ಸೇವಾ ಭದ್ರತೆ ಉದ್ದೇಶದಿಂದ ವಿಮಾ ಸೌಲಭ್ಯ

 ಅಂಚೆ ಆರೋಗ್ಯ ವಿಮೆ ನೋಂದಣಿ ಕಾರ್ಯಕ್ರಮವನ್ನು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿದರು. ಪ್ರಮುಖರಾದ ಸುಬ್ರಹ್ಮಣ್ಯ, ಸಂತೋಷ್ ಕಾಪು, ಅಬ್ದುಲ್ ಹಮೀದ್, ಬಾಲಕೃಷ್ಣ ಪೂಜಾರಿ, ಪುಂಡಲೀಕ ಮರಾಠೆ, ಪ್ರಕಾಶ್ ಆಚಾರ್ಯ ಮತ್ತಿತರರಿದ್ದರು.
ಅಂಚೆ ಆರೋಗ್ಯ ವಿಮೆ ನೋಂದಣಿ ಕಾರ್ಯಕ್ರಮವನ್ನು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿದರು. ಪ್ರಮುಖರಾದ ಸುಬ್ರಹ್ಮಣ್ಯ, ಸಂತೋಷ್ ಕಾಪು, ಅಬ್ದುಲ್ ಹಮೀದ್, ಬಾಲಕೃಷ್ಣ ಪೂಜಾರಿ, ಪುಂಡಲೀಕ ಮರಾಠೆ, ಪ್ರಕಾಶ್ ಆಚಾರ್ಯ ಮತ್ತಿತರರಿದ್ದರು.
Published on
ಪಡುಬಿದ್ರಿ: ಸದಾ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಛಾಯಾಗ್ರಾಹಕರು ಹಾಗೂ ಪತ್ರಕರ್ತರು ಆರೋಗ್ಯ ಸುರಕ್ಷತೆ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ಕಾಪು ತಾಲೂಕಿನ ಎರಡೂ ಸಂಸ್ಥೆಗಳ ಸದಸ್ಯರ ಸೇವಾ ಗುಣಗಳನ್ನು ಗಮನದಲ್ಲಿರಿಸಿಕೊಂಡು, ಸೇವಾ ಭದ್ರತೆಯ ಉದ್ದೇಶದಿಂದ ಗುರ್ಮೆ ಫೌಂಡೇಷನ್ ಮೂಲಕ ನಿರಂತರವಾಗಿ ಅಂಚೆ ವಿಮಾ ಸೌಲಭ್ಯ ಒದಗಿಸುವುದಾಗಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ಶಾಸಕರ ನೇತೃತ್ವದ ಗುರ್ಮೆ ಫೌಂಡೇಷನ್ ಕಳತ್ತೂರು ವತಿಯಿಂದ ಕಾಪು ವಲಯ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಮತ್ತು ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ಉಚಿತ ಅಂಚೆ ಆರೋಗ್ಯ ವಿಮಾ ಸೌಲಭ್ಯಕ್ಕಾಗಿ ನೋಂದಣಿ ಹಾಗೂ ಕಾರ್ಡ್ ವಿತರಣಾ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ಅಂಚೆ ಇಲಾಖೆ ಪ್ರತಿನಿಧಿ ಸುಬ್ರಹ್ಮಣ್ಯ ಉಡುಪಿ, ಅಂಚೆ ಇಲಾಖೆ ವಿವಿಧ ಉಳಿತಾಯ ಹಾಗೂ ವಿಮಾ ಯೋಜನೆಗಳ ಕುರಿತು ವಿವರ ಮಾಹಿತಿ ನೀಡಿದರು. ಅಂಚೆ ವಿಮಾ ನೋಂದಣಿ ಮಾಡಿಕೊಂಡ ಸದಸ್ಯರಿಗೆ ಸಾಂಕೇತಿಕವಾಗಿ ಕಾರ್ಡ್ ವಿತರಿಸಲಾಯಿತು. ವಿಮಾ ಸೌಲಭ್ಯದ ಪ್ರಾಯೋಜಕತ್ವ ವಹಿಸಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಬ್ದುಲ್ ಹಮೀದ್, ಕಾರ್ಯದರ್ಶಿ ಪುಂಡಲೀಕ ಮರಾಠೆ, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಕಾಪು ವಲಯದ ಗೌರವಾಧ್ಯಕ್ಷ ಬಾಲಕೃಷ್ಣ ಪೂಜಾರಿ, ಜಿಲ್ಲಾ ಛಾಯಾ ಕಾರ್ಯದರ್ಶಿ ರಾಜೇಶ್ ಶಂಕರಪುರ, ಉಪಾಧ್ಯಕ್ಷರಾದ ಸಂತೋಷ್ ಕಟಪಾಡಿ, ದೀಪಕ್ ಶೆಣೈ, ಕಾರ್ಯದರ್ಶಿ ಪ್ರಕಾಶ್ ಆಚಾರ್ಯ, ಕೋಶಾಧಿಕಾರಿ ಕಿರಣ್ ಕಾಪು ಉಪಸ್ಥಿತರಿದ್ದರು.
ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಕಾಪು ವಲಯದ ಅಧ್ಯಕ್ಷ ಸಂತೋಷ್ ಕಾಪು ಸ್ವಾಗತಿಸಿದರು. ಪ್ರವೀಣ್ ಕುರ್ಕಾಲು ಪರಿಚಯಿಸಿದರು. ಛಾಯಾ ಪ್ರತಿನಿಧಿ ವೀರೇಂದ್ರ ಪೂಜಾರಿ ಶಿರ್ವ ವಂದಿಸಿದರು. ಪತ್ರಕರ್ತ ರಾಕೇಶ್ ಕುಂಜೂರು ಕಾರ್ಯಕ್ರಮ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net