ಸಕಾಲಿಕ ಚಿಕಿತ್ಸೆಯಿಂದ 'ಬಾಲ್ಯ ಕ್ಯಾನ್ಸರ್​' ವಾಸಿ

ಮಣಿಪಾಲದ ಕೆಎಂಸಿಯಲ್ಲಿ ಅಂತಾರಾಷ್ಟ್ರೀಯ ಬಾಲ್ಯ ಕ್ಯಾನ್ಸರ್​ ದಿನಾಚರಣೆ ಆಚರಿಸಲಾಯಿತು. ಡಾ. ಅನಿಲ್​ ಕೆ. ಭಟ್​, ಡಾ. ವಾಸುದೇವ್​ ಭಟ್​ ಕೆ., ಡಾ. ಅವಿನಾಶ್​ ಶೆಟ್ಟಿ, ಡಾ. ಸುಬಾ ಸೂರಿಯಾ, ಅರ್ಜುನ್​ ಭಂಡಾರ್ಕರ್​, ಡಾ. ನಿಶಾಂತ್​ ಬಿ. ಭಟ್​ ಹಾಗೂ ಕ್ಯಾನ್ಸರ್​ ವಿರುದ್ಧ ಹೋರಾಡುತ್ತಿರುವ ಮಕ್ಕಳು ಉಪಸ್ಥಿತರಿದ್ದರು.
ಮಣಿಪಾಲದ ಕೆಎಂಸಿಯಲ್ಲಿ ಅಂತಾರಾಷ್ಟ್ರೀಯ ಬಾಲ್ಯ ಕ್ಯಾನ್ಸರ್​ ದಿನಾಚರಣೆ ಆಚರಿಸಲಾಯಿತು. ಡಾ. ಅನಿಲ್​ ಕೆ. ಭಟ್​, ಡಾ. ವಾಸುದೇವ್​ ಭಟ್​ ಕೆ., ಡಾ. ಅವಿನಾಶ್​ ಶೆಟ್ಟಿ, ಡಾ. ಸುಬಾ ಸೂರಿಯಾ, ಅರ್ಜುನ್​ ಭಂಡಾರ್ಕರ್​, ಡಾ. ನಿಶಾಂತ್​ ಬಿ. ಭಟ್​ ಹಾಗೂ ಕ್ಯಾನ್ಸರ್​ ವಿರುದ್ಧ ಹೋರಾಡುತ್ತಿರುವ ಮಕ್ಕಳು ಉಪಸ್ಥಿತರಿದ್ದರು.
Published on

* ಡಾ. ವಾಸುದೇವ್​ ಭಟ್​ ಕೆ. ಅಭಿಮತ

* ಕೆಎಂಸಿಯಲ್ಲಿ ಅಂತಾರಾಷ್ಟ್ರೀಯ ದಿನ ಆಚರಣೆ

ಉಡುಪಿ: ಮಕ್ಕಳಿಗೆ 'ಬಾಲ್ಯ ಕ್ಯಾನ್ಸರ್​' ಮಾರಕವಾಗಿ ಕಾಡುತ್ತಿದ್ದು, ಸಕಾಲಕ್ಕೆ ಪತ್ತೆ ಹಚ್ಚಿ ಸೂಕ್ತ ತಂಡದಿಂದ ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡಿದರೆ ಕಾಯಿಲೆ ಸಂಪೂರ್ಣವಾಗಿ ವಾಸಿಯಾಗುತ್ತದೆ ಎಂದು ಕಸ್ತೂರ್ಬಾ ಆಸ್ಪತ್ರೆಯ ಮಕ್ಕಳ ಕ್ಯಾನ್ಸರ್​ ವಿಭಾಗದ ಮುಖ್ಯಸ್ಥ ಡಾ. ವಾಸುದೇವ್​ ಭಟ್​ ಕೆ. ಅಭಿಮತ ವ್ಯಕ್ತಪಡಿಸಿದರು.
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಅಂತಾರಾಷ್ಟ್ರೀಯ ಬಾಲ್ಯ ಕ್ಯಾನ್ಸರ್​ ದಿನಾಚರಣೆ (ಐಸಿಸಿಡಿ) ನಿಮಿತ್ತ ಆಯೋಜಿಸಿದ್ದ 2024-2026ರ ಅವಧಿಯ 'ಇನ್​ಸ್ಪೈರಿಂಗ್​ ಆ್ಯಕ್ಷನ್​' ಎಂಬ ಅಭಿಯಾನದಲ್ಲಿ ಮಾತನಾಡಿದರು.

ಮನರಂಜನಾ ಕಾರ್ಯಕ್ರಮ

ಕ್ಯಾನ್ಸರ್​ ವಿರುದ್ಧ ಹೋರಾಡುತ್ತಿರುವ ಮಕ್ಕಳು, ಅವರ ಪಾಲಕರು ಹಾಗೂ ಕ್ಯಾನ್ಸರ್​ ಗೆದ್ದವರು ಒಟ್ಟಾಗಿ ಸೇರಿ ಜಾಗೃತಿ ಮೂಡಿಸಿದರು. ಧೈರ್ಯಶಾಲಿ ಮಕ್ಕಳಿಗೆ ಬೆಂಬಲ ಸೂಚಿಸಿದರು. ಚಿಕಿತ್ಸೆ ಪಡೆಯುತ್ತಿರುವ ಮಕ್ಕಳು ಹಾಗೂ ಅವರ ಕುಟುಂಬಗಳ ಮನೋಬಲ ಹೆಚ್ಚಿಸಲು ಆಸ್ಪತ್ರೆಯ ಸಿಬ್ಬಂದಿ ಸಹಕಾರದಿಂದ ದಿನಪೂರ್ತಿ ಸಂತೋಷಭರಿತ ವಾತಾವರಣ ನಿರ್ಮಿಸಲಾಗಿತ್ತು. ಹೃದಯಸ್ಪರ್ಶಿ ಮನರಂಜನಾ ಕಾರ್ಯಕ್ರಮದ ಮೂಲಕ ಕ್ಯಾನ್ಸರ್​ ಪೀಡಿತ ಮಕ್ಕಳು ಹಾಗೂ ಅವರ ಕುಟುಂಬಗಳ ಮುಖದಲ್ಲಿ ನಗು ಮೂಡಿಸಲಾಯಿತು. 
ಕೆಎಂಸಿ ಮಣಿಪಾಲದ ಡೀನ್​ ಡಾ. ಅನಿಲ್​ ಕೆ. ಭಟ್​, ಕಸ್ತೂರ್ಬಾ ಆಸ್ಪತ್ರೆಯ  ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್​ ಶೆಟ್ಟಿ, ನರ್ಸಿಂಗ್​ ಮುಖ್ಯಸ್ಥೆ  ಡಾ. ಸುಬಾ ಸೂರಿಯಾ, ಸೇವ್​ ಲೈಫ್​ ಚಾರಿಟೇಬಲ್​ ಟ್ರಸ್ಟ್​ನ ಸಂಸ್ಥಾಪಕ ಅರ್ಜುನ್​ ಭಂಡಾರ್ಕರ್​, ಲಯನ್ಸ್​ ಕ್ಲಬ್​ ಮಣಿಪಾಲದ ಅಧ್ಯಕ್ಷ ಡಾ. ನಿಶಾಂತ್​ ಬಿ. ಭಟ್​ ಉಪಸ್ಥಿತರಿದ್ದರು.
ಅಸ್ಥಿಮಜ್ಜೆ ಕಸಿಯ ನಂತರ ಕ್ಯಾನ್ಸರ್​ನಿಂದ ಗುಣಮುಖರಾದ ಚೈತ್ರಾ ಮತ್ತು ಫರ್ಹಾನಾ ಕಾರ್ಯಕ್ರಮ ನಿರೂಪಿಸಿದರು.
"

ಬಾಲ್ಯ ಕ್ಯಾನ್ಸರ್​ ವಿರುದ್ಧದ ಹೋರಾಟದಲ್ಲಿ ಸಮುದಾಯದ ಪಾತ್ರ ಅತ್ಯಂತ ಮಹತ್ವ. ಕಾಯಿಲೆ ಪೀಡಿತ ಪ್ರತಿ ಮಗುವಿಗೂ ಅಗತ್ಯವಾದ ಸಮಗ್ರ ಚಿಕಿತ್ಸೆ ದೊರೆಯುವಂತೆ ಸಹಕಾರಾತ್ಮಕ ಪ್ರಯತ್ನಗಳ ಅಗತ್ಯತೆಯಿದೆ. ಆ ನಿಟ್ಟಿನಲ್ಲಿ ಅಗತ್ಯವಿರುವ ಮೂಲಸೌಲಭ್ಯ, ಉತ್ತಮ ಚಿಕಿತ್ಸೆ ನೀಡುವಲ್ಲಿ ಕೆಎಂಸಿ ಎಂದಿಗೂ ಬದ್ಧವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net