ಸಂದರ್ಶನ ಎದುರಿಸುವ ಕೌಶಲ ಮುಖ್ಯ

 ಬ್ರಹ್ಮಾವರ ಎಸ್‌ಎಂಎಸ್ ಪದವಿ ಕಾಲೇಜು ಸಹಯೋಗದಲ್ಲಿ ಜರುಗಿದ ಉದ್ಯೋಗ ಮಾರ್ಗದರ್ಶನ ಹಾಗೂ ಸಂದರ್ಶನ ತರಬೇತಿ ಕಾರ್ಯಾಗಾರದಲ್ಲಿ ಎಂ.ವಿವೇಕ್ ಆಳ್ವ ಮಾತನಾಡಿದರು. ಪ್ರಮುಖರಾದ ಯಶ್‌ಪಾಲ್ ಸುವರ್ಣ, ಕಿರಣ್ ಕುಮಾರ್ ಕೊಡ್ಗಿ, ರೋಬರ್ಟ್ ರೊಡ್ರಿಗಸ್ ಮೊದಲಾದವರಿದ್ದರು.

Published on
ಬ್ರಹ್ಮಾವರ: ಉತ್ತಮ ಅಂಕ ಪಡೆದರೂ ಉದ್ಯೋಗ ಪಡೆಯಲು ಬೇಕಾದ ಕೌಶಲ ಮತ್ತು ಸಂದರ್ಶನ ಎದುರಿಸುವ ಕೌಶಲ ಇಲ್ಲದೆ ವಾಪಸಾಗುವ ವಿದ್ಯಮಾನ ಗ್ರಾಮೀಣ ಭಾಗದಲ್ಲಿ ಹೆಚ್ಚು. ಆದ್ದರಿಂದ ಈ ಕೌಶಲ ಮೈಗೂಡಿಸಿಕೊಳ್ಳಲು ಶ್ರಮಿಸಬೇಕಿದೆ ಎಂದು ಮೂಡುಬಿದಿರೆ ಆಳ್ವಾಸ್ ಎಜುಕೇಶನ್ ಫೌಂಡೇಶನ್ ವ್ಯವಸ್ಥಾಪಕ ಟ್ರಸ್ಟಿ ಎಂ.ವಿವೇಕ್ ಆಳ್ವ ಹೇಳಿದರು.
ಗಿಳಿಯಾರು ಜನಸೇವಾ ಟ್ರಸ್ಟ್, ಬ್ರಹ್ಮಾವರ ಟೀಂ ಅಭಿಮತ ಹಾಗೂ ಎಸ್‌ಎಂಎಸ್ ಪದವಿ ಕಾಲೇಜು ಸಹಯೋಗದಲ್ಲಿ ಕಾಲೇಜು ಸಭಾಂಗಣದಲ್ಲಿ ಭಾನುವಾರ ಜರುಗಿದ ಉದ್ಯೋಗ ಮಾರ್ಗದರ್ಶನ ಹಾಗೂ ಸಂದರ್ಶನ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಕಾರ್ಯಕ್ರಮ ಉದ್ಘಾಟಿಸಿದರು. ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಪ್ರಿನ್ಸಿಪಾಲ್ ರೋಬರ್ಟ್ ರೊಡ್ರಿಗಸ್ ಉಪಸ್ಥಿತರಿದ್ದರು. ವಿನಾಯಕ ಭಟ್ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net