ರೋಗಿಯೊಂದಿಗಿನ ಸಂಬಂಧ ರಕ್ಷಣೆ ವೈದ್ಯರ ಹೊಣೆ

ಉಡುಪಿಯ ಪುರಭವನದಲ್ಲಿ ಐಎಂಎ ಉಡುಪಿ ಕರಾವಳಿಯ ನೂತನ ತಂಡದ ಪದಗ್ರಹಣ ನಡೆಯಿತು. ಡಾ. ನಳಿನಿ ಭಾಸ್ಕರಾನಂದ ಕುಮಾರ್​, ಡಾ. ಪುಷ್ಪಾ ಜಿ. ಕಿಣಿ, ಡಾ. ಕೃಷ್ಣಮೂರ್ತಿ ಉಪಾಧ್ಯಾಯ, ಡಾ. ಅಶೋಕ್​ ಕಾಮತ್​, ಡಾ. ಮಾನಸ್​ ಇ.ಆರ್​., ಡಾ. ಸನತ್​, ಡಾ. ಕಿರಣಕುಮಾರ್​ ಎಂ. ಇದ್ದರು.
ಉಡುಪಿಯ ಪುರಭವನದಲ್ಲಿ ಐಎಂಎ ಉಡುಪಿ ಕರಾವಳಿಯ ನೂತನ ತಂಡದ ಪದಗ್ರಹಣ ನಡೆಯಿತು. ಡಾ. ನಳಿನಿ ಭಾಸ್ಕರಾನಂದ ಕುಮಾರ್​, ಡಾ. ಪುಷ್ಪಾ ಜಿ. ಕಿಣಿ, ಡಾ. ಕೃಷ್ಣಮೂರ್ತಿ ಉಪಾಧ್ಯಾಯ, ಡಾ. ಅಶೋಕ್​ ಕಾಮತ್​, ಡಾ. ಮಾನಸ್​ ಇ.ಆರ್​., ಡಾ. ಸನತ್​, ಡಾ. ಕಿರಣಕುಮಾರ್​ ಎಂ. ಇದ್ದರು.
Published on: 

* ಡಾ. ಪುಷ್ಪಾ ಜಿ. ಕಿಣಿ ಅಭಿಪ್ರಾಯ

* ಐಎಂಎ ಉಡುಪಿ ಕರಾವಳಿಯ ನೂತನ ತಂಡದ ಪದಗ್ರಹಣ

ಉಡುಪಿ: ವೈದ್ಯರು ಮತ್ತು ರೋಗಿಗಳ ನಡುವಿನ ಸಂಬಂಧ ಅತ್ಯಂತ ಪವಿತ್ರವಾದದ್ದು. ವೈದ್ಯಕಿಯ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ವ್ಯಾಪಾರೀಕರಣದ ನಡುವೆಯೂ ವೈದ್ಯರು ಮಾನವೀಯತೆ ಮರೆಯಬಾರದು. ವೈದ್ಯರು ಉತ್ತಮ ಮಾತು, ತಪಾಸಣೆ ಮೂಲಕ ರೋಗಿಯನ್ನು ಪರೀಕ್ಷಿಸಿ ಅವರಲ್ಲಿ ಆತ್ಮವಿಶ್ವಾಸ ತುಂಬುವುದು ಚಿಕಿತ್ಸೆಯ ಪ್ರಮುಖ ಭಾಗವಾಗಿದೆ ಎಂದು ಡಾ. ಪುಷ್ಪಾ ಜಿ. ಕಿಣಿ ಹೇಳಿದರು.

ಉಡುಪಿಯ ಪುರಭವನದಲ್ಲಿ ಆಯೋಜಿಸಿದ್ದ ಇಂಡಿಯನ್​ ಮೆಡಿಕಲ್​ ಅಸೋಸಿಯೇಷನ್​ (ಐಎಂಎ)ನ ಉಡುಪಿ ಕರಾವಳಿಯ ನೂತನ ತಂಡದ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.

ಮಕ್ಕಳ ಖ್ಯಾತ ತಜ್ಞೆ ಡಾ. ನಳಿನಿ ಭಾಸ್ಕರಾನಂದ ಕುಮಾರ್​ ಮಾತನಾಡಿ, ನಾವು ಬೆಳೆಸಿದ ಕಿರಿಯ ವೈದ್ಯರು ಹಾಗೂ ವಿದ್ಯಾರ್ಥಿಗಳು ಉನ್ನತ ಸ್ಥಾನ ಅಲಂಕರಿಸಿದಾಗ ಸಂತಸವಾಗುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಪೀಳಿಗೆ ಜವಾಬ್ದಾರಿಯುತವಾಗಿ ಮುನ್ನಡೆದು ಹಿರಿಯರಿಗೆ ಹೆಮ್ಮೆ ತರುವಂತಾಗಬೇಕು ಎಂದರು.

ಡಾ. ಉಮೇಶ್​ ಪುತ್ರನ್​ ಮಾತನಾಡಿ, ವೈದ್ಯರ ಒಗ್ಗಟ್ಟಿನ ಮಹತ್ವ ವಿವರಿಸಿದರು. ಮಕ್ಕಳ ತಜ್ಞ ಡಾ. ಕೃಷ್ಣಮೂರ್ತಿ ಉಪಾಧ್ಯಾಯ ನೇತೃತ್ವದ ನೂತನ ತಂಡಕ್ಕೆ ಪದಗ್ರಹಣ ನೆರವೇರಿಸಲಾಯಿತು. ಕಳೆದ ಸಾಲಿನಲ್ಲಿ ಸಂಘಟನೆಯ ಬಲವರ್ಧನೆಗೆ ಶ್ರಮಿಸಿದ ಪದಾಧಿಕಾರಿ ಹಾಗೂ ಸದಸ್ಯರನ್ನು ಗೌರವಿಸಲಾಯಿತು.

ನಿಕಟಪೂರ್ವ ಅಧ್ಯಕ್ಷ ಡಾ. ಅಶೋಕ್​ ಕಾಮತ್​, ಕಾರ್ಯದರ್ಶಿ ಡಾ. ಮಾನಸ್​ ಇ.ಆರ್​., ಕೋಶಾಧಿಕಾರಿ ಡಾ. ಸನತ್​, ನೂತನ ಕೋಶಾಧಿಕಾರಿ ಡಾ. ಕಿರಣಕುಮಾರ್​ ಎಂ. ಉಪಸ್ಥಿತರಿದ್ದರು.

ಡಾ ಪ್ರವೀಣ್​ ಶಾಸ್ತ್ರಿ, ಡಾ.ಕಸ್ತೂರಿ ನಾಯಕ್​ ಕಾರ್ಯಕ್ರಮ ನಿರೂಪಿಸಿದರು. ನೂತನ ಕಾರ್ಯದರ್ಶಿ ಡಾ. ವಿಜಯಾ ವೈ.ಬಿ. ವಂದಿಸಿದರು.

ವೈದ್ಯರು ಹಾಗೂ ಅವರ ರೋಗಿಗಳ ಹಿತದೃಷ್ಟಿಯಿಂದ ಹಲವು ಕ್ರಮ ಕೈಗೊಳ್ಳಲಾಗುವುದು. ಕೆಎಂಸಿಯಲ್ಲಿ ಹಾಗೂ ಉನ್ನತ ಮಟ್ಟದ ಆಸ್ಪತ್ರೆಗಳಲ್ಲಿ ವೈದ್ಯರು ಪ್ರವೇಶಿಸುವ ಸಂದರ್ಭದಲ್ಲಿ ಎದುರಾಗುವ ವಿಳಂಬ ಮತ್ತು ತೊಂದರೆ ನಿವಾರಿಸಲು ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಚರ್ಚಿಸಿ, ಗೌರವಯುತ ಪ್ರವೇಶಕ್ಕೆ ಅನುಕೂಲವಾಗುವಂತೆ 'ಗೌರವ ಪ್ರವೇಶ ಪತ್ರ' ವಿತರಿಸುವ ವ್ಯವಸ್ಥೆ ಮಾಡಲಾಗುವುದು.
ಡಾ. ಕೃಷ್ಣಮೂರ್ತಿ ಉಪಾಧ್ಯಾಯ. ಐಎಂಎ ಉಡುಪಿ ಕರಾವಳಿಯ ನೂತನ ಅಧ್ಯಕ್ಷ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net