ಕಡಬ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಬೆಳ್ಳಿಪ್ಪಾಡಿ ರಾಜೇಂದ್ರ ರೈ ವಿಜ್ಞಾನ ಮಾದರಿಗಳನ್ನು ಹಸ್ತಾಂತರಿಸಿದರು. ಪ್ರಮುಖರಾದ ರಾಮ್‌ಕುಮಾರ್, ನಾಗರಾಜ್ ಎನ್.ಕೆ., ಕೆ.ಎಸ್.ದಿನೇಶ್ ಆಚಾರ್ಯ, ಕಿಟ್ಟಣ್ಣ ರೈ, ರೇವತಿ ಮತ್ತಿತರರು ಇದ್ದರು.
ಕಡಬ: ಕುತೂಹಲಗಳೇ ಹಲವು ಸಂಶೋಧನೆಗಳಿಗೆ ಕಾರಣವಾಗಿದೆ. ಅದೇ ರೀತಿ ಮಕ್ಕಳು ಎಳವೆಯಲ್ಲಿಯೇ ವೈಜ್ಞಾನಿಕ ವಿಷಯಗಳ ಬಗ್ಗೆ ಆಸಕ್ತಿ ವಹಿಸಿದಾಗ ಭವಿಷ್ಯದಲ್ಲಿ ಹೆಚ್ಚಿನ ಸಾಧನೆಗಳಿಗೆ ಬುನಾದಿಯಾಗುತ್ತದೆ ಎಂದು ಬ್ಯಾಂಕ್ ಆಫ್ ಬರೋಡ ಸಂಯೋಜಿತ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಕಾರ್ಯದರ್ಶಿ ಬೆಳ್ಳಿಪ್ಪಾಡಿ ರಾಜೇಂದ್ರ ರೈ ಹೇಳಿದರು.
ಕಡಬ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿಜ್ಞಾನ ಪ್ರಯೋಗಾಲಯಕ್ಕೆ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ವತಿಯಿಂದ ನೀಡಲಾದ ವಿಜ್ಞಾನ ಮಾದರಿಗಳನ್ನು ಹಸ್ತಾಂತರಿಸಿ ಮಾತನಾಡಿದರು.
ಎಸ್‌ಡಿಎಂಸಿ ಅಧ್ಯಕ್ಷ ಮಹೇಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ ನಡೆಸಿ ಪ್ರತಿಷ್ಠಾನದಿಂದ ಬಹುಮಾನ ನೀಡಲಾಯಿತು. ರಾಜೇಂದ್ರ ರೈ, ಜ್ಯೋತಿರಾಜ್ ಹಾಗೂ ನಾಗರಾಜ್ ಎನ್.ಕೆ. ಅವರನ್ನು ಗೌರವಿಸಲಾಯಿತು.
ಮುಖ್ಯಶಿಕ್ಷಕ ಆನಂದ ಅಜಿಲ ಸ್ವಾಗತಿಸಿದರು. ಶಿಕ್ಷಕಿ ತೀರ್ಥಾವತಿ ನಿರೂಪಿಸಿದರು. ಶೋಭಾ ಬಿ. ವಂದಿಸಿದರು.