ಸಾಂಪ್ರದಾಯಿಕ ಉಡುಗೆಗೆ ಅಂತಾರಾಷ್ಟ್ರೀಯ ಘನತೆ

ರಾಮ್‌ರಾಜ್ ಕಾಟನ್‌ನ ನೂತನ ಮಳಿಗೆಯನ್ನು ಜಯರಾಮ ಪ್ರಭು ಹಾಗೂ ಬಿ.ಪ್ರಶಾಂತ್ ಕಾಮತ್ ಉದ್ಘಾಟಿಸಿದರು. ಪ್ರಮುಖರಾದ ಹರಿಪ್ರಕಾಶ್ ಶೆಟ್ಟಿ ಆರ್., ಬಿ.ಪ್ರಶಾಂತ್ ಕಾಮತ್, ಪ್ರಶಾಂತ್ ಕಾಮತ್, ವಿಕ್ರಮ್ ಕಾಮತ್, ರಾಜೇಶ್ ಗಿನ್ನನ್, ಪ್ರಸನ್ನ ಬಿ., ರಾಘವೇಂದ್ರ ಉಪಸ್ಥಿತರಿದ್ದರು.
ರಾಮ್‌ರಾಜ್ ಕಾಟನ್‌ನ ನೂತನ ಮಳಿಗೆಯನ್ನು ಜಯರಾಮ ಪ್ರಭು ಹಾಗೂ ಬಿ.ಪ್ರಶಾಂತ್ ಕಾಮತ್ ಉದ್ಘಾಟಿಸಿದರು. ಪ್ರಮುಖರಾದ ಹರಿಪ್ರಕಾಶ್ ಶೆಟ್ಟಿ ಆರ್., ಬಿ.ಪ್ರಶಾಂತ್ ಕಾಮತ್, ಪ್ರಶಾಂತ್ ಕಾಮತ್, ವಿಕ್ರಮ್ ಕಾಮತ್, ರಾಜೇಶ್ ಗಿನ್ನನ್, ಪ್ರಸನ್ನ ಬಿ., ರಾಘವೇಂದ್ರ ಉಪಸ್ಥಿತರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಕಾರ್ಕಳ
ರಾಮ್‌ರಾಜ್ ಸಂಸ್ಕೃತಿ ಬಿಂಬಿಸುವ ಸಂಸ್ಥೆ. ರಾಮ್‌ರಾಜ್ ಕೇವಲ ಒಂದು ಬ್ರಾಂಡ್ ಅಲ್ಲ, ಇದು ನಮ್ಮ ದೇಶದ ಸಾಂಪ್ರದಾಯಿಕ ಉಡುಗೆಯಾದ ಪಂಚೆ ಮತ್ತು ಕಾಟನ್ ಬಟ್ಟೆಗಳಿಗೆ ಅಂತಾರಾಷ್ಟ್ರೀಯ ಮಟ್ಟದ ಘನತೆ ತಂದುಕೊಟ್ಟ ಸಂಸ್ಥೆ. ಸಾಂಪ್ರದಾಯಿಕ ಉಡುಗೆಗಳಿಗೆ ಹೊಸ ಮೆರುಗು ನೀಡಿದ ರಾಮ್‌ರಾಜ್ ಸಂಸ್ಥೆಯ ಮಳಿಗೆ ಕಾರ್ಕಳದಂತಹ ಸಾಂಸ್ಕೃತಿಕ ನಗರಿಯಲ್ಲಿ ಆರಂಭವಾಗಿರುವುದು ಶ್ಲಾಘನೀಯ ಎಂದು ಕಾರ್ಕಳ ಶ್ರೀ ವೆಂಕಟರಮಣ ದೇವಾಲಯದ ಮ್ಯಾನೇಜಿಂಗ್ ಟ್ರಸ್ಟಿ ಜಯರಾಮ ಪ್ರಭು ಹೇಳಿದರು.
ಕಾರ್ಕಳ ವಿಕಾಸ್ ಟವರ್ಸ್‌ನಲ್ಲಿ ನೂತನವಾಗಿ ಆರಂಭಗೊಂಡ ಗುಣಮಟ್ಟದ ಕಾಟನ್ ಉಡುಪುಗಳಿಗೆ ಹೆಸರುವಾಸಿಯಾದ ದಕ್ಷಿಣ ಭಾರತದ ಪ್ರಸಿದ್ಧ ವಸ್ತ್ರೋದ್ಯಮ ಸಂಸ್ಥೆ ರಾಮ್‌ರಾಜ್ ಕಾಟನ್‌ನ ನೂತನ ಮಳಿಗೆಯನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
ಹೋಟೆಲ್ ಉದ್ಯಮಿ ಹರಿಪ್ರಕಾಶ್ ಶೆಟ್ಟಿ ಆರ್. ಮೊದಲ ಖರೀದಿ ಮಾಡಿ ಮಾತನಾಡಿ, ರಾಮ ನವಮಿ ದಿನದಂತೆ ಆರಂಭವಾದ ಈ ಮಳಿಗೆ ಯಶಸ್ವಿಯಾಗಿ ಮುಂದುವರಿಯಲಿ. ಕಾರ್ಕಳದ ಗ್ರಾಹಕರ ಬೇಡಿಕೆ ಗಮನದಲ್ಲಿಟ್ಟುಕೊಂಡು, ಎಲ್ಲ ವಯೋಮಾನದವರಿಗೂ ಒಪ್ಪುವಂತಹ ಅತ್ಯುತ್ತಮ ಹತ್ತಿ ಬಟ್ಟೆಗಳ ಸಂಗ್ರಹವನ್ನು ಇಲ್ಲಿ ಪರಿಚಯಿಸಿದ್ದು, ಗ್ರಾಹಕರಿಗೆ ಅತ್ಯುತ್ತಮ ಸೇವೆ ಮತ್ತು ನಂಬಿಕಸ್ಥ ಉತ್ಪನ್ನಗಳನ್ನು ನೀಡುವುದೇ ರಾಮ್‌ರಾಜ್‌ನ ಪ್ರಮುಖ ಗುರಿ ಎಂದರು.
ಉದ್ಯಮಿ ಬಿ.ಪ್ರಶಾಂತ್ ಕಾಮತ್ ಮಾತನಾಡಿದರು. ಕಟ್ಟಡದ ಮಾಲೀಕರಾದ ಪ್ರಶಾಂತ್ ಕಾಮತ್, ವಿಕ್ರಮ್ ಕಾಮತ್, ರಾಮ್‌ರಾಜ್ ಸಂಸ್ಥೆ ಜನರಲ್ ಮ್ಯಾನೇಜರ್ ರಾಜೇಶ್ ಗಿನ್ನನ್, ಜೋನಲ್ ಮ್ಯಾನೇಜರ್ ಪ್ರಸನ್ನ ಬಿ., ರಾಘವೇಂದ್ರ, ರಾಮ್ ರಾಜ್ ಸಂಸ್ಥೆ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶ್ವೇತಾ ಎಸ್.ಜೈನ್ ಕಾರ್ಯಕ್ರಮ ನಿರೂಪಿಸಿದರು.

ಸಾಂಪ್ರದಾಯಿಕ ಉಡುಗೆಗಳನ್ನು ನಾಡಿಗೆ ಪರಿಚಯಿಸುವ ಕೆಲಸವಾಗುತ್ತಿದೆ. ಕಾರ್ಕಳದಲ್ಲಿ ಮಳಿಗೆ ಆರಂಭವಾಗಿರುವುದು ಹೆಮ್ಮೆಯ ಸಂಗತಿ. ಇಂದಿನ ಯುವ ಪೀಳಿಗೆ ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿರುವ ಈ ಸಂದರ್ಭದಲ್ಲಿ ಸುಲಭವಾಗಿ ಉಡಬಹುದಾದ ರೆಡಿಮೇಡ್ ಪಂಚೆ ಮತ್ತು ಆಕರ್ಷಕ ವಿನ್ಯಾಸದ ಶರ್ಟ್‌ಗಳ ಮೂಲಕ ಯುವ ಜನರನ್ನು ಮತ್ತೆ ನಮ್ಮ ಪರಂಪರೆಯತ್ತ ಸೆಳೆಯುವಲ್ಲಿ ರಾಮ್‌ರಾಜ್ ಯಶಸ್ವಿಯಾಗಿದೆ. ಸಂಸ್ಥೆ ಅಂತಾರಾಷ್ಟ್ರೀಯಮಟ್ಟದಲ್ಲಿ ಪ್ರಸಿದ್ಧಿ ಪಡೆಯುವಂತಾಗಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net