ಎಸ್.ಬಿ.ಐ. ಮುಖ್ಯ ವ್ಯವಸ್ಥಾಪಕ ಕೀಳಂಜೆ ಕೃಷ್ಣರಾಜ ಭಟ್, ಮಲ್ಪೆ ಶಾಖೆಯ ಮೆನೇಜರ್ ರಾಜೇಶ್ ಗಂಗೊಳ್ಳಿ, ಅಧಿಕಾರಿಗಳಾದ ಶ್ರೀನಿವಾಸ್, ಪ್ರಣವ್ ಪೈ , ತನ್ಮಯ್ ಉಪಸ್ಥಿತರಿದ್ದರು. 2023-24ನೇ ಸಾಲಿನಲ್ಲಿ ಸಿ.ಎಸ್.ಪಿ. ಜಿಲ್ಲಾ ನಿಯಂತ್ರಣ ಕೊಠಡಿ, ಉಡುಪಿ ಘಟಕದಲ್ಲಿ ಕರ್ತವ್ಯ ನಿರ್ವಹಿಸಿದ್ದ ಅರ್ಜುನ ನೆಲ್ಲೂರ ಹಾವೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದರು.