ಸ್ವಉದ್ಯೋಗ ಮಾಡಲು ಆಸಕ್ತಿ ಮುಖ್ಯ

 ಸ್ವಉದ್ಯೋಗ ಪ್ರೇರಣಾ ಶಿಬಿರವನ್ನು ಯೋಜನೆಯ ಬಲ್ನಾಡು ವಲಯದ ಮಾಜಿ ಅಧ್ಯಕ್ಷ ಅಂಬ್ರೋಸ್ ಡಿಸೋಜ ಉದ್ಘಾಟಿಸಿದರು. ಕರುಣಾಕರ್ ಜೈನ್, ಭಾಸ್ಕರ್, ಪ್ರಶಾಂತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಸ್ವಉದ್ಯೋಗ ಪ್ರೇರಣಾ ಶಿಬಿರವನ್ನು ಯೋಜನೆಯ ಬಲ್ನಾಡು ವಲಯದ ಮಾಜಿ ಅಧ್ಯಕ್ಷ ಅಂಬ್ರೋಸ್ ಡಿಸೋಜ ಉದ್ಘಾಟಿಸಿದರು. ಕರುಣಾಕರ್ ಜೈನ್, ಭಾಸ್ಕರ್, ಪ್ರಶಾಂತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
Published on
ಪುತ್ತೂರು ಗ್ರಾಮಾಂತರ: ಸ್ವಉದ್ಯೋಗ ಮಾಡಲು ವಯಸ್ಸು ಸಮಸ್ಯೆ ಇಲ್ಲ. ಮಹಿಳೆಯರು ಕೂಡ ಸ್ವಉದ್ಯೋಗ ಮಾಡುವುದರಿಂದ ಕುಟುಂಬದ ಆರ್ಥಿಕ ಮಟ್ಟ ಎತ್ತರಕ್ಕೆ ಬೆಳೆಯುತ್ತದೆ. ಜತೆಗೆ ಮಹಿಳೆಯರು ಸ್ವಾವಲಂಬಿಗಳಾಗಿರುತ್ತಾರೆ. ಸ್ವಉದ್ಯೋಗ ಮಾಡುವ ಆಸಕ್ತಿ ಬೆಳೆಸಿಕೊಳ್ಳುವುದು ಮುಖ್ಯ ಎಂದು ಉಜಿರೆ ಸಿದ್ಧವನದ ರುಡ್‌ಸೆಟ್ ಸಂಸ್ಥೆ ಹಿರಿಯ ಉಪನ್ಯಾಸಕ ಕರುಣಾಕರ್ ಜೈನ್ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್ ಪುತ್ತೂರು ತಾಲೂಕು ವತಿಯಿಂದ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಭಾನುವಾರ ದೊಡ್ಡಡ್ಕ ಕಾರ್ಯಕ್ಷೇತ್ರದ ಶಿವಾನಿ ಜ್ಞಾನವಿಕಾಸ ಕೇಂದ್ರದಲ್ಲಿ ಸ್ವಉದ್ಯೋಗ ಪ್ರೇರಣಾ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಧರ್ಮಸ್ಥಳ ಯೋಜನೆ ಬಲ್ನಾಡು ವಲಯದ ಮಾಜಿ ಅಧ್ಯಕ್ಷ ಅಂಬ್ರೋಸ್ ಡಿಸೋಜ ಕಾರ್ಯಕ್ರಮ ಉದ್ಘಾಟಿಸಿದರು. ಧರ್ಮಸ್ಥಳ ಯೋಜನೆ ಸ್ವಸಹಾಯ ಸಂಘ ಒಕ್ಕೂಟದ ಅಧ್ಯಕ್ಷ ಭಾಸ್ಕರ್ ಅಧ್ಯಕ್ಷತೆ ವಹಿಸಿದ್ದರು. ಧರ್ಮಸ್ಥಳ ಯೋಜನೆ ಬಲ್ನಾಡು ವಲಯ ಮೇಲ್ವಿಚಾರಕ ಪ್ರಶಾಂತ್ ಕುಮಾರ್ ಉಪಸ್ಥಿತರಿದ್ದರು.
ಸೇವಾ ಪ್ರತಿನಿಧಿಗಳಾದ ಪ್ರಮೀಳಾ ಸ್ವಾಗತಿಸಿದರು. ಉಷಾ ವಂದಿಸಿದರು. ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಕಾವ್ಯಶ್ರೀ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net