ಕೆಎಂಸಿಯಲ್ಲಿ ಇಂಟಿಗ್ರೇಟೆಡ್​ ಲಿವರ್​- ಟ್ರಾನ್ಸ್​ಪ್ಲಾಂಟ್​ ಕ್ಲಿನಿಕ್​

ಉಡುಪಿಯ ಮಣಿಪಾಲದಲ್ಲಿರುವ ಕಸ್ತೂರ್ಬಾ ಆಸ್ಪತ್ರೆ.
ಉಡುಪಿಯ ಮಣಿಪಾಲದಲ್ಲಿರುವ ಕಸ್ತೂರ್ಬಾ ಆಸ್ಪತ್ರೆ.
Published on

* ಜ.6ರಂದು ಕಸ್ತೂರ್ಬಾ ಆಸ್ಪತ್ರೆಯಲ್ಲಿ ಆಯೋಜನೆ

ಉಡುಪಿ: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯು ಇಂಟಿಗ್ರೇಟೆಡ್​ ಲಿವರ್​-ಟ್ರಾನ್ಸ್​ಪ್ಲಾಂಟ್​ ಕ್ಲಿನಿಕ್​ ಸೇವೆ ಒದಗಿಸಲು ಸಜ್ಜಾಗಿದ್ದು, ಇದು ಈ ಪ್ರದೇಶದ ರೋಗಿಗಳಿಗೆ ಸುಧಾರಿತ ಚಿಕಿತ್ಸಾ ವಿಧಾನದಲ್ಲಿ ಲಿವರ್​ (ಯಕೃತ್​)ನ ಆರೈಕೆಗೆ ಮೀಸಲಿರಲಿದೆ. ಈ ಸೌಲಭ್ಯವು ಜ.6ರಂದು ಬೆಳಗ್ಗೆ 10ರಿಂದ ಸಂಜೆ 4ರ ವರೆಗೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಲಭ್ಯವಿರಲಿದೆ.
ಬೆಂಗಳೂರಿನ ಓಲ್ಡ್​ ಏರ್​ಪೋರ್ಟ್​ ರಸ್ತೆ ಮಾರ್ಗದಲ್ಲಿರುವ ಮಣಿಪಾಲ ಆಸ್ಪತ್ರೆಯಲ್ಲಿ ಲಿವರ್​ ಟ್ರಾನ್ಸ್​ಪ್ಲಾಂಟ್​ ಸರ್ಜನ್​ ಆಗಿರುವ ಡಾ. ಜಯಂತ್​ ರೆಡ್ಡಿ ಮತ್ತು ಕನ್ಸಲ್ಟೆಂಟ್​ ಹೆಪಟಾಲಜಿಸ್ಟ್​ ಡಾ. ಶ್ರುತಿ ಎಚ್​.ಎಸ್​. ರೆಡ್ಡಿ ಹಾಗೂ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಗ್ಯಾಸ್ಟ್ರೊಎಂಟರಾಲಜಿ ವಿಭಾಗದ ಮುಖ್ಯಸ್ಥ ಪ್ರಾಧ್ಯಾಪಕ ಡಾ. ಗಣೇಶ್​ ಭಟ್​, ಪ್ರಾಧ್ಯಾಪಕ ಡಾ. ಶಿರಣ್​ ಶೆಟ್ಟಿ ನೇತೃತ್ವದಲ್ಲಿ ಈ ಕ್ಲಿನಿಕ್​ ನಡೆಯಲಿದೆ.
ಈ ಕ್ಲಿನಿಕ್​ನಲ್ಲಿ ಕೊಬ್ಬಿನ ಯಕೃತ್​ ಕಾಯಿಲೆ, ದೀರ್ಘಕಾಲದ ಲಿವರ್​ ಸಮಸ್ಯೆ, ಲಿವರ್​ ಸಿರೋಸಿಸ್​, ಕಾಮಾಲೆ, ಅಸ್ಸೈಟ್ಸ್​, ಲಿವರ್​ ಗಡ್ಡೆಗಳು ಅಥವಾ ಕ್ಯಾನ್ಸರ್​, ಲಿವರ್​ ವೈಫಲ್ಯದ ತೊಡಕುಗಳು, ಲಿವರ್​ ಕಸಿ ಮೌಲ್ಯಮಾಪನಕ್ಕೆ ಸಲಹೆ ಪಡೆದವರು, ಲಿವರ್​ ಅಸ್ವಸ್ಥತೆಗಳಿರುವ ಮಕ್ಕಳು, ಲಿವರ್​ ಚಿಕಿತ್ಸೆಯ ನಂತರ ಅಥವಾ ಕಸಿ ನಂತರ ಮೇಲ್ವಿಚಾರಣೆ ಅಗತ್ಯವಿರುವ ರೋಗಿಗಳು ಪ್ರಯೋಜನ ಪಡೆಬಹುದಾಗಿದೆ. 

ನೋಂದಣಿ ಕಡ್ಡಾಯ

ಕ್ಲಿನಿಕ್​ಗೆ ಬರುವ ರೋಗಿಗಳು ಕಡ್ಡಾಯವಾಗಿ ಮೊದಲೇ ಹೆಸರು ನೋಂದಾಯಿಸಬೇಕಿದೆ. ವಿಚಾರಣೆಗಾಗಿ ಮೊ.ಸಂ. 6364469750 ಕರೆ ಮಾಡಬಹುದು. ಅಥವಾ www.khmanipal.comಗೆ ಭೇಟಿ ನೀಡುವಂತೆ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.
"

ಕರಾವಳಿ ಕರ್ನಾಟಕ, ಉಡುಪಿ, ದಕ್ಷಿಣ ಕನ್ನಡ ಮತ್ತು ನೆರೆಯ ಜಿಲ್ಲೆಗಳಲ್ಲಿ ಲಿವರ್​ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಈ ಕ್ಲಿನಿಕ್​ ವಿಶೇಷ ಆರೈಕೆ ಒದಗಿಸಲಿದೆ. ಆರಂಭಿಕ ರೋಗನಿರ್ಣಯ, ಸಕಾಲಿಕ ಚಿಕಿತ್ಸೆ ಮತ್ತು ತಡೆರಹಿತ ದೀರ್ಘಕಾಲೀನ ಆರೈಕೆ ಬೆಂಬಲಿಸುವ ಗುರಿ ಹೊಂದಿದೆ. ಮೊದಲ ಬಾರಿಗೆ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಲಿವರ್​ ಕಸಿ ಮೌಲ್ಯಮಾಪನ, ಚಿಕಿತ್ಸಾ ಯೋಜನೆ ಮತ್ತು ರಚನಾತ್ಮಕ ಅನುಸರಣೆ ಸೇರಿದಂತೆ ಲಿವರ್​ ಕಸಿ ಸಂಬಂಧಿಸಿ ಸಮಗ್ರ ಸೇವೆ ಲಭ್ಯವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net