ಅಡಿಗ ಕಾವ್ಯ ಪ್ರಶಸ್ತಿಗೆ ಕವನ ಸಂಕಲನಗಳಿಗೆ ಆಹ್ವಾನ

ಖ್ಯಾತ ಕವಿ ಕುರಾಡಿ ಸೀತಾರಾಮ ಅಡಿಗ.
ಖ್ಯಾತ ಕವಿ ಕುರಾಡಿ ಸೀತಾರಾಮ ಅಡಿಗ.
Published on

ಕವನ  ಕಳುಹಿಸಲು ಮೇ 20 ಕೊನೆಯ ದಿನ 

ಉಡುಪಿ: ವಿಶ್ವ ಭಾರತಿ ಕರ್ನಾಟಕ ಪ್ರತಿಷ್ಠಾನ ಬೆನಗಲ್​ ಪ್ರಾಯೋಜಿತ ಕವಿ ಕುರಾಡಿ ಸೀತಾರಾಮ ಅಡಿಗರ ಸ್ಮರಣಾರ್ಥ 'ಕುರಾಡಿ ಸೀತಾರಾಮ ಅಡಿಗ ಕಾವ್ಯ ಪ್ರಶಸ್ತಿ'ಗಾಗಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿ ಸಂಸ್ಥೆಯು 2025ರಲ್ಲಿ ಮೊದಲ ಆವೃತ್ತಿಯಲ್ಲಿ ಪ್ರಕಟಗೊಂಡ ಕವನ ಸಂಕಲನಗಳಿಗೆ ಆಹ್ವಾನಿಸಿದೆ. 
ಪ್ರಶಸ್ತಿಯು 10 ಸಾವಿರ ರೂ. ನಗದು ,ಪ್ರಶಸ್ತಿ ಪತ್ರ ಹಾಗೂ ಫಲಕ ಒಳಗೊಂಡಿದೆ. ಅನುವಾದ, ರೂಪಾಂತರ, ಶಿಶುಪ್ರಾಸ, ಹನಿಗವನ ಇತ್ಯಾದಿ ಕೃತಿಗಳನ್ನು ಪರಿಗಣಿಸಲಾಗುವುದಿಲ್ಲ. 
ಆಸಕ್ತರು ತಮ್ಮ ಸ್ವರಚಿತ, ಸ್ವತಂತ್ರ ಕವನ ಸಂಕಲನದ ಮೂರು ಪ್ರತಿಗಳನ್ನು ರವಿರಾಜ್​ ಎಚ್​.ಪಿ., ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿ, ಅಂಶುಮನೆ , ಬುಡ್ನಾರ್​ ರಸ್ತೆ, ಕುಂಜಿಬೆಟ್ಟು ಉಡುಪಿ ಈ ವಿಳಾಸಕ್ಕೆ ಕಳುಹಿಸಬೇಕು. ಕವನ ಸಂಕಲನ ಕಳುಹಿಸಲು ಮೇ 20 ಕೊನೆಯ ದಿನ. ಮಾಹಿತಿಗಾಗಿ ಮೊ.ಸಂ. 9845240309 ಎಂದು ಪ್ರಶಸ್ತಿಯ ಸಂಚಾಲಕಿ ಪೂರ್ಣಿಮಾ ಜನಾರ್ದನ್​ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net