ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸುವುದು ಹೆಮ್ಮೆ

ಎಕ್ಸೆಲ್ ಕಾಲೇಜಿನಲ್ಲಿ ನೀಟ್ ಸಾಧಕ ಚಿನ್ಮಯ್ ಗೌಡ ಅವರನ್ನು ಗೌರವಿಸಲಾಯಿತು. ಚಿನ್ಮಯ್ ಗೌಡ ಅವರ ತಾಯಿ ರಾಗಿಣಿ, ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಪ್ರಾಂಶುಪಾಲ ಡಾ.ಪ್ರಜ್ವಲ್ ಮೊದಲಾದವರಿದ್ದರು.
ಎಕ್ಸೆಲ್ ಕಾಲೇಜಿನಲ್ಲಿ ನೀಟ್ ಸಾಧಕ ಚಿನ್ಮಯ್ ಗೌಡ ಅವರನ್ನು ಗೌರವಿಸಲಾಯಿತು. ಚಿನ್ಮಯ್ ಗೌಡ ಅವರ ತಾಯಿ ರಾಗಿಣಿ, ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಪ್ರಾಂಶುಪಾಲ ಡಾ.ಪ್ರಜ್ವಲ್ ಮೊದಲಾದವರಿದ್ದರು.
Published on
ಬೆಳ್ತಂಗಡಿ: ಎಕ್ಸೆಲ್ ಪಿಯು ಕಾಲೇಜು ರಾಜ್ಯ ಮೆಚ್ಚುವಂತಹ ಸಾಧನೆ ಮಾಡುತ್ತಾ ಬಂದಿದೆ. ಇದು ಸಾಧಕರ ತವರೂರು. ಪ್ರಸ್ತುತ ರಾಜ್ಯಾದ್ಯಂತ ಅನೇಕ ಪ್ರತಿಭಾನ್ವಿತರು ಎಕ್ಸೆಲ್ ಕಾಲೇಜನ್ನು ನಂಬಿದ್ದು ರಾಜ್ಯದ ಜನತೆಯ ನಂಬಿಕಸ್ಥ ಪದವಿ ಪೂರ್ವ ಕಾಲೇಜಾಗಿ ಗುರುತಿಸಿಕೊಂಡಿದೆ. ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡುವ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ನಾವು ಹೃದಯ ತುಂಬಿ ಸನ್ಮಾನಿಸುತ್ತೇವೆ. ಸಾಧಕರನ್ನು ಸನ್ಮಾನಿಸುವುದು ನಮಗೆ ಹೆಮ್ಮೆಯ ವಿಷಯ ಎಂದು ಎಕ್ಸೆಲ್ ಪಿಯು ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಹೇಳಿದರು.
ನೀಟ್ ಸಾಧಕ ಚಿನ್ಮಯ್ ಗೌಡ ಅವರನ್ನು ಸನ್ಮಾನಿಸಿ ಮಾತನಾಡಿ, ಚಿನ್ಮಯ್ ಗೌಡ ನೀಟ್ ಪರೀಕ್ಷೆಯಲ್ಲಿ 720ಕ್ಕೆ 670 ಅಂಕಗಳೊಂದಿಗೆ 99.97 ಪರ್ಸಂಟೈಲ್ ಪಡೆದು ಏಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ತಮ್ಮ ಸ್ಥಾನ ಖಚಿತಪಡಿಸಿಕೊಂಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಚಿನ್ಮಯ್ ಗೌಡ ತಾಯಿ ರಾಗಿಣಿ ಮಾತನಾಡಿ, ಎಕ್ಸೆಲ್ ಮಗನ ಭವಿಷ್ಯಕ್ಕೆ ಭದ್ರಬುನಾದಿ ಹಾಕಿಕೊಟ್ಟಿದೆ. ಅನೇಕ ಮಧ್ಯಮ ವರ್ಗದವರ ಮಕ್ಕಳ ಕನಸುಗಳನ್ನು ಸಂಸ್ಥೆ ನನಸಾಗಿಸುತ್ತಿದೆ ಎಂದರು.
ಸನ್ಮಾನ ಸ್ವೀಕರಿಸಿದ ಚಿನ್ಮಯ್ ಗೌಡ ಮಾತನಾಡಿ, ತನ್ನ ಸಾಧನೆಗೆ ಬೆಂಗಾವಲಾಗಿನಿಂತ ಸುಮಂತ್ ಕುಮಾರ್, ಪ್ರಾಂಶುಪಾಲ ಪ್ರಜ್ವಲ್, ಬೋಧಕ-ಬೋಧಕೇತರ ಸಿಬ್ಬಂದಿಯ ಪ್ರೋತ್ಸಾಹ ಮತ್ತು ಮಾರ್ಗದರ್ಶನ ಮರೆಯಲಾಗದ್ದು ಎಂದರು.
ಪ್ರಾಂಶುಪಾಲ ಡಾ.ಪ್ರಜ್ವಲ್, ಸಂಯೋಜಕರಾದ ನಿಶಾ ಪೂಜಾರಿ, ಶ್ರೀನಿಧಿ, ಆಡಳಿತ ಮಂಡಳಿ ಸದಸ್ಯರಾದ ಸಹನಾ, ಶ್ರುತಿ, ನಿಲಯ ಪಾಲಕರಾದ ಅಭಿಜಿತ್ ಮೊದಲಾದವರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net