ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಪ್ರೇರಣೆ

ಉಜಿರೆಯಲ್ಲಿ ರೈನಥಾನ್ ಓಟಕ್ಕೆ ಶಾಸಕ ಹರೀಶ್ ಪೂಂಜ ಚಾಲನೆ ನೀಡಿದರು. ಅನಿಲ್ ಕುಮಾರ್ ಕೆ., ಡಾ.ಸತೀಶ್ಚಂದ್ರ ಎಸ್., ಶ್ರೀಧರ್ ಕೆ.ವಿ., ರಾಘವೇಂದ್ರ ಪಿದಮೇಲೆ, ಜಗದೀಶ್ ಮುಗಳಿ ಮೊದಲಾದವರಿದ್ದರು.
ಉಜಿರೆಯಲ್ಲಿ ರೈನಥಾನ್ ಓಟಕ್ಕೆ ಶಾಸಕ ಹರೀಶ್ ಪೂಂಜ ಚಾಲನೆ ನೀಡಿದರು. ಅನಿಲ್ ಕುಮಾರ್ ಕೆ., ಡಾ.ಸತೀಶ್ಚಂದ್ರ ಎಸ್., ಶ್ರೀಧರ್ ಕೆ.ವಿ., ರಾಘವೇಂದ್ರ ಪಿದಮೇಲೆ, ಜಗದೀಶ್ ಮುಗಳಿ ಮೊದಲಾದವರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಸಮಾಜದಲ್ಲಿ ಮಾದಕ ವಸ್ತುಗಳ ಸೇವನೆ ಹಾಗೂ ಇತರರಿಗೆ ಪ್ರೇರೇಪಿಸುವುದು ಅಪರಾಧ. ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಯುವಜನತೆ ಸ್ಫೂರ್ತಿಯಾಗಬೇಕು. ಮಳೆಯೊಂದಿಗೆ ಓಟದ ಮೂಲಕ ಮಾನವ ಕುಲಕ್ಕೆ ಮಾರಕವಾದ ಮಾದಕಮುಕ್ತ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಯುವಜನತೆ ಪ್ರೇರಣೆಯಾಗಬೇಕು ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಭಾನುವಾರ ಉಜಿರೆ ಎಸ್‌ಡಿಎಂ ಕಾಲೇಜಿನ ಆವರಣದಲ್ಲಿ, ಮಳೆಗಾಲದ ಅತಿದೊಡ್ಡ ಫಿಟ್ನೆಸ್ ಆಂದೋಲನವಾಗಿ ರೋಟರಿ ಕ್ಲಬ್ ಬೆಳ್ತಂಗಡಿ, ರೋಟರಿ ಬೆಂಗಳೂರು ಇಂದಿರಾನಗರ ಹಾಗೂ ಉಜಿರೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆ, ವಿವಿಧ ಶಿಕ್ಷಣ ಸಂಸ್ಥೆ, ಆರೋಗ್ಯ ಸಂಸ್ಥೆ, ಕಾರ್ಪೊರೇಟ್ ಸಂಸ್ಥೆ ಹಾಗೂ ಸಾಮಾಜಿಕ ಸಂಘಟನೆಗಳ ಸಹಯೋಗದೊಂದಿಗೆ ರೈನಥಾನ್ ಮಳೆಯೊಂದಿಗೆ ಓಟದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಅಂತಾರಾಷ್ಟ್ರೀಯ ರೋಟರಿ ಡಿಸ್ಟ್ರಿಕ್ಟ್ ಗವರ್ನರ್ ಸತೀಶ್ ಬೋಳಾರ್ ಮಾತನಾಡಿ, ಎಲ್ಲರ ಸಹಕಾರದಿಂದ ನಡೆಯುತ್ತಿರುವ ಅರ್ಥಪೂರ್ಣ ಕಾರ್ಯಕ್ರಮ. ಸಮಾಜದಲ್ಲಿ ಮಾದಕ ವ್ಯಸನ ನಿರ್ಮೂಲನೆಯಾಗಬೇಕೆಂದರು.
ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಕೆ. ಪ್ರತಿಜ್ಞಾ ವಿಧಿ ಬೋಧಿಸಿದರು. ಎಸ್‌ಡಿಎಂ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್., ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಶ್ರೀಧರ್ ಕೆ.ವಿ., ಕಾರ್ಯದರ್ಶಿ ರಾಘವೇಂದ್ರ ಪಿದಮೂಲೆ, ಬೆಂಗಳೂರು ಇಂದಿರಾನಗರ ರೋಟರಿ ಕ್ಲಬ್‌ನ ಜಗದೀಶ್ ಮುಗಳಿ, ಪೂರ್ವಾಧ್ಯಕ್ಷೆ ಸುಪ್ರಿಯಾ ಕಂದಾರಿ, ಬೆನಕ ಆಸ್ಪತ್ರೆಯ ಡಾ.ಗೋಪಾಲಕೃಷ್ಣ, ಎಸ್‌ಡಿಎಂ ಕಾಲೇಜು ಪ್ರಾಚಾರ್ಯ ಪ್ರೊ.ವಿಶ್ವನಾಥ ಪಿ., ಉಜಿರೆ ಶ್ರೀ ಜನಾರ್ದನ ದೇವಳ ಆನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ, ಡಿವೈಎಸ್ಪಿ ರೋಹಿಣಿ, ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಕೆ., ಎಕ್ಸೆಲ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಡಾ.ಶಶಿಧರ ಡೋಂಗ್ರೆ, ಮಾಜಿ ವಿ.ಪ. ಸದಸ್ಯ ಪ್ರತಾಪಸಿಂಹ ನಾಯಕ್, ಎಸ್‌ಡಿಎಂ ಆಸ್ಪತ್ರೆಯ ಜನಾರ್ದನ ಎಂ., ರೋಟರಿ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಪ್ರಕಾಶ್ ಪ್ರಭು, ಉದ್ಯಮಿ ಕಿರಣಚಂದ್ರ ಪುಷ್ಪಗಿರಿ, ರಕ್ಷಿತ್ ಶಿವರಾಂ, ಪೀತಾಂಬರ ಹೆರಾಜೆ, ಮೋಹನ ಕುಮಾರ್, ರಾಜೇಶ್ ಪೈ, ಅನಂತ ಭಟ್, ಮೇ.ಜ.ಎಂ.ವಿ.ಭಟ್, ಸೋನಿಯಾ ವರ್ಮಾ, ಪ್ರಮೋದ್ ಕುಮಾರ್, ರಾಘ್ನೇಶ್, ಡಿಡಿಎಫ್‌ನ ರವಿ ಚಕ್ಕಿತ್ತಾಯ, ಎಸ್‌ಡಿಎಂ ಕ್ರೀಡಾ ಸಂಘದ ರಮೇಶ್ ಉಪಸ್ಥಿತರಿದ್ದರು.
ವಿಜೇತರಿಗೆ ಪದಕ ಹಾಗೂ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮ ಸಂಯೋಜಕರಾದ ಪ್ರವೀಣ್ ಗೋರೆ, ಸಂದೇಶ್ ರಾವ್ ಮತ್ತು ತಂಡ ರೈನಥಾನ್ ಯೋಜನೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಪೂರನ್ ವರ್ಮಾ ಸ್ವಾಗತಿಸಿ, ವಕೀಲ ಧನಂಜಯ ರಾವ್ ಬಿ.ಕೆ. ನಿರೂಪಿಸಿ, ವಂದಿಸಿದರು.

5 ಸಾವಿರಕ್ಕೂ ಅಧಿಕ ಮಂದಿ ಭಾಗಿ

ವಿವಿಧ ವಯೋಮಾನದವರಿಗಾಗಿ 4 ಕಿ.ಮೀ ಹಾಗೂ 8 ಕಿ.ಮೀ ವಿಭಾಗಗಳಲ್ಲಿ 5 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಹಿರಿಯ ನಾಗರಿಕರು ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡು ವಿಶೇಷ ಅನುಭವ ಆಸ್ವಾದಿಸಿದರು. ಡಿಡಿಎಫ್ ತಂಡದಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು. ನಿಧನರಾದ ಸಂಗೀತ ಗಾಯಕಿ ಎಸ್.ಜಾನಕಿ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net