ಕುಂದಾಪುರ: ಸಾಹಿತ್ಯ ಸಂಗೀತಗಳೆರಡು ಸರಸ್ವತಿ ದೇವಿಯ ಸ್ತನದ್ವಯಗಳು ಎಂಬ ಉಕ್ತಿಯಿದೆ. ಸಾಹಿತ್ಯ ಮತ್ತು ಸಂಗೀತಗಳು ಮೇಳೈಸಿದಾಗ ಮನರಂಜನೆಯೊಂದಿಗೆ ಬೌದ್ಧಿಕ ವಿಕಾಸವೂ ಸಾಧ್ಯವಾಗುವುದು. ಪುರಾತನ ಮತ್ತು ನವೀನ ಕವಿ ಸಾಹಿತ್ಯಗಳ ರಾಗ ಭಾವಪೂರ್ಣ ಓದು ಗಮಕ ಕಲೆಯಾಗಿ ಪರಂಪರೆಯಿಂದ ಬೆಳೆದು ಬಂದಿದೆ. ಯುವ ಜನತೆ ಗಮಕದತ್ತ ಒಲಿದು ಬರಬೇಕು ಎಂದು ಕುಂದಾಪುರ ತಾಲೂಕು ಟಕ ಗಮಕ ಕಲಾಪರಿಷತ್ ಅಧ್ಯಕ್ಷ ಎಚ್.ಸುಜಯೀಂದ್ರ ಹಂದೆ ಹೇಳಿದರು.
ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಗೊಂಬೆ ಮನೆಯಲ್ಲಿ ನಡೆದ ಅಕಾಡೆಮಿಯ ವಾರ್ಷಿಕೋತ್ಸವ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಕೋಟದ ಸು.ವಿ.ಕಾ. ಸಾಂಸ್ಕೃತಿಕ ಸಂಟನೆ ಭಾನುವಾರ ಆಯೋಜಿಸಿದ್ದ ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮದಲ್ಲಿ ವಾತನಾಡಿದರು.
ರಾವಾಂಕ ಕವಿಯ ಹರಿಶ್ಚಂದ್ರ ಚರಿತ್ರೆಯ ವಿರೂಪಾಕ್ಷ ಸಾಕ್ಷಾತ್ಕಾರ ಭಾಗವನ್ನು ಗಮಕಿ ಕಾವ್ಯಾ ಹಂದೆ ವಾಚಿಸಿದರು. ಸುಜಯೀಂದ್ರ ಹಂದೆ ವ್ಯಾಖ್ಯಾನ ಮಾಡಿದರು.
ಗಂಗೊಳ್ಳಿ ಜಿ.ಎಸ್.ವಿ.ಎಸ್. ಅಸೋಸಿಯೇಷನ್ ಅಧ್ಯಕ್ಷ ಡಾ.ಕಾಶೀನಾಥ್ ಪೈ, ಕಲಾ ಸಾಹಿತಿ ಜನಾರ್ದನ ಹಂದೆ, ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಅಧ್ಯಕ್ಷ ಕೊಗ್ಗ ಭಾಸ್ಕರ ಕಾಮತ್, ಸು.ವಿ.ಕಾ.ದ ಅಧ್ಯಕ್ಷೆ ವಿನೀತಾ ಉಪಸ್ಥಿತರಿದ್ದರು.