ಕಲಿಕೆಯೊಂದಿಗೇ ಅಗತ್ಯ ನಾಯಕತ್ವ ಗುಣ

ಉಡುಪಿಯ ಇಂದ್ರಾಳಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಇಂಟರ್ಯಾಕ್ಟ್​ ಕ್ಲಬ್​ನ ಪದಗ್ರಹಣ ಸಮಾರಂಭವನ್ನು ಕೆ. ಅಣ್ಣಪ್ಪ ಶೆಣೈ ಉದ್ಘಾಟಿಸಿದರು. ಡಾ.ಆಶ್ವಿನ್​ಕುಮಾರ್​,  ಶಶಿರಾಜ್​ ಕುಂದರ್​, ವಿದ್ಯಾ ಅಮರ್​ ಪೈ, ಕೆ. ವಿನಾಯಕ್​ ಕಿಣಿ, ರೇಶ್ಮಾ ಪ್ರಭು, ಸಮರ್ಥರಾಜ್, ರೇಣುಕಾ ಕೆ. ಇದ್ದರು.
ಉಡುಪಿಯ ಇಂದ್ರಾಳಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಇಂಟರ್ಯಾಕ್ಟ್​ ಕ್ಲಬ್​ನ ಪದಗ್ರಹಣ ಸಮಾರಂಭವನ್ನು ಕೆ. ಅಣ್ಣಪ್ಪ ಶೆಣೈ ಉದ್ಘಾಟಿಸಿದರು. ಡಾ.ಆಶ್ವಿನ್​ಕುಮಾರ್​, ಶಶಿರಾಜ್​ ಕುಂದರ್​, ವಿದ್ಯಾ ಅಮರ್​ ಪೈ, ಕೆ. ವಿನಾಯಕ್​ ಕಿಣಿ, ರೇಶ್ಮಾ ಪ್ರಭು, ಸಮರ್ಥರಾಜ್, ರೇಣುಕಾ ಕೆ. ಇದ್ದರು.
Published on

ಉಡುಪಿ ರೋಟರಿ ಅಧ್ಯಕ್ಷ ರೊ. ಗೋಪಾಲಕೃಷ್ಣ ಪ್ರಭು ಅನಿಸಿಕೆ

* ಇಂದ್ರಾಳಿ ಪ್ರೌಢಶಾಲೆಯಲ್ಲಿ ಇಂಟರ್ಯಾಕ್ಟ್​ ಕ್ಲಬ್​ ಪದಗ್ರಹಣ

ಉಡುಪಿ: ಸಮಾಜದಲ್ಲಿ ಧನಾತ್ಮಕ ಬದಲಾವಣೆ ತರುವಲ್ಲಿ ವಿದ್ಯಾರ್ಥಿಗಳ ಪಾತ್ರವೂ ಸಹ ಪ್ರಮುಖ ಆಗಿರುತ್ತದೆ. ದುರ್ವ್ಯಸನಗಳಿಂದ ದೂರವಿದ್ದು, ಓದಿನತ್ತ ಮಾತ್ರ ಗಮನ ಹರಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಕಲಿಕೆಯೊಂದಿಗೇ ನಾಯಕತ್ವದ ಗುಣವನ್ನೂ ಬೆಳೆಸಿಕೊಳ್ಳಬೇಕು ಎಂದು ಉಡುಪಿ ರೋಟರಿ ಅಧ್ಯಕ್ಷ ರೊ. ಗೋಪಾಲಕೃಷ್ಣ ಪ್ರಭು ಸಲಹೆ ನೀಡಿದರು.
ಉಡುಪಿಯ ಇಂದ್ರಾಳಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಗುರುವಾರ (ಜು.3) ಆಯೋಜಿಸಿದ್ದ ಇಂಟರ್ಯಾಕ್ಟ್​ ಕ್ಲಬ್​ನ 2026-27ನೇ ಸಾಲಿನ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.

ಉತ್ತಮ ಪ್ರಜೆಗಳಾಗಿ

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕೆಎಂಸಿಯ ಡಾ.ಆಶ್ವಿನ್​ಕುಮಾರ್​ ಮಾತನಾಡಿ, ಉತ್ತಮ ಸ್ನೇಹಿತರ ಸಹವಾಸದೊಂದಿಗೆ ಆರೋಗ್ಯಪೂರ್ಣ ಜೀವನ ನಡೆಸಬೇಕು. ದೇಶದ ಉತ್ತಮ ಪ್ರಜೆಗಳಾಗಿ ಬಾಳಬೇಕು ಎಂದು ತಿಳಿಸಿ, ಮಾದಕ ವ್ಯಸನಗಳಿಂದಾಗುವ ದುಷ್ಪರಿಣಾಮಗಳ ಕುರಿತು ಮಾಹಿರಿ ನೀಡಿದರು.
ಶಾಲಾ ಸಂಚಾಲಕ ಕೆ. ಅಣ್ಣಪ್ಪ ಶೆಣೈ ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಹಿತವಚನ ನುಡಿದರು. 
ಉಡುಪಿ ಇಂಟರ್ಯಾಕ್ಟ್​ ಚೇರ್ಮನ್​ ಶುಭಲಕ್ಷಿ$್ಮ ಎಸ್​.ಬಿ., ಶಾಲಾ ಆಡೆಳಿತ ಮಂಡಳಿಯ ಸದಸ್ಯೆ ವಿದ್ಯಾ ಅಮರ್​ ಪೈ, ಶಿಕ್ಷಕ&ರಕ್ಷಕ ಸಂಘಾದ ಅಧ್ಯಕ್ಷ ಶಶಿರಾಜ್​ ಕುಂದರ್​, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ರೇಶ್ಮಾ ಪ್ರಭು,  ಇಂಟರ್ಯಾಕ್ಟ್​ ಕ್ಲಬ್​ ಶಾಲಾ ಸಂಯೋಜಕಿ ರೇಣುಕಾ ಕೆ., ರೋಟರಿ ಸದಸ್ಯರು, ಕ್ಲಬ್​ನ ನಿರ್ಗಮಿತ ಅಧ್ಯಕ್ಷ ಅನುಜ್​ ಕಿಣಿ ಉಪಸ್ಥಿತರಿದ್ದರು. 
ವಿದ್ಯಾರ್ಥಿನಿಯರಾದ ಶೃತಿ, ರೀಮಾ, ಕೀರ್ತನಾ, ಶ್ರೀಮಯಿ ಪ್ರಾರ್ಥಿಸಿದರು. ಕ್ಲಬ್​ ನೂತನ ಅಧ್ಯಕ್ಷ ಸಮರ್ಥರಾಜ್​ ಸ್ವಾಗತಿಸಿದರು. ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಕೆ. ವಿನಾಯಕ್​ ಕಿಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷೆ ರೀಮಾ ರಾವ್​ ಸದಸ್ಯರನ್ನು ಪರಿಚಯಿಸಿದರು. ಸಂಜನಾ ಹೆಬ್ಬಾರ್​ ವರದಿ ವಾಚಿಸಿದರು. ಆದ್ಯಾ ಕಾಮತ್​ ವಂದಿಸಿದರು. ಶ್ರೀಪ್ರದಾ ಕಾರ್ಯಕ್ರಮ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net