ತನ್ನ ಪತಿಗೆ ಸಕಾಲಕ್ಕೆ ಚಿಕಿತ್ಸೆ ಲಭಿಸದ್ದರಿಂದ ಹಾಗೂ 4-5 ಲಕ್ಷ ರೂ. ಇಲ್ಲದ್ದರಿಂದ ಅಸಹಾಯಕಳಾದ ಪತ್ನಿ ಶನಿವಾರ ಮಧ್ಯರಾತ್ರಿಯಲ್ಲಿ ಮತ್ತೆ ವೆನ್ಲಾಕ್ ಆಸ್ಪತ್ರೆಗೆ ಬಂದು, ಪತಿಯನ್ನು ಚಿಕಿತ್ಸೆಗಾಗಿ ದಾಖಲಿಸುವಂತೆ ವಿನಂತಿಸಿದರು. ಆದರೆ, ಕರುಣೆ ತೋರದ ಅಲ್ಲಿನ ವೈದ್ಯರು ಹಾಗೂ ಸಿಬ್ಬಂದಿ ನಿರಾಕರಿಸಿದರು. ಬೆಳಗಿನವರೆಗೆ ಅವಕಾಶ ಕೊಡಿ, ನಾನೊಬ್ಬಳೇ ಇದ್ದೇನೆ. ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ದಯವಿಟ್ಟು ಸ್ಪಂದಿಸಿ ಎಂದರೂ ಯಾರ ಮನಸ್ಸೂ ಕರಗಲಿಲ್ಲ. ಬಳಿಕ ತಡರಾತ್ರಿಯಲ್ಲಿಯೇ ಉಡುಪಿಯ ವಿಶು ಶೆಟ್ಟಿ ಅಂಬಲಪಾಡಿ ಅವರಲ್ಲಿ ಮಹಿಳೆ ನೆರವು ಯಾಚಿಸಿದರು.