ಉಡುಪಿಯ ಕುಂಜಿಬೆಟ್ಟುವಿನ ಶಾರದಾ ಪ.ಪೂ. ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು. ಪ್ರವೀಣಕುಮಾರ್, ಅಶ್ವಿನಿ, ಡಾ. ಶಿವಾನಿ, ಯಶಾ ಕೆ.ಎಸ್. ಇತರರಿದ್ದರು.
Published on:
Copied
Follow Us
* ತರಬೇತುದಾರ ಪ್ರವೀಣಕುಮಾರ್ ಅಭಿಪ್ರಾಯ
* ಶಾರದಾ ಪ.ಪೂ. ಕಾಲೇಜಿನಲ್ಲಿಯೋಗ ದಿನ ಆಚರಣೆ
ಉಡುಪಿ: ಭಾರತೀಯ ಯೋಗ ಕಲೆಯನ್ನು ವಿಶ್ವದಾದ್ಯಂತ ಇಂದು ಅನುಸರಿಸಲಾಗುತ್ತಿದೆ. ನಿತ್ಯ ಯೋಗಾಭ್ಯಾಸ ಮಾಡುವುದರಿಂದ ಆರೋಗ್ಯ ವೃದ್ಧಿಯಾಗುವುದಲ್ಲದೆ ಸ್ಥಿರವಾಗಿಯೂ ಇರುತ್ತದೆ. ಬಾಲ್ಯದಿಂದಲೇ ಯೋಗ ಕರಗತ ಮಾಡಿಕೊಂಡರೆ ದೈಹಿಕವಾಗಿಯೂ ಸಬಲರಾಗಿರಲು ಸಾಧ್ಯ ಎಂದು ಈಶಾ ಪ್ರತಿಷ್ಠಾನದ ಯೋಗ ತರಬೇತುದಾರ ಪ್ರವೀಣಕುಮಾರ್ ತಿಳಿಸಿದರು.
ಉಡುಪಿಯ ಕುಂಜಿಬೆಟ್ಟುವಿನ ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ಈಶಾ ಪ್ರತಿಷ್ಠಾನದ ಸಹಕಾರದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದಲ್ಲಿ ಯೋಗಾಭ್ಯಾಸದ ಪ್ರಾಮುಖ್ಯತೆ ಕುರಿತು ಮಾತನಾಡಿದರು.
ಒಂದು ಗಂಟೆಗೂ ಅಧಿಕ ಕಾಲ ಯೋಗ ಪ್ರಾತ್ಯಕ್ಷಿಕೆ ನಡೆಯಿತು. ವಿದ್ಯಾರ್ಥಿಗಳೆಲ್ಲರೂ ಸಂತಸದಿಂದ ಯೋಗಾಭ್ಯಾಸ ಮಾಡಿದರು. ಈಶಾ ಪ್ರತಿಷ್ಠಾನದ ಸ್ವಯಂ ಸೇವಕಿಯರಾದ ಅಶ್ವಿನಿ ಮತ್ತು ಡಾ. ಶಿವಾನಿ ಸಹಕರಿಸಿದರು. ಕಾಲೇಜಿನ ಎಲ್ಲ ಉಪನ್ಯಾಸಕರೂ ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡರು.
ಕಾಲೇಜಿನ ಪ್ರಾಂಶುಪಾಲ ವಿಕ್ರಂ ದೇವಪ್ರಭು, ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಯಶಾ ಕೆ.ಎಸ್. ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ದಾಮೋದರ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಸುಕೇಶ್ ಪೂಜಾರಿ ವಂದಿಸಿದರು.