ಗ್ರಾಮೀಣ ಪ್ರದೇಶದ ಜನರಿಗೆ ಮೂಲಸೌಕರ್ಯ

ನಡಿಬೆಟ್ಟು ಶ್ರೀ ಧೂಮಾವತಿ ದೈವಸ್ಥಾನದ ರಸ್ತೆ ಅಭಿವೃದ್ಧಿ, ಕಾಂಕ್ರಿಟೀಕರಣ ಕಾಮಗಾರಿಯನ್ನು ಶಾಸಕ ಉಮಾನಾಥ ಎ.ಕೋಟ್ಯಾನ್ ಉದ್ಘಾಟಿಸಿದರು. ಅರ್ಚಕ ಸುಬ್ರಹ್ಮಣ್ಯ ಭಟ್ ದೇಂದಡ್ಕ, ದೈವಸ್ಥಾನ ಆಡಳಿತ ಮೊಕ್ತೇಸರ ದೆಪ್ಪುಣಿ ಗುತ್ತು ಸುಧಾಕರ ಶೆಟ್ಟಿ, ಅರ್ಚಕ ಶೇಖರ ಪೂಜಾರಿ, ಜಗದೀಶ್ ಪ್ರಭು ಪನಿಕೆರೆ ಮೊದಲಾದವರಿದ್ದರು.

Published on
ಮೂಲ್ಕಿ: ಗ್ರಾಮೀಣ ಪ್ರದೇಶದ ಜನರಿಗೆ ಮೂಲಸೌಕರ್ಯ ಕಲ್ಪಿಸುವುದು ಜನಪ್ರತಿನಿಧಿಗಳ ಆದ್ಯ ಕರ್ತವ್ಯವಾಗಿದ್ದು, ಸೂಕ್ತ ರಸ್ತೆಗಳ ನಿರ್ಮಾಣದ ಮೂಲಕ ಗ್ರಾಮವನ್ನು ನಗರಕ್ಕೆ ಸಂಪರ್ಕಗೊಳಿಸಿ ಅಭಿವೃದ್ಧಿಪಡಿಸಲು ಬದ್ಧರಿದ್ದೇವೆ ಎಂದು ಶಾಸಕ ಉಮಾನಾಥ ಎ.ಕೋಟ್ಯಾನ್ ಹೇಳಿದರು.
ಅತಿಕಾರಿಬೆಟ್ಟು ಗ್ರಾಮದ ನಡಿಬೆಟ್ಟು ಶ್ರೀ ಧೂಮಾವತಿ ದೈವಸ್ಥಾನದ ರಸ್ತೆ ಅಭಿವೃದ್ಧಿ, ಕಾಂಕ್ರಿಟೀಕರಣ ಕಾಮಗಾರಿ ಉದ್ಘಾಟಿಸಿ ಮಾತನಾಡಿದರು.
ಅರ್ಚಕ ಸುಬ್ರಹ್ಮಣ್ಯ ಭಟ್ ದೇಂದಡ್ಕ, ದೈವಸ್ಥಾನ ಆಡಳಿತ ಮೊಕ್ತೇಸರ ದೆಪ್ಪುಣಿ ಗುತ್ತು ಸುಧಾಕರ ಶೆಟ್ಟಿ, ಅರ್ಚಕ ಶೇಖರ ಪೂಜಾರಿ, ಜಗದೀಶ್ ಪ್ರಭು ಪನಿಕೆರೆ, ಶಿವಚಂದ್ರ ಶೆಟ್ಟಿ, ರಾಮದಾಸ ಶೆಟ್ಟಿ ಬಾಳಿಕೆ ಮನೆ, ಜನಾನಂದ ಶೆಟ್ಟಿ, ಗಣೇಶ್ ಶೆಟ್ಟಿ ಐಕಳ, ನವೀನ್ ಚಂದ್ರ ಪ್ರಭು ಮೈಲೊಟ್ಟು, ಗಂಗಾಧರ ಶೆಟ್ಟಿ ಬರ್ಕೆ ತೋಟ, ಚೇತನ್ ಶೆಟ್ಟಿ, ರಂಗನಾಥ ಶೆಟ್ಟಿ, ಉದಯ ಅಮೀನ್ ಮಟ್ಟು, ಮೂಲ್ಕಿ ನಪಂ ಮಾಜಿ ಅಧ್ಯಕ್ಷ ಸತೀಶ್ ಅಂಚನ್, ಸುಭಾಷ್ ಶೆಟ್ಟಿ, ಭಾನುಮತಿ ಶೆಟ್ಟಿ ಕಕ್ವಗುತ್ತು, ಅತಿಕಾರಿಬೆಟ್ಟು ಗ್ರಾಪಂ ಮಾಜಿ ಅಧ್ಯಕ್ಷರಾದ ಶಶಿಕಲಾ, ಮನೋಹರ ಕೋಟ್ಯಾನ್, ಮಾಜಿ ಉಪಾಧ್ಯಕ್ಷ ಕಿಶೋರ್ ಶೆಟ್ಟಿ ದೆಪ್ಪುಣಿ ಗುತ್ತು, ಸದಸ್ಯರಾದ ಹರೀಶ್ ಶೆಟ್ಟಿ, ಜಯಕುಮಾರ್ ಮಟ್ಟು, ಗೀತಾ, ಸ್ಥಳೀಯರಾದ ವಿಜಯಕುಮಾರ್ ಶೆಟ್ಟಿ, ಉತ್ತಮ್ ಪೂಜಾರಿ ಮೈಲೊಟ್ಟು, ದಿನೇಶ್ಚಂದ್ರ ಅಜಿಲ, ವಕೀಲ ರವೀಶ್ ಕಾಮತ್, ಸಾಧು ಅಂಚನ್ ಮಟ್ಟು, ಕರುಣಾಕರ ಪೂಜಾರಿ, ಮಾಧವ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net