ಉಪ್ಪಳ: ಸುಪ್ರೀಂ ಕೋರ್ಟ್ ಕೆಲವು ತಿಂಗಳ ಹಿಂದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಪಾದಚಾರಿ ಮಾರ್ಗದ ವಿಷಯದ ಬಗ್ಗೆ ಗಡುವು ನೀಡಿದ ನಂತರವೂ ಕಾಸರಗೋಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಪಾದಚಾರಿ ಮಾರ್ಗ ನಿರ್ಮಾಣ ಸಂಪೂರ್ಣ ಅವೈಜ್ಞಾನಿಕವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ತಲಪ್ಪಾಡಿ-ಚೆಂಗಳ ರೀಚ್‌ನಲ್ಲಿ ರಾ.ಹೆದ್ದಾರಿ ನಿರ್ಮಾಣ ಕಂಪನಿ ನಿರ್ಮಿಸಿದ ಪಾದಚಾರಿ ಮಾರ್ಗದ ಇಂಟರ್‌ಲಾಕ್‌ಗಳು ಭಾರಿ ಮಳೆಗೆ ಮೇಲೆದ್ದು ಬಂದಿವೆ. ಮೊಗ್ರಾಲ್ ಪೇಟೆ ಬಳಿ ಇಂಟರ್‌ಲಾಕ್‌ಗಳು ಕುಸಿದು ದೊಡ್ಡ ರಂಧ್ರಗಳು ನಿರ್ಮಾಣವಾಗಿ ಪಾದಚಾರಿಗಳಿಗೆ ನಡೆದಾಡಲು ಸಮಸ್ಯೆಯಾಗುತ್ತಿದೆ. ಗುತ್ತಿಗೆ ಕಂಪನಿಯ ಕಳಪೆ ಕಾಮಗಾರಿಯೇ ಇದಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.