ಶಾಲಾ ವಾರ್ಷಿಕೋತ್ಸವಗಳು ಶಾಲೆ ಬೆಳವಣಿಗೆಗೆ ಹಾಗೂ ಮಕ್ಕಳ ಪ್ರತಿಭೆಗಳನ್ನು ಗುರುತಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮಕ್ಕಳಿಗೆ ಶಿಕ್ಷಣದೊಂದಿಗೆ ಜೀವನ ಮೌಲ್ಯ ಸೇರಿದಂತೆ ಇನ್ನಿತರ ಕಾರ್ಯ ಚಟುವಟಿಕೆಗಳಿಗೆ ಅವಕಾಶ ನೀಡಿದಾಗ ಉತ್ತಮ ಲಿತಾಂಶ ಕಾಣಲು ಸಾಧ್ಯವಿದೆ ಎಂದು ಬ್ರಹ್ಮಾವರ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿ ಹೇಳಿದರು.
ಹೈಕಾಡಿ ಸುಶೀಲಾ ಡಾ.ಭೋಜ ರಾವ್ ಸ್ಮಾರಕ ರಂಗ ಮಂಟಪದಲ್ಲಿ ಭಾನುವಾರ ನಡೆದ ಹೈಕಾಡಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ 64ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.
ಉಡುಪಿ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂ ಅಧ್ಯಕ್ಷ ವಿಜಯ ಕುವಾರ್ ಶೆಟ್ಟಿ ಕಿರಾಡಿ ಮಾತನಾಡಿದರು. ಪ್ರಾಥಮಿಕ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ರಾವೇಂದ್ರ ಮಡಿವಾಳ ಅಧ್ಯಕ್ಷತೆ ವಹಿಸಿದ್ದರು. ಆವರ್ಸೆ ಗ್ರಾಪಂ ಅಧ್ಯಕ್ಷ ದಿವಾಕರ ಗಾಣಿಗ ಧ್ವಜಾರೋಹಣ ನೆರವೇರಿಸಿದರು.
ಆವರ್ಸೆ ಗ್ರಾಪಂ ಸದಸ್ಯ ಸಂತೋಷ ಶೆಟ್ಟಿ, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ರವಿರಾಜ ಶೆಟ್ಟಿ, ಹಳೇ ವಿದ್ಯಾರ್ಥಿ ಸಂ ಅಧ್ಯಕ್ಷ ಆಸೀಫ್ ಹೈಕಾಡಿ, ಪ್ರೌಢಶಾಲೆ ಮುಖ್ಯಶಿಕ್ಷಕ ಗಣೇಶ್ ಕಿಣಿ, ಎಸ್‌ಡಿಎಂಸಿ ಅಧ್ಯಕ್ಷೆ ಸಂಹಿತಾ ಹೆಬ್ಬಾರ್, ವಿದ್ಯಾರ್ಥಿ ನಾಯಕ ಯತಿನ್, ಧನುಷ್ ಇನ್ನಿತರರು ಉಪಸ್ಥಿತರಿದ್ದರು.
ಶಿಕ್ಷಕ ಪ್ರವೀಣ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಜ್ಯೋತಿ ವರದಿ ವಾಚಿಸಿದರು. ಗಣೇಶ್ ಕಿಣಿ ಸ್ವಾಗತಿಸಿದರು. ರವಿರಾಜ ಶೆಟ್ಟಿ ವಂದಿಸಿದರು. ಸೂರ್ಯಪ್ರಕಾಶ್ ದಾಮ್ಲೆ ಕಾರ್ಯಕ್ರಮ ನಿರೂಪಿಸಿದರು.