ಹಿರಿಯ ನಾಗರಿಕರಿಗೆ ಗೌರವ ಎಲ್ಲರ ಕರ್ತವ್ಯ

ಉಡುಪಿಯಲ್ಲಿ ಆಯೋಜಿಸಿದ್ದ ಅಂತರ್​ ಪೀಳಿಗೆಯ ಬಾಂಧವ್ಯ ಮೇಳವನ್ನು ಎಂ.ಎ. ಗಫೂರ್​ ಉದ್ಘಾಟಿಸಿದರು. ದಿನಕರ್​ ಹೇರೂರು, ಸುಧಾಕರ್​ ನಾಯಕ್​, ಎಸ್​.ಎಸ್​. ಕಾದ್ರೊಳ್ಳಿ, ರತ್ನಾ,  ಪ್ರೇಮಮೂರ್ತಿ ಕೆ., ಹರೀಶ್​ ಬಿ., ಕೆ. ಸದಾನಂದ್​ ಹೆಗಡೆ, ಟಿಎಸ್​ಎನ್​ ಪೂರ್ಣಾನಂದ, ವಸಂತಿ ರಾವ್​ ಕೊರಡ್ಕಲ್​ ಇದ್ದರು.
ಉಡುಪಿಯಲ್ಲಿ ಆಯೋಜಿಸಿದ್ದ ಅಂತರ್​ ಪೀಳಿಗೆಯ ಬಾಂಧವ್ಯ ಮೇಳವನ್ನು ಎಂ.ಎ. ಗಫೂರ್​ ಉದ್ಘಾಟಿಸಿದರು. ದಿನಕರ್​ ಹೇರೂರು, ಸುಧಾಕರ್​ ನಾಯಕ್​, ಎಸ್​.ಎಸ್​. ಕಾದ್ರೊಳ್ಳಿ, ರತ್ನಾ, ಪ್ರೇಮಮೂರ್ತಿ ಕೆ., ಹರೀಶ್​ ಬಿ., ಕೆ. ಸದಾನಂದ್​ ಹೆಗಡೆ, ಟಿಎಸ್​ಎನ್​ ಪೂರ್ಣಾನಂದ, ವಸಂತಿ ರಾವ್​ ಕೊರಡ್ಕಲ್​ ಇದ್ದರು.
Published on: 

* ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಗಫೂರ್​ ಅಭಿಮತ

* ಉಡುಪಿಯಲ್ಲಿ ಅಂತರ್​ ಪೀಳಿಗೆಯ ಬಾಂಧವ್ಯ ಮೇಳ ಉದ್ಘಾಟನೆ

ಉಡುಪಿ: ಹಿರಿಯ ನಾಗರಿಕರ ಸೇವೆ ಕುಟುಂಬಕ್ಕೆ ಮತ್ತು ಸಮಾಜಕ್ಕೆ ಬೇಕಾಗಿದೆ. ವಯಸ್ಸಾಗಿದೆ ನಾವು ಅಪ್ರಯೋಜಕರು ಎಂದು ತಿಳಿದುಕೊಳ್ಳದೆ ಯಾವುದಾದರೂ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಸಮಾಜದಲ್ಲಿ ವಿಶೇಷ ಸ್ಥಾನ-ಮಾನ ಹೊಂದಿರುವ ಅವರನ್ನು ಗೌರವಯುತವಾಗಿ ನೋಡಿಕೊಳ್ಳಬೇಕು. ಅದು ಎಲ್ಲರ ಕರ್ತವ್ಯವಾಗಿದೆ ಎಂದು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್​ ಅಭಿಮತ ವ್ಯಕ್ತಪಡಿಸಿದರು.

ಉಡುಪಿಯ ಬನ್ನಂಜೆಯಲ್ಲಿರುವ ಶ್ರೀ ನಾರಾಯಣಗುರು ಸಭಾಭವನದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕೆನರಾ ಬ್ಯಾಂಕ್​, ವಿವಿಧ ಇಲಾಖೆ ಹಾಗೂ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಮತ್ತು ಕೇಂದ್ರ ಪ್ರಾಯೋಜಿತ ಅಟಲ್​ ವಯೋ ಅಭ್ಯುದಯ ಯೋಜನೆಯ ಉಪ ಯೋಜನೆಯಡಿ ಗುರುವಾರ (ಅ.1) ಆಯೋಜಿಸಿದ್ದ ಅಂತರ್​ ಪೀಳಿಗೆಯ ಬಾಂಧವ್ಯ ಮೇಳ ಉದ್ಘಾಟಿಸಿ ಮಾತನಾಡಿದರು.

ಹಿರಿಯರಿಗಾಗಿ ಪೊಲೀಸ್​ ಬೀಟ್​

ಹೆಚ್ಚುವರಿ ಪೊಲೀಸ್​ ಅಧೀಕ್ಷಕ ಸುಧಾಕರ್​ ನಾಯಕ್​ ಮಾತನಾಡಿ, ನಗರೀಕರಣದಿಂದಾಗಿ ಹಿರಿಯ ನಾಗರಿಕರು ಮಕ್ಕಳು, ಕುಟುಂಬ, ಬಂಧು=ಬಳಗವಿಲ್ಲದೆ ಒಂಟಿಯಾಗಿ ಬದುಕುತ್ತಿದ್ದಾರೆ. ಅವರಿಗೆ ಅಭದ್ರತೆ ಕಾಡುತ್ತಿದೆ. ಹೀಗಾಗಿ ಪೊಲೀಸ್​ ಬೀಟ್​ ನಡೆಸಿ ಹಿರಿಯ ನಾಗರಿಕರಿಗೆ ಏನಾದರೂ ಸಮಸ್ಯೆಗಳಿದ್ದಲ್ಲಿ ಇನ್ನಿತರ ಇಲಾಖೆಗಳ ಮೂಲಕ ಅದನ್ನು ಬಗೆಹರಿಸುವ ಕಾರ್ಯ ನಡೆಯುತ್ತಿದೆ ಎಂದರು.

ಇಂಚರ ಕ್ಲಿನಿಕ್​ನ ಜನರಲ್​ ಫಿಜೀಶಿಯನ್​ ಡಾ. ವೈ.ಸುದರ್ಶನ್​ ರಾವ್​ ಉಪನ್ಯಾಸ ನೀಡಿದರು. ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ್​ ಹೇರೂರು ಅಧ್ಯಕ್ಷತೆ ವಹಿಸಿದ್ದರು.

ಹಿರಿಯ ನಾಗರಿಕರ ದಿನಾಚರಣೆ ನಿಮಿತ್ತ ನಡೆದಿದ್ದ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಭಾ ಕಾರ್ಯಕ್ರಮಕ್ಕೂ ಮೊದಲು ಆರೋಗ್ಯ ಇಲಾಖೆಯಿಂದ ಹಿರಿಯ ನಾಗರಿಕರಿಗೆ ವೈದ್ಯಕೀಯ ತಪಾಸಣೆ ನಡೆಸಲಾಯಿತು.

ಜಿಪಂ ಉಪ ಕಾರ್ಯದರ್ಶಿ ಎಸ್​.ಎಸ್​. ಕಾದ್ರೊಳ್ಳಿ, ಲೀಡ್​ ಬ್ಯಾಂಕ್​ ಮ್ಯಾನೇಜರ್​ ಹರೀಶ್​ ಬಿ., ಕೆನರಾ ಬ್ಯಾಂಕ್​ನ ಅಸಿಸ್ಟೆಂಟ್​ ಜನರಲ್​ ಮ್ಯಾನೇಜರ್​ ಟಿಎಸ್​ಎನ್​ ಪೂರ್ಣಾನಂದ, ಹಿರಿಯ ನಾಗರಿಕರ ಒಕ್ಕೂಟದ ಜಿಲ್ಲಾಧ್ಯಕ್ಷ ಕೆ. ಸದಾನಂದ್​ ಹೆಗಡೆ, ಮಹಿಳಾ ಮಂಡಲಗಳ ಒಕ್ಕೂಟದ ಜಿಲ್ಲಾಧ್ಯಕ್ಷೆ ವಸಂತಿ ರಾವ್​ ಕೊರಡ್ಕಲ್​ ಉಪಸ್ಥಿತರಿದ್ದರು.

ಜಿಲ್ಲಾ ಹಿರಿಯ ನಾಗರಿಕರ ಹಾಗೂ ಅಂಗವಿಕಲರ ಕಲ್ಯಾಣಾಧಿಕಾರಿ ರತ್ನಾ ಸ್ವಾಗತಿಸಿದರು. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರೇಮಮೂರ್ತಿ ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಎಚ್​.ರವೀಂದ್ರ ಮತ್ತು ಕಾಂತಿ ಹರೀಶ್​ ಕಾರ್ಯಕ್ರಮ ನಿರೂಪಿಸಿದರು. ಯೋಜನಾ ಸಹಾಯಕ ಶಿವಾಜಿ ವಂದಿಸಿದರು.

ಮನೆಯಲ್ಲಿರುವ ಇಂದಿನ ಕಿರಿಯರಿಗೆ ಹಿರಿಯರನ್ನು ಪ್ರೀತಿಯಿಂದ ನೋಡಿಕೊಳ್ಳಬೇಕೆಂಬ ಬುದ್ಧಿಯಿಲ್ಲ. 'ವಸುದೈವ ಕುಟುಂಬಕಂ' ಎಂಬ ಭಾರತೀಯ ಪರಂಪರೆಯ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಮಕ್ಕಳು ಹೆತ್ತವರನ್ನು ತ್ಯಜಿಸುವ ಘಟನೆ ಹೆಚ್ಚುತ್ತಿರುವುದು ಆಘಾತಕಾರಿ ವಿಷಯ. ಈ ಬಗ್ಗೆ ಸಮಾಜ ಚಿಂತನೆ ನಡೆಸಬೇಕು. ವಿದ್ಯಾಭ್ಯಾಸದೊಂದಿಗೆ ಕೌಟುಂಬಿಕ ಮೌಲ್ಯಗಳ ಅರಿವು ಮೂಡಿಸಬೇಕು.

> ಎಂ.ಎ. ಗಫೂರ್​. ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net