ದೇವರ ಹೆಸರು ಕೆಡಿಸುವ ಹುನ್ನಾರ

 ಮುದ್ದುಕೃಷ್ಣ-2026 ಉತ್ಸವಕ್ಕೆ ಕುಲಾಲ ಸಂಘ ಅಧ್ಯಕ್ಷ ಅನಿಲ್ ದಾಸ್ ಚಾಲನೆ ನೀಡಿದರು. ಮಂಗಳೂರು ವಿವಿ ನಾರಾಯಣಗುರು ಅಧ್ಯಯನ ಪೀಠದ ಸದಸ್ಯ ಆನಂದ ಕೆ.ಅಸೈಗೋಳಿ, ಮಾಡೂರು ಶ್ರೀ ಅಯ್ಯಪ್ಪ ಮಂದಿರ ಅಧ್ಯಕ್ಷ ಶ್ರೀಧರ್ ಶೆಟ್ಟಿ, ಬೆಲ್ಮ ಗ್ರಾಪಂ ಮಾಜಿ ಅಧ್ಯಕ್ಷೆ ವಿಜಯ ಕೃಷ್ಣಪ್ಪ ಮೊದಲಾದವರು ಉಪಸ್ಥಿತರಿದ್ದರು.
ಮುದ್ದುಕೃಷ್ಣ-2026 ಉತ್ಸವಕ್ಕೆ ಕುಲಾಲ ಸಂಘ ಅಧ್ಯಕ್ಷ ಅನಿಲ್ ದಾಸ್ ಚಾಲನೆ ನೀಡಿದರು. ಮಂಗಳೂರು ವಿವಿ ನಾರಾಯಣಗುರು ಅಧ್ಯಯನ ಪೀಠದ ಸದಸ್ಯ ಆನಂದ ಕೆ.ಅಸೈಗೋಳಿ, ಮಾಡೂರು ಶ್ರೀ ಅಯ್ಯಪ್ಪ ಮಂದಿರ ಅಧ್ಯಕ್ಷ ಶ್ರೀಧರ್ ಶೆಟ್ಟಿ, ಬೆಲ್ಮ ಗ್ರಾಪಂ ಮಾಜಿ ಅಧ್ಯಕ್ಷೆ ವಿಜಯ ಕೃಷ್ಣಪ್ಪ ಮೊದಲಾದವರು ಉಪಸ್ಥಿತರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಶ್ರೀಕೃಷ್ಣ ಎಳೆವೆಯಲ್ಲಿ ಬೆಣ್ಣೆ ಕದ್ದು ತಿಂದಿದ್ದು ತುಂಟಾಟಿಕೆಯೇ ಹೊರತು ಅದು ಕಳ್ಳತನವಲ್ಲ. 16 ಸಾವಿರ ಹೆಂಡತಿಯರು ಇದ್ದರೆನ್ನುವುದು ತಪ್ಪು, ದೇವರ ಹೆಸರು ಹಾಳುಮಾಡಲು ಮನುಷ್ಯ ಮಾಡಿದ ವ್ಯವಸ್ಥಿತ ಹುನ್ನಾರ ಎಂದು ಮಂಗಳೂರು ವಿವಿ ನಾರಾಯಣಗುರು ಅಧ್ಯಯನ ಪೀಠದ ಸದಸ್ಯ ಆನಂದ ಕೆ.ಅಸೈಗೋಳಿ ಖೇದ ವ್ಯಕ್ತಪಡಿಸಿದರು.
ಮಂಗಳೂರು ಸಮರ್ಪಣಾ ಪರಿವಾರ ಟ್ರಸ್ಟ್, ಮುದ್ದುಕೃಷ್ಣ ಉತ್ಸವ ಸಮಿತಿಯಿಂದ ಕೊಲ್ಯ ಕುಲಾಲ ಮಂದಿರ ಸಭಾಂಗಣದಲ್ಲಿ ಭಾನುವಾರ ನಾಲ್ಕನೇ ವರ್ಷದ ಮುದ್ದುಕೃಷ್ಣ-2026 ಉತ್ಸವದಲ್ಲಿ ಮಾತನಾಡಿದರು.
ಪ್ರಶಾಂತ್ ಉಡುಪ ನೇತೃತ್ವದಲ್ಲಿ ಕೃಷ್ಣಾರಾಧನೆ ನಡೆಯಿತು. ಕೊಲ್ಯ ಕುಲಾಲ ಸಂಘ ಅಧ್ಯಕ್ಷ ಅನಿಲ್ ದಾಸ್ ಉದ್ಘಾಟಿಸಿದರು. ಮಾಡೂರು ಶ್ರೀ ಅಯ್ಯಪ್ಪ ಮಂದಿರ ಅಧ್ಯಕ್ಷ ಶ್ರೀಧರ್ ಶೆಟ್ಟಿ, ಬೆಲ್ಮ ಗ್ರಾಪಂ ಮಾಜಿ ಅಧ್ಯಕ್ಷೆ ವಿಜಯ ಕೃಷ್ಣಪ್ಪ, ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಹರೀಶ್ ಕುಮಾರ್, ಗುತ್ತಿಗೆದಾರ ಆನಂದ ಕೊಂಡಾಣ, ನಿವೃತ್ತ ಪೊಲೀಸ್ ಅಧಿಕಾರಿ ಕೆ.ಕೆ.ಗಟ್ಟಿ, ಪತ್ರಕರ್ತ ವಿದ್ಯಾಧರ್ ಶೆಟ್ಟಿ, ಜಿ.ಪಂ. ಮಾಜಿ ಸದಸ್ಯೆ ಧನಲಕ್ಷ್ಮೀ ಗಟ್ಟಿ, ಮುದ್ದುಕೃಷ್ಣ ಉತ್ಸವ ಸಮಿತಿ ಅಧ್ಯಕ್ಷ ಜೀವನ್ ಕೆ.ಪಿ.ಮಾಡೂರು, ಪ್ರಧಾನ ಕಾರ್ಯದರ್ಶಿ ವಸಂತ್ ಕೋಡಿ ಮಂಜನಾಡಿ, ಸಮರ್ಪಣಾ ಪರಿವಾರ್ ಟ್ರಸ್ಟ್ ಉಪಾಧ್ಯಕ್ಷರಾದ ಎ.ಕೆ.ಬಾಬು, ವಸಂತ ರೈ ಬಿ.ಕೆ., ಕೋಶಾಧಿಕಾರಿ ರಾಮಚಂದ್ರ ಆಚಾರ್ಯ ದೇರಳಕಟ್ಟೆ, ಮಹಿಳಾ ಘಟಕ ಅಧ್ಯಕ್ಷೆ ಲತಾ ಶೆಟ್ಟಿ, ಸ್ಪರ್ಧಾ ಕಾರ್ಯಕ್ರಮದ ಪ್ರಧಾನ ಸಂಚಾಲಕರಾದ ಕುಸುಮಾ ಪ್ರಶಾಂತ್, ಸೌಮ್ಯ ಶಿರ್ಲಾಲ್ ಮೊದಲಾದವರು ಉಪಸ್ಥಿತರಿದ್ದರು. ಸಮರ್ಪಣಾ ಪರಿವಾರ್ ಟ್ರಸ್ಟ್ ಅಧ್ಯಕ್ಷ ಮೋಹನ್ ಶಿರ್ಲಾಲ್ ಸ್ವಾಗತಿಸಿದರು. ವಸಂತ ಕೋಡಿ ವಂದಿಸಿದರು. ಜಗನ್ನಾಥ ಶಿರ್ಲಾಲ್ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net