ಸಂಘರ್ಷದಿಂದ ಸಮಾಜ ನಿರ್ಮಾಣ ಅಸಾಧ್ಯ

 ಮೂಡುಮಾರ್ನಾಡು ಚೇತನ ಯುವಕ ಮಂಡಲ 31ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಉದ್ಯಮಿ ರಾಘು ಸಿ.ಪೂಜಾರಿ ಅವರಿಗೆ ಹುಟ್ಟೂರಿನ ಸನ್ಮಾನವನ್ನು ಅವರ ಪುತ್ರ ರಕ್ಷಿತ್ ಮೂಲಕ ಸಮರ್ಪಿಸಲಾಯಿತು. ಮಾರ್ನಾಡು ಶ್ರೀ ಕ್ಷೇತ್ರ ಹೊಯ್ಪಲಬೆಟ್ಟ ಗರಡಿ ಆಡಳಿತ ಮೊಕ್ತೇಸರ ರಾಜೇಶ್ ಬಳ್ಳಾಲ್, ಸುಬ್ರಹ್ಮಣ್ಯ ಭಟ್, ಯತೀಂದ್ರ ರಾವ್ ಪಾಡಿಮನೆ ಮೊದಲಾದವರಿದ್ದರು.
ಮೂಡುಮಾರ್ನಾಡು ಚೇತನ ಯುವಕ ಮಂಡಲ 31ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಉದ್ಯಮಿ ರಾಘು ಸಿ.ಪೂಜಾರಿ ಅವರಿಗೆ ಹುಟ್ಟೂರಿನ ಸನ್ಮಾನವನ್ನು ಅವರ ಪುತ್ರ ರಕ್ಷಿತ್ ಮೂಲಕ ಸಮರ್ಪಿಸಲಾಯಿತು. ಮಾರ್ನಾಡು ಶ್ರೀ ಕ್ಷೇತ್ರ ಹೊಯ್ಪಲಬೆಟ್ಟ ಗರಡಿ ಆಡಳಿತ ಮೊಕ್ತೇಸರ ರಾಜೇಶ್ ಬಳ್ಳಾಲ್, ಸುಬ್ರಹ್ಮಣ್ಯ ಭಟ್, ಯತೀಂದ್ರ ರಾವ್ ಪಾಡಿಮನೆ ಮೊದಲಾದವರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಸಂಘರ್ಷದಿಂದ ಸಮಾಜ ನಿರ್ಮಾಣ ಸಾಧ್ಯವಿಲ್ಲ. ಆರೋಗ್ಯ, ಶಿಕ್ಷಣವನ್ನು ಬಲಪಡಿಸುವುದು ದೇಶದ ಪ್ರಗತಿಗೆ ಭದ್ರ ಅಡಿಪಾಯವಾಗುತ್ತದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು.
ಮೂಡುಮಾರ್ನಾಡು ತಂಡ್ರಕೆರೆ ಚೇತನ ಯುವಕ ಮಂಡಲ ವತಿಯಿಂದ ಆಯೋಜಿಸಲಾದ 31ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮಾರ್ನಾಡು ಶ್ರೀ ಕ್ಷೇತ್ರ ಹೊಯ್ಪಲಬೆಟ್ಟ ಗರಡಿ ಆಡಳಿತ ಮೊಕ್ತೇಸರ ರಾಜೇಶ್ ಬಳ್ಳಾಲ್ ಅಧ್ಯಕ್ಷತೆ ವಹಿಸಿದರು. ‘ಮಾರ್ನಾಡಿನ ಸೇವಾ ಮಾಣಿಕ್ಯ’ ಪ್ರಶಸ್ತಿಗೆ ಭಾಜನರಾದ ಉದ್ಯಮಿ ರಾಘು ಸಿ.ಪೂಜಾರಿ ಅವರಿಗೆ ಹುಟ್ಟೂರಿನ ಸನ್ಮಾನವನ್ನು ಅವರ ಪುತ್ರ ರಕ್ಷಿತ್ ಮೂಲಕ ಸಮರ್ಪಿಸಲಾಯಿತು. ಶ್ರೀ ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪಕ ಸುಬ್ರಹ್ಮಣ್ಯ ಭಟ್, ಕೆಲ್ಲಪುತ್ತಿಗೆ ಶ್ರೀ ಕ್ಷೇತ್ರ ಭೂತರಾಜಗುಡ್ಡೆ ಆಡಳಿತ ಮೊಕ್ತೇಸರ ಜಗದೀಶ್ ಅಧಿಕಾರಿ, ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಹಿರಿಯ ಅಧಿಕಾರಿ ಯತೀಂದ್ರ ರಾವ್ ಪಾಡಿಮನೆ, ಪಡುಮಾರ್ನಾಡು ಗ್ರಾಪಂ ನಿಕಟಪೂರ್ವ ಅಧ್ಯಕ್ಷ ವಾಸುದೇವ ಭಟ್, ಮಾಜಿ ಅಧ್ಯಕ್ಷೆ ಕಲ್ಯಾಣಿ, ಬೆಂಗಳೂರಿನ ಉದ್ಯಮಿ ಹೇಮರಾಜ್ ಯು.ರಾವ್, ಚೇತನ ಯುವಕ ಮಂಡಲ ಅಧ್ಯಕ್ಷ ಸುನೀಲ್ ಬಿ.ಪೂಜಾರಿ ಗೌರವ ಉಪಸ್ಥಿತರಿದ್ದರು.
ತಂಡ್ರಕೆರೆ ಪ್ರಾಥಮಿಕ ಶಾಲೆ ಅಭಿವೃದ್ಧಿಗಾಗಿ 5,000 ರೂ. ಚೆಕ್ ಅನ್ನು ಶಾಲಾ ಅಧ್ಯಾಪಕರಿಗೆ ಹಸ್ತಾಂತರಿಸಲಾಯಿತು. ಯುವಕ ಮಂಡಲ ಪ್ರಮುಖರಾದ ರಾಜೇಶ್ ಗೋಲಾರ ಸ್ವಾಗತಿಸಿದರು. ಕೋಶಾಧಿಕಾರಿ ನವೀನ್ ಗರಡಿ ವರದಿ ಮಂಡಿಸಿದರು. ಅಧ್ಯಾಪಕ ನವೀನ್ ಬಂಗೇರ ವಂದಿಸಿದರು. ನಿತೇಶ್ ಕುಮಾರ್ ಮಾರ್ನಾಡ್ ನಿರೂಪಿಸಿದರು. ಯುವಕ ಮಂಡಲ ಮಾಜಿ ಅಧ್ಯಕ್ಷ ದೇವರಾಜ್ ಸುವರ್ಣ ಪೊಸಲಾಯಿ, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net