ವಾಣಿಜ್ಯ ಮಳಿಗೆಗಳಲ್ಲಿ ಅಗ್ನಿಶಾಮಕ ಸಾಧನ ಅಳವಡಿಕೆಗೆ ಸೂಚನೆ

ಸಿಟಿ ಬಸ್​ ನಿಲ್ದಾಣ ಬಳಿ ಭಾನುವಾರ ಸಂಭವಿಸಿದ ಅಗ್ನಿ ದುರಂತ ಸ್ಥಳಕ್ಕೆ ಶಾಸಕ ಯಶ್ಪಾಲ್​ ಸುವರ್ಣ ಭೇಟಿ ನೀಡಿದರು.
ಸಿಟಿ ಬಸ್​ ನಿಲ್ದಾಣ ಬಳಿ ಭಾನುವಾರ ಸಂಭವಿಸಿದ ಅಗ್ನಿ ದುರಂತ ಸ್ಥಳಕ್ಕೆ ಶಾಸಕ ಯಶ್ಪಾಲ್​ ಸುವರ್ಣ ಭೇಟಿ ನೀಡಿದರು.
Published on
ಉಡುಪಿ: ನಗರದ ಮೊಬೈಲ್​ ಮತ್ತು ಚಪ್ಪಲಿ ಅಂಗಡಿಗಳಂತಹ ವಾಣಿಜ್ಯ ಮಳಿಗೆಗಳಲ್ಲಿ ಅಗ್ನಿ ಅವಘಡಗಳನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಎಲ್ಲಾ ಅಂಗಡಿ ಮಾಲೀಕರಿಗೆ ಅಗ್ನಿಶಾಮಕ ಸಾಧನಗಳ ಬಳಕೆ ಬಗ್ಗೆ ತರಬೇತಿ ನೀಡುವುದರ ಜೊತೆಗೆ ಅಗ್ನಿಶಾಮಕ ಕಿಟ್​ಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಲು ಸೂಚನೆ ನೀಡಲಾಗುವುದು ಎಂದು ಶಾಸಕ ಯಶ್ಪಾಲ್​ ಸುವರ್ಣ ಹೇಳಿದರು.

ಸಿಟಿ ಬಸ್​ ನಿಲ್ದಾಣ ಬಳಿ ಭಾನುವಾರ ಸಂಭವಿಸಿದ ಅಗ್ನಿ ದುರಂತ ಸ್ಥಳಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಅಗ್ನಿಶಾಮಕ ಸೇವೆಗಳನ್ನು ಆಧುನೀಕರಿಸುವ ಮತ್ತು ಸಾರ್ವಜನಿಕ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ. ಪ್ರಸ್ತುತ ಅಗ್ನಿಶಾಮಕ ದಳದಲ್ಲಿರುವ ಸೌಲಭ್ಯಗಳು ತುರ್ತು ಪರಿಸ್ಥಿತಿಗೆ ತಕ್ಕಂತೆ ವೇಗವಾಗಿ ಸ್ಪಂದಿಸಲು ಸಾಕಾಗುತ್ತಿಲ್ಲ. ಹಳೆಯ ವಾಹನಗಳು ಮತ್ತು ಉಪಕರಣಗಳ ಬದಲಿಗೆ, ಹೊಸ ತಂತ್ರಜ್ಞಾನದ ಸುಸಜ್ಜಿತ ಅಗ್ನಿಶಾಮಕ ವಾಹನಗಳ ತುರ್ತು ಅವಶ್ಯಕತೆಯಿದೆ. ಈ ಬಗ್ಗೆ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಗುವುದು. ಬ್ರಹ್ಮಾವರ ಮತ್ತು ಮಣಿಪಾಲದಲ್ಲಿ ಹೊಸ ಅಗ್ನಿಶಾಮಕ ಕೇಂದ್ರಗಳನ್ನು ಸ್ಥಾಪಿಸುವ ಯೋಜನೆ ಜಾರಿಯಲ್ಲಿದೆ. ಮಣಿಪಾಲದ ಕಾಮಗಾರಿ ಈಗಾಗಲೇ ಆರಂಭವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ವರದಿಗೆ ಸೂಚನೆ
ಅಗ್ನಿ ಅವಘಡದಿಂದ ಉಂಟಾದ ನಷ್ಟದ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಸೂಚಿಸಲಾಗಿದೆ. ಸರ್ಕಾರದ ವತಿಯಿಂದ ಗರಿಷ್ಠ ಪರಿಹಾರ ದೊರಕಿಸಲು ಆದ್ಯತೆ ನೀಡಲಾಗುವುದು ಎಂದರು. ಪೌರಾಯುಕ್ತ ಮಹಾಂತೇಶ್​, ಮಾಜಿ ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net