ಯಕ್ಷಗಾನ ಕರಾವಳಿಯ ಈ ಶ್ರೀಮಂತ ಕಲೆ ದೇಶವ್ಯಾಪಿ ವಿಸ್ತರಿಸಲು ಇಂದಿನ ಮಕ್ಕಳಿಂದಲೂ ಸಾಧ್ಯ ಎಂದು ತೆಕ್ಕಟ್ಟೆ ಪಿಡಿಒ ಸಂತೋಷ್ ಕುಮಾರ್ ಹೇಳಿದರು.
ತೆಕ್ಕಟ್ಟೆ ಹಯಗ್ರೀವದಲ್ಲಿ ಯಶಸ್ವೀ ಕಲಾವೃಂದ ಹಾಗೂ ತೆಕ್ಕಟ್ಟೆ ಗ್ರಾಮ ಪಂಚಾಯಿತಿ ಅರಿವು ಕೇಂದ್ರದ ಸಹಯೋಗದಲ್ಲಿ 6 ದಿನಗಳ ಕಾಲ ರಜಾರಂಗು-26, ವಿಶೇಷ ಕಾರ್ಯಾಗಾರ ಹಾಗೂ ಮುಖವರ್ಣಿಕೆ ಶಿಬಿರದಲ್ಲಿ ಮೇ 12ರಂದು ಸಂತೋಷ್ ಸಮಾರೋಪದ ನುಡಿಗಳನ್ನಾಡಿದರು.
ಶಿಬಿರದ ನಿರ್ದೇಶಕ ರೋಹಿತ್ ತೀರ್ಥಹಳ್ಳಿ, ಸಂಪನ್ಮೂಲ ವ್ಯಕ್ತಿ ರಾಹುಲ್ ಕೋಟ, ಇಂಜಿನಿಯರ್ ಸುಬ್ರಹ್ಮಣ್ಯ ವೈದ್ಯ ಉಪಸ್ಥಿತರಿದ್ದರು. ಪ್ರಣಮ್ಯ ಸ್ವಾಗತಿಸಿದರು. ರಚಿತ್ ಶೆಟ್ಟಿ ವಂದಿಸಿದರು. ಪವನ್ ಆಚಾರ್ ನಿರೂಪಿಸಿದರು. ಬಳಿಕ ಯಕ್ಷಗಾನ ಮುಖವರ್ಣಿಕೆ ಕಮ್ಮಟ ಮುಂದುವರಿಯಿತು.