ಸ್ಮಶಾನದಲ್ಲಿ ಮೂರ್ತಿ ಪ್ರತಿಷ್ಠಾಪನೆ ಉತ್ತಮ ಕಾರ್ಯ

ಗಂಗೊಳ್ಳಿಯ ಮಲ್ಯರಬೆಟ್ಟು ಸಾರ್ವಜನಿಕ ಹಿಂದೂ ರುದ್ರಭೂಮಿ ಮುಕ್ತಿ ಧಾಮವನ್ನು ಶಾಸಕ ಗುರುರಾಜ್ ಗಂಟಿಹೊಳೆ ಲೋಕಾರ್ಪಣೆಗೊಳಿಸಿದರು. ಗಂಗೊಳ್ಳಿ ಗ್ರಾಪಂ ಅಧ್ಯಕ್ಷೆ ಜಯಂತಿ ಖಾರ್ವಿ, ಸದಸ್ಯರಾದ ರಾಜೇಂದ್ರ ಶೇರುಗಾರ್, ಚಂದ್ರ ಖಾರ್ವಿ, ಜಯೇಂದ್ರ ಆರ್ಕಾಟಿ, ಮಹೇಶ, ಮಮತಾ ಗಾಣಿಗ, ಅಶ್ವಿನಿ ಖಾರ್ವಿ, ರೇಖಾ ಖಾರ್ವಿ ಇದ್ದರು.
ಗಂಗೊಳ್ಳಿಯ ಮಲ್ಯರಬೆಟ್ಟು ಸಾರ್ವಜನಿಕ ಹಿಂದೂ ರುದ್ರಭೂಮಿ ಮುಕ್ತಿ ಧಾಮವನ್ನು ಶಾಸಕ ಗುರುರಾಜ್ ಗಂಟಿಹೊಳೆ ಲೋಕಾರ್ಪಣೆಗೊಳಿಸಿದರು. ಗಂಗೊಳ್ಳಿ ಗ್ರಾಪಂ ಅಧ್ಯಕ್ಷೆ ಜಯಂತಿ ಖಾರ್ವಿ, ಸದಸ್ಯರಾದ ರಾಜೇಂದ್ರ ಶೇರುಗಾರ್, ಚಂದ್ರ ಖಾರ್ವಿ, ಜಯೇಂದ್ರ ಆರ್ಕಾಟಿ, ಮಹೇಶ, ಮಮತಾ ಗಾಣಿಗ, ಅಶ್ವಿನಿ ಖಾರ್ವಿ, ರೇಖಾ ಖಾರ್ವಿ ಇದ್ದರು.
Published on
ಕುಂದಾಪುರ: ಎಷ್ಟೇ ಶ್ರೀಮಂತಿಕೆ, ಅಹಂಕಾರ ಇದ್ದರೂ, ಸಮಾಜದಲ್ಲಿ ಅತ್ಯುನ್ನತ ಸ್ಥಾನದಲ್ಲಿದ್ದರೂ ಕೊನೆಗೆ ಬರಬೇಕಾದುದು ಸ್ಮಶಾನಕ್ಕೆ. ಸ್ಮಶಾನದ ಬಗ್ಗೆ ಕೆಲವರಿಗೆ ಬೇರೆ ರೀತಿಯ ಭಾವನೆ ಇದ್ದು, ಶಿವನ ಆಲಯ ಇರುವ ಸ್ಮಶಾನವನ್ನು ಅಭಿವೃದ್ಧಿಗೊಳಿಸಿ, ಸಂಪ್ರದಾಯದಂತೆ ಆ ಪವಿತ್ರ ಸ್ಥಳದಲ್ಲಿ ಶಿವನ ಮೂರ್ತಿ ಪ್ರತಿಷ್ಠಾಪಿಸಿರುವುದು ಉತ್ತಮ ಕಾರ್ಯ ಎಂದು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಹೇಳಿದರು.
ಗಂಗೊಳ್ಳಿ ಗ್ರಾಮ ಪಂಚಾಯಿತಿ, ಶಾಸಕರ ಪ್ರದೇಶಾಭಿವೃದ್ಧಿ ನಿಧಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ದಾನಿಗಳ ಸಹಕಾರದಿಂದ ಪುನಃ ನಿರ್ಮಾಣಗೊಂಡ ಗಂಗೊಳ್ಳಿ ಮಲ್ಯರಬೆಟ್ಟು ಸಾರ್ವಜನಿಕ ಹಿಂದೂ ರುದ್ರಭೂಮಿ ಮುಕ್ತಿ ಧಾಮವನ್ನು ಗುರುವಾರ ಲೋಕಾರ್ಪಣೆಗೊಳಿಸಿ, ಶಿವನ ಮೂರ್ತಿಯನ್ನು ಅನಾವರಣಗೊಳಿಸಿ ಮಾತನಾಡಿದರು.
ಪುರೋಹಿತರಾದ ಜಿ.ರವೀಶ್ ಭಟ್ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಜಿ.ರಾಮಪ್ಪ ಖಾರ್ವಿ ದಂಪತಿ ಪಾಲ್ಗೊಂಡಿದ್ದರು. ಗಂಗೊಳ್ಳಿ ಗ್ರಾಪಂ ಅಧ್ಯಕ್ಷೆ ಜಯಂತಿ ಖಾರ್ವಿ, ಸದಸ್ಯರಾದ ರಾಜೇಂದ್ರ ಶೇರುಗಾರ್, ಚಂದ್ರ ಖಾರ್ವಿ, ಜಯೇಂದ್ರ ಆರ್ಕಾಟಿ, ಮಹೇಶ(ಅಯ್ಯಪ್ಪ), ಮಮತಾ ಗಾಣಿಗ, ಅಶ್ವಿನಿ ಖಾರ್ವಿ, ರೇಖಾ ಖಾರ್ವಿ, ನಾಗರತ್ನ ಶೇರುಗಾರ್, ಜನ್ನಿ ಖಾರ್ವಿ, ಶ್ರೀ ಜಟ್ಟಿಗೇಶ್ವರ ಸೇವಾ ಸಮಿತಿ ಅಧ್ಯಕ್ಷ ಯೋಗೀಶ್ ಆರ್ಕಾಟಿ, ರಾಘವೇಂದ್ರ ಖಾರ್ವಿ, ಜನಾರ್ದನ ಖಾರ್ವಿ, ಶಿವಪ್ಪ ಖಾರ್ವಿ, ಮಂಜುನಾಥ ಖಾರ್ವಿ, ಗ್ರಾಪಂ ಮಾಜಿ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ನಾಗಪ್ಪಯ್ಯ ಪಟೇಲ್, ವೀರ ಸಾವರ್ಕರ್ ಬಳಗದ ನವೀನ್ ಗಂಗೊಳ್ಳಿ, ತ್ರಾಸಿ ಗ್ರಾಪಂ ಮಾಜಿ ಅಧ್ಯಕ್ಷ ಮಿಥುನ್ ಎಂ.ಡಿ.ಬಿಜೂರು, ಜಯಂತ್ ಶೇರುಗಾರ್ ಮೊದಲಾದವರು ಉಪಸ್ಥಿತರಿದ್ದರು. ರಾಮಪ್ಪ ಖಾರ್ವಿ ಪ್ರಸ್ತಾವನೆಗೈದರು. ಕಾರ್ತಿಕ್ ಖಾರ್ವಿ ಕಾರ್ಯಕ್ರಮ ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net