ಎಂದಿಗೂ ನೂತನವಾಗಿರಲಿ ಸನಾತನ

ಉಡುಪಿಯಲ್ಲಿ ಆಯೋಜಿಸಿದ್ದ ಹಿಂದೂ ಸಂಗಮ ಕಾರ್ಯಕ್ರಮದ ನಿಮಿತ್ತ ಒಳಕಾಡು ಸರಸ್ಪತಿ ಸಭಾಭವನದಲ್ಲಿ ಶೋಭಾಯಾತ್ರೆಗೆ ಚಾಲನೆ ನೀಡಿದ ಈಶಪ್ರಿಯ ಸ್ವಾಮೀಜಿ ಆಶೀರ್ವಚನ ನೀಡಿದರು. ಮೋಹನಕುಮಾರ್​ ಕೆ., ಅಜಿತ್​ ಕುಡ್ವ, ವೀಣಾ ಶೆಟ್ಟಿ, ರಜಿನಿ ಹೆಬ್ಬಾರ್​, ಮಂಜುನಾಥ್​ ಹೆಬ್ಬಾರ್​, ಶೈಲೇಶ್​ ಇತರರಿದ್ದರು.
ಉಡುಪಿಯಲ್ಲಿ ಆಯೋಜಿಸಿದ್ದ ಹಿಂದೂ ಸಂಗಮ ಕಾರ್ಯಕ್ರಮದ ನಿಮಿತ್ತ ಒಳಕಾಡು ಸರಸ್ಪತಿ ಸಭಾಭವನದಲ್ಲಿ ಶೋಭಾಯಾತ್ರೆಗೆ ಚಾಲನೆ ನೀಡಿದ ಈಶಪ್ರಿಯ ಸ್ವಾಮೀಜಿ ಆಶೀರ್ವಚನ ನೀಡಿದರು. ಮೋಹನಕುಮಾರ್​ ಕೆ., ಅಜಿತ್​ ಕುಡ್ವ, ವೀಣಾ ಶೆಟ್ಟಿ, ರಜಿನಿ ಹೆಬ್ಬಾರ್​, ಮಂಜುನಾಥ್​ ಹೆಬ್ಬಾರ್​, ಶೈಲೇಶ್​ ಇತರರಿದ್ದರು.
Published on

* ಈಶಪ್ರಿಯ ತೀರ್ಥ ಶ್ರೀಪಾದರ ಆಶೀರ್ವಚನ

* ಹಿಂದೂ ಸಂಗಮ ಶೋಭಾಯಾತ್ರೆಗೆ ಚಾಲನೆ

ಉಡುಪಿ: ನಮ್ಮ ಮನೆಯಲ್ಲಿ ಭಜನೆ, ದೇವರ ಸ್ಮರಣೆ, ನಾದ ಕೇಳಿಬಂದಲ್ಲಿ ಮಾತ್ರ ಸನಾತನ ಇರುತ್ತದೆ. ಪ್ರಕೃತಿಯನ್ನು ಪೂಜಿಸಬೇಕು, ಅದರೊಟ್ಟಿಗೆ ಬಾಳಬೇಕು. ಮಕ್ಕಳಿಗೆ ನಮ್ಮ ಸಂಸ್ಕೃತಿ, ಆಚಾರ- ವಿಚಾರ ಕಲಿಸಿಕೊಡಬೇಕು. ಸನಾತನ ಹಿಂದೂ ಧರ್ಮದ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಸನಾತನ ಯಾವಾಗಲೂ ನೂತನವಾಗಿರಬೇಕು ಎಂದು ಅದಮಾರು ಮಠದ ಕಿರಿಯ ಯತಿ ಈಶಪ್ರಿಯ ತೀರ್ಥ ಶ್ರೀಪಾದರು ನುಡಿದರು.
ಹಿಂದು ಸಂಗಮ ಆಯೋಜನಾ ಸಮಿತಿ ಉಡುಪಿ ನಗರ&ರಥಬೀದಿ ವಸತಿ (ಒಳಕಾಡು ವಾರ್ಡ್​  ಮತ್ತು ತೆಂಕಪೇಟೆ ವಾರ್ಡ್​) ವ್ಯಾಪ್ತಿಯ ಶ್ರೀಕೃಷ್ಣ ಮಠದ ಪಾರ್ಕಿಂಗ್​ ಏರಿಯಾದಲ್ಲಿ ಭಾನುವಾರ (ಫೆ.1) ಆಯೋಜಿಸಿದ್ದ ಹಿಂದೂ ಸಂಗಮ ಕಾರ್ಯಕ್ರಮದ ನಿಮಿತ್ತ ಒಳಕಾಡು ಸರಸ್ಪತಿ ಸಭಾಭವನದಲ್ಲಿ ಭಾರತಮಾತೆಯ ಭಾವಚಿತ್ರಕ್ಕೆ ಆರತಿ ಬೆಳಗಿ ಶೋಭಾಯಾತ್ರೆಗೆ ಚಾಲನೆ ನೀಡಿ ಆಶೀರ್ವಚನ ನೀಡಿದರು.

ಇನ್ನಾದರೂ ಒಟ್ಟಾಗೋಣ

ಹಿಂದೂ ಸಮಾಜ ಬಾಂಧವರು ಎಲ್ಲಿಯೇ ಇದ್ದರೂ ಸಹ ಹಿಂದುತ್ವದ ವಿಚಾರವಾಗಿ ಒಗ್ಗೂಡಬೇಕು. ಅದಕ್ಕಾಗಿ ಎಲ್ಲರೂ ಒಟ್ಟಾಗಿ ಕೆಲಸಮಾಡಿ ರಾಮ ರಾಜ್ಯ ನಿರ್ಮಾಣ ಮಾಡೋಣ ಎಂದು ಶುಭ ಹಾರೈಸಿದರು. ಬಳಿಕ ಎಲ್ಲರಿಗೂ ಸಾಮೂಹಿಕ ಶ್ರೀಕೃಷ್ಣಮಂತ್ರ ಬೋಧಿಸಿದರು.
ಸಮಾರಂಭದ ವೇದಿಕೆಯಲ್ಲಿ ಧಾರ್ಮಿಕ ಚಿಂತಕ, ವಕ್ತಾರ ಮೋಹನಕುಮಾರ್​ ಕೆ. ಧರ್ಮ ರಕ್ಷಣೆಯ ಕುರಿತು ಮಾತನಾಡಿದರು. ಯುವ ಉದ್ಯಮಿ ಅಜಿತ್​ ಕುಡ್ವ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಸೇವಕಿ ವೀಣಾ ಶೆಟ್ಟಿ, ರಜಿನಿ ಹೆಬ್ಬಾರ್​, ಸಮಿತಿಯ ಪದಾಧಿಕಾರಿಗಳು, ವಾರ್ಡ್​ನ ಸಮಿತಿಯ ಸದಸ್ಯರು ಉಪಸ್ಥರಿದ್ದರು.

ಗಮನ ಸೆಳೆದ ಶೋಭಾಯಾತ್ರೆ

ಹಿಂದೂ ಸಂಗಮದ ನಿಮಿತ್ತ ಆಯೋಜಿಸಿದ್ದ ಭಾರತಮಾತೆಯ ಶೋಭಾಯಾತ್ರೆ ಗಮನ ಸೆಳೆಯಿತು. ನಾಸಿಕ್​ ಬ್ಯಾಂಡ್​, ಕಲಶ ಹಿಡಿದ ಮಾತೆಯರು, ಮಹಿಳಾ ಚಂಡೆ, ಕುಣಿತ ಭಜನಾ ತಂಡ, ಸಿಂಗಾರಿ ಮೇಳ, ಚಂಡೆ ವಾದನ, ಬೈಕ್​ ಜಾಥಾದೊಂದಿಗೆ ನೂರಾರು ಹಿಂದೂ ಬಾಂಧವರು ಹೆಜ್ಜೆ ಹಾಕಿದರು.
ಶೋಭಾಯಾತ್ರೆಯು ಒಳಕಾಡು ಮುಖ್ಯರಸ್ತೆಯಾಗಿ ಸೌತ್​ ಶಾಲೆ, ತೆಂಕಪೇಟೆಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ, ರಥಬೀದಿ, ವಿದ್ಯೋದಯ ಶಾಲೆ ಮಾರ್ಗವಾಗಿ ಪಾರ್ಕಿಂಗ್​ ಏರಿಯಾದಲ್ಲಿರುವ ಸೇರಿಗಾರ ಗದ್ದೆಯಲ್ಲಿ ಹಿಂದೂ ಸಂಗಮದ ಧಾರ್ಮಿಕ ಸಭೆ ನಡೆಯಿತು. ಮಂಜುನಾಥ್​ ಹೆಬ್ಬಾರ್​ ಸ್ವಾಗತಿಸಿದರು. ಶೈಲೇಶ್​ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net