ಉದ್ಯೋಗಿಯಾಗಿ ದೇಶಕ್ಕೆ ಕೊಡುಗೆ ನೀಡಿ

ಉಡುಪಿಯ ಮಣಿಪಾಲದಲ್ಲಿ ಕೆನರಾ ಬ್ಯಾಂಕ್​ ಮಣಿಪಾಲ ವೃತ್ತ ಕಚೇರಿಯಲ್ಲಿ ಮಹಿಳಾ ದಿನ ಆಚರಿಸಲಾಯಿತು. ಡಾ. ಪಿ. ಆರತಿ ಭಟ್​, ಡಾ.ಮಂಜರಿ ಚಂದ್ರ, ಎಚ್​.ಕೆ. ಗಂಗಾಧರ್​, ಬಿ. ಸುಧಾಕರ್​ ಕೊಠಾರಿ, ಆರ್​. ಕೃಷ್ಣ ಪ್ರಸಾದ್​, ಕಾರ್ತಿಕ್​ ಎಸ್​., ಡಾ. ಶಶಿಕಲಾ ಭಟ್​ ಇತರರಿದ್ದರು.
ಉಡುಪಿಯ ಮಣಿಪಾಲದಲ್ಲಿ ಕೆನರಾ ಬ್ಯಾಂಕ್​ ಮಣಿಪಾಲ ವೃತ್ತ ಕಚೇರಿಯಲ್ಲಿ ಮಹಿಳಾ ದಿನ ಆಚರಿಸಲಾಯಿತು. ಡಾ. ಪಿ. ಆರತಿ ಭಟ್​, ಡಾ.ಮಂಜರಿ ಚಂದ್ರ, ಎಚ್​.ಕೆ. ಗಂಗಾಧರ್​, ಬಿ. ಸುಧಾಕರ್​ ಕೊಠಾರಿ, ಆರ್​. ಕೃಷ್ಣ ಪ್ರಸಾದ್​, ಕಾರ್ತಿಕ್​ ಎಸ್​., ಡಾ. ಶಶಿಕಲಾ ಭಟ್​ ಇತರರಿದ್ದರು.
Published on

* ಪ್ರಾಧ್ಯಾಪಕಿ ಡಾ. ಪಿ. ಆರತಿ ಭಟ್​ ಸಲಹೆ

* ಮಣಿಪಾಲದಲ್ಲಿ ಕೆನರಾ ಬ್ಯಾಂಕ್​ನಿಂದ ಮಹಿಳಾ ದಿನಾಚರಣೆ

ಉಡುಪಿ: ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಲು ಎಲ್ಲ ಕ್ಷೇತ್ರದಲ್ಲೂ ಗುರುತಿಸಿಕೊಳ್ಳಬೇಕು. ಶಿಕ್ಷಣ ಪಡೆದು ಉದ್ಯೋಗ ಅಥವಾ ಸ್ವಯಂ ಉದ್ಯೋಗಿಯಾಗುವ ಮೂಲಕ ದೇಶಕ್ಕೆ ಕೊಡುಗೆ ನೀಡಬೇಕು. ಹೆಣ್ಣಿನ ಯಶಸ್ಸಿನ ಹಿಂದೆ ಗಂಡಿನ ಸಹಕಾರವೂ ಇದೆ. ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಕೆನರಾ ಬ್ಯಾಂಕ್​ ನಿರಂತರ ಸಹಕಾರ ನೀಡುತ್ತಿದೆ. ಆದನ್ನು ಬಳಸಿಕೊಂಡು ಉನ್ನತ ಸ್ಥಾನಮಾನ ಹೊಂದಬೇಕು ಎಂದು ಪ್ರಸನ್ನ ಸ್ಕೂಲ್​ ಆಫ್​ ಪಬ್ಲಿಕ್​ ಹೆಲ್ತ್​ನ ಪ್ರಾಧ್ಯಾಪಕಿ ಡಾ. ಪಿ. ಆರತಿ ಭಟ್​ ಸಲಹೆ ನೀಡಿದರು.
ಉಡುಪಿಯ ಮಣಿಪಾಲದಲ್ಲಿ ಕೆನರಾ ಬ್ಯಾಂಕ್​ ಮಣಿಪಾಲ ವೃತ್ತ ಕಚೇರಿ ವತಿಯಿಂದ ಕೆನರಾ ಬ್ಯಾಂಕ್​ ಗೋಲ್ಡನ್​ ಜುಬಿಲಿ ಸಭಾಂಗಣದಲ್ಲಿ ಶನಿವಾರ (ಮಾ.7) ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಕೆನರಾ ಬ್ಯಾಂಕ್​ನ ಸಂಸ್ಥಾಪಕ ಅಮ್ಮೆಂಬಳ ಸುಬ್ಬರಾವ್​ ಪೈ ಭಾವಚಿತ್ರಕ್ಕೆ ಪುಷ್ಪಾರ್ಚನೆಯೊಂದಿಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಬಿಸಿಎಲ್​ ವೈಸ್​ ಪ್ರಿನ್ಸಿಪಾಲ್​ ಡಾ. ಪೀತಿ ಹರೀಶ್​ ರಾಜ್​ ಮಾತನಾಡಿ, ಮಹಿಳೆಯರು ಜೀವನದಲ್ಲಿ, ಉದ್ಯೋಗದ ಸ್ಥಳದಲ್ಲಿ ಸಾಕಷ್ಟು ಸವಾಲು ಎದುರಿಸುತ್ತಾರೆ. ಭೀತಿಗೆ ಒಳಗಾಗದೇ ಧೈರ್ಯದಿಂದ ಎಲ್ಲವನ್ನೂ ಎದುರಿಸುವ ಮನಸ್ಥಿತಿ ಮೈಗೂಡಿಸಿಕೊಳ್ಳಬೇಕು ಎಂದರು.
ಸೃಷ್ಟಿ ಸ್ಕೂಲ್​ ಆಫ್​ ಡ್ಯಾನ್ಸಸ್​ ಸಂಸ್ಥೆಯ ಸಂಸ್ಥಾಪಕಿ ಡಾ.ಮಂಜರಿ ಚಂದ್ರ ಮಾತನಾಡಿದರು.
ಕೆನರಾ ಬ್ಯಾಂಕ್​ ಮಣಿಪಾಲ ವೃತ್ತ ಕಚೇರಿಯ ಪ್ರಧಾನ ವ್ಯವಸ್ಥಾಪಕ ಎಚ್​.ಕೆ. ಗಂಗಾಧರ್​ ಅಧ್ಯಕ್ಷತೆ ವಹಿಸಿದ್ದರು. ಸೆಂಟ್ರಲ್​ ಪ್ರೊಸೆಸ್ಸಿಂಗ್​ ವರ್ಟಿಕಲ್​ನ ಪ್ರಧಾನ ವ್ಯವಸ್ಥಾಪಕ ಬಿ. ಸುಧಾಕರ್​ ಕೊಠಾರಿ, ಗ್ಲೋಬಲ್​ ಟ್ರೇಡ್​ ಸೆಂಟ್ರಲ್​ ಪ್ರೊಸೆಸ್ಸಿಂಗ್​ ವರ್ಟಿಕಲ್​ನ ಪ್ರಧಾನ ವ್ಯವಸ್ಥಾಪಕ ಆರ್​. ಕೃಷ್ಣಪ್ರಸಾದ್​ ಉಪಸ್ಥಿತರಿದ್ದರು.
ಕಾರ್ತಿಕ್​ ಎಸ್​. ಕಟೀಲು 'ಆತ್ಮರಕ್ಷಣೆ' ಕುರಿತು ತರಬೇತಿ, ಟಿಎಂಎ ಪೈ ಆಸ್ಪತ್ರೆಯ ಹಿರಿಯ ಸ್ತ್ರೀರೋಗ ತಜ್ಞೆ ಡಾ. ಶಶಿಕಲಾ ಭಟ್​ 'ಉತ್ತಮ ಆರೋಗ್ಯ' ಕುರಿತು ಮಾಹಿತಿ ನೀಡಿದರು. ಬ್ಯಾಂಕ್​ನ ಸಿಬ್ಬಂದಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.
ಎಜಿಎಂ ಯು. ರಾಜೇಶ್ವರಿ ಸ್ವಾಗತಿಸಿದರು. ಜಾಕ್ಲಿನ್​ ಎಲೋಶಿಯಸ್​ ವಂದಿಸಿದರು. ಕೆನರಾ ಬ್ಯಾಂಕ್​ನ ಸಿಬ್ಬಂದಿ ಸುಭಾಷಿಣಿ ಹೊಳ್ಳ, ಮೇಘಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net