯಕ್ಷ ವಲೇರಿಯನ್ ಲಸ್ರಾದೊ, ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ಎಲ್ಸಿ ಲಸ್ರಾದೋ, ಶಬಾನಾ ಶೇಖ್, ಪುಂಜಾಲಕಟ್ಟೆ ಪೊಲೀಸ್ ಠಾಣೆ ಹೆಡ್ ಕಾನ್‌ಸ್ಟೆಬಲ್ ಹರೀಶ್ ನಾಯ್ಕ, ಅಧಿಕಾರಿ ಕರೀಂ ಸಾಬ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು, ಪಾಲಕರು ತಂದ ವಿವಿಧ ಬಗೆಯ ಆಟಿ ತಿಂಗಳ ವಿಶೇಷ ಆಹಾರಗಳನ್ನು ಪ್ರದರ್ಶಿಸಲಾಯಿತು. ಪ್ರೌಢಶಾಲೆ ಮುಖ್ಯಶಿಕ್ಷಕಿ ಜಯಶ್ರೀ ಸಾಲ್ಯಾನ್ ಸ್ವಾಗತಿಸಿದರು. ಮಮತಾ ಆರ್. ವಂದಿಸಿದರು. ದಿವ್ಯಾ ಮತ್ತು ಅನುಷಾ ಕಾರ್ಯಕ್ರಮ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net